ತಣ್ಣೀರಿನಲ್ಲಿ ಈಜುವುದರಿಂದ ಋತುಬಂಧದ ಸಮಸ್ಯೆಗೆ ಪರಿಹಾರ; ಹೊಸ ಸಂಶೋಧನೆ ಹೇಳೋದೇನು?

|

Updated on: Jan 29, 2024 | 5:37 PM

ಈ ಸಂಶೋಧನೆಯು 1,114 ಮಹಿಳೆಯರನ್ನು ಸಮೀಕ್ಷೆ ಮಾಡಿತು. ಅವರಲ್ಲಿ 785 ಋತುಬಂಧ ಮಹಿಳೆಯರು ಋತುಬಂಧಕ್ಕೆ ಒಳಗಾಗಿದ್ದರು. ಅವರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ತಣ್ಣೀರಿನಲ್ಲಿ ಈಜುವಿಕೆಯ ಪರಿಣಾಮವನ್ನು ಪರೀಕ್ಷಿಸಲಾಯಿತು.

ತಣ್ಣೀರಿನಲ್ಲಿ ಈಜುವುದರಿಂದ ಋತುಬಂಧದ ಸಮಸ್ಯೆಗೆ ಪರಿಹಾರ; ಹೊಸ ಸಂಶೋಧನೆ ಹೇಳೋದೇನು?
ಸಾಂದರ್ಭಿಕ ಚಿತ್ರ
Follow us on

ಋತುಬಂಧವೆಂಬುದು ಮಹಿಳೆಯರು ಮಧ್ಯವಯಸ್ಸು ದಾಟಿದ ನಂತರ ಉಂಟಾಗುವ ದೈಹಿಕ ಬದಲಾವಣೆಯಾಗಿದೆ. UCL ಸಂಶೋಧಕರ ನೇತೃತ್ವದ ಇತ್ತೀಚಿನ ಅಧ್ಯಯನವು ಋತುಬಂಧಕ್ಕೆ ಒಳಗಾಗುವ ಮಹಿಳೆಯರು ಪ್ರತಿದಿನ ತಣ್ಣೀರಿನಲ್ಲಿ ಈಜುವ ಮೂಲಕ ದೈಹಿಕ ಮತ್ತು ಮಾನಸಿಕ ರೋಗಲಕ್ಷಣಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ಅನುಭವಿಸಬಹುದು ಎಂದು ಕಂಡುಹಿಡಿದಿದೆ.

ಈ ಸಂಶೋಧನೆಯು 1,114 ಮಹಿಳೆಯರನ್ನು ಸಮೀಕ್ಷೆ ಮಾಡಿತು. ಅವರಲ್ಲಿ 785 ಋತುಬಂಧ ಮಹಿಳೆಯರು ಋತುಬಂಧಕ್ಕೆ ಒಳಗಾಗಿದ್ದರು. ಅವರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ತಣ್ಣೀರಿನಲ್ಲಿ ಈಜುವಿಕೆಯ ಪರಿಣಾಮವನ್ನು ಪರೀಕ್ಷಿಸಲಾಯಿತು. ಋತುಬಂಧಕ್ಕೊಳಗಾದ ಮಹಿಳೆಯರು ತಣ್ಣೀರಲ್ಲಿ ಈಜುವ ಮೂಲಕ ಆತಂಕ (46.9%), ಮೂಡ್ ಸ್ವಿಂಗ್ (34.5%) ಮತ್ತು ಹಾಟ್ ಫ್ಲಶ್​ಗಳಲ್ಲಿ (30.3%) ಗಮನಾರ್ಹ ಬೆಳವಣಿಗೆಯನ್ನು ಕಂಡುಕೊಳ್ಳಲಾಗಿದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.

ಇದನ್ನೂ ಓದಿ: ಋತುಬಂಧಕ್ಕೆ ದೇಹವನ್ನು ಸಿದ್ಧಪಡಿಸುವುದು ಹೇಗೆ?

ಈ ಮಹಿಳೆಯರಲ್ಲಿ ಹೆಚ್ಚಿನವರು (63.3%) ತಮ್ಮ ರೋಗಲಕ್ಷಣಗಳನ್ನು ನಿವಾರಿಸಿಕೊಳ್ಳಲು ನಿರ್ದಿಷ್ಟವಾಗಿ ಈಜುವುದರಲ್ಲಿ ತೊಡಗಿದ್ದಾರೆ. ಕೆಲವರು ತಣ್ಣೀರನ್ನು ತಮಗೆ ತಕ್ಷಣದ ಒತ್ತಡ ಮತ್ತು ಆತಂಕ ನಿವಾರಕ ಎಂದು ಹೇಳಿದ್ದಾರೆ. ಋತುಬಂಧದ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ 711 ಮಹಿಳೆಯರಲ್ಲಿ ಅರ್ಧದಷ್ಟು ಜನರು ತಣ್ಣೀರಲ್ಲಿ ಈಜುವುದರಿಂದ ಅವರ ಆತಂಕ (46.7%) ಸುಧಾರಿಸಿದೆ ಎಂದು ವರದಿ ಮಾಡಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ