ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಹೊಸದಾಗಿ ರಾಗಿ ಹಾರ್ಲಿಕ್ಸ್ (Millet Horlicks) ಪರಿಚಯಿಸಿದೆ. ಇದು ಚಾಕೊಲೇಟ್ ಫ್ಲೇವರ್‌ನಲ್ಲಿ ರಾಗಿಯ ಸಂಯೋಜನೆಯಾಗಿದೆ. ಇದನ್ನು ಮೊದಲ ಬಾರಿಗೆ ತಮಿಳುನಾಡಿನಲ್ಲಿ ಪ್ರಾರಂಭಿಸಲಾಗಿದೆ. ಚಾಕೊಲೇಟ್ ಸುವಾಸನೆಯ (Chocolate flavour) ಈ ರಾಗಿ ಹಾರ್ಲಿಕ್ಸ್ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ನ ಧಾನ್ಯಗಳೊಂದಿಗಿನ ಮೊದಲ ಉತ್ಪನ್ನವಾಗಿದೆ. ಇದನ್ನು ರಾಗಿ, ಜೋಳ, ಬಹು ವಿಧಧ ರಾಗಿಗಳಿಂದ ತಯಾರಿಸಲಾಗುತ್ತದೆ. ಈ ಬಹು-ರಾಗಿಗಳು ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್ ಮತ್ತು ಫೈಬರ್‌ನ ನೈಸರ್ಗಿಕ ಮೂಲವಾಗಿದ್ದು, ಬೆಳೆಯುತ್ತಿರುವ ಮಕ್ಕಳಿಗೆ ಪೋಷಣೆಯನ್ನು ನೀಡವಲ್ಲಿ ಸಹಾಯಕವಾಗಿದೆ ಎಂದು ಎಚ್ಯುಎಲ್ ತಿಳಿಸಿದೆ.
ಇದನ್ನೂ ಓದಿ: ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?
ಈ ಹೊಸ ರಾಗಿ ಹಾರ್ಲಿಕ್ಸ್ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಪ್ರತಿಕ್ರಿಯಿಸಿದ ಹೆಚ್‌ಯುಎಲ್‌ನ ಬಿಸಿನೆಸ್ ಹೆಡ್ ಶ್ರೀ ಕೃಷ್ಣನ್ ಸುಂದರಂ “ಆರೋಗ್ಯ ಆಹಾರ ಪಾನೀಯಗಳ ವಿಭಾಗದಲ್ಲಿ ಮಕ್ಕಳಿಗೆ ಈ ರೀತಿಯ ಬಹು ರಾಗಿ ಆಧಾರಿತ ಹಾರ್ಲಿಕ್ಸ್ ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಇದು ಚಾಕೊಲೇಟ್ ಫ್ಲೇವರ್‌ನಲ್ಲಿರುವುದರಿಂದ ಖಂಡಿತವಾಗಿಯೂ ಮಕ್ಕಳು ಇಷ್ಟ ಪಡುತ್ತಾರೆ. ಭಾರತದಲ್ಲಿನ ಅಸಮತೋಲಿತ ಆಹಾರ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯ ಸಮಸ್ಯೆಗಳನ್ನು ಪರಿಹರಿಸುವ ಪೌಷ್ಟಿಕಾಂಶದ ಪರಿಹಾರವನ್ನು ರಚಿಸುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:23 pm, Fri, 24 February 23