Weight Loss Drink: ತೂಕನಷ್ಟಕ್ಕೆ ರಾತ್ರಿ ಮಲಗುವ ಮುನ್ನ ಬಿಸಿ ನೀರಿಗೆ ದಾಲ್ಚಿನ್ನಿ ಹಾಕಿ ಕುಡಿಯಿರಿ 

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2023 | 4:06 PM

Cinnamon Water Benefits: ದೇಹದ ಬೊಜ್ಜು ಅಥವಾ  ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಜನರು  ಪ್ರತಿದಿನ ವ್ಯಾಯಾಮ ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಪಾಲಿಸುತ್ತಾರೆ. ಅದೇ ರೀತಿ ನಿಯಮಿತವಾಗಿ ರಾತ್ರಿ ಮಲಗುವ ಮುನ್ನ ದಾಲ್ಚಿನ್ನಿ ನೀರನ್ನು ಕುಡಿಯುವ ಮೂಲಕ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ಈ ಪಾನೀಯವನ್ನು ಕುಡಿಯುವ ಮೂಲಕ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. 

Weight Loss Drink: ತೂಕನಷ್ಟಕ್ಕೆ ರಾತ್ರಿ ಮಲಗುವ ಮುನ್ನ ಬಿಸಿ ನೀರಿಗೆ ದಾಲ್ಚಿನ್ನಿ ಹಾಕಿ ಕುಡಿಯಿರಿ 
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಜಡ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದಾಗಿ ಹೆಚ್ಚಿನ ಜನರು ಬೊಜ್ಜು ಅಥವಾ ಸ್ಥೂಲಕಾಯತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಹೆಚ್ಚುತ್ತಿರುವ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಲು ವ್ಯಾಯಾಮ ಮತ್ತು ಜಿಮ್ನಲ್ಲಿ ಗಂಟೆಗಟ್ಟಲೇ ಬೆವರಿಳಿಸುತ್ತಾರೆ. ಮತ್ತು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯುವುದು ಅಥವಾ ಕಟ್ಟುನಿಟ್ಟಾದ ಆಹಾರ ಕ್ರಮಗಳನ್ನು ಪಾಲಿಸುತ್ತಾರೆ. ಅದೇ ರೀತಿ ರಾತ್ರಿ ಮಲಗುವ ಮುನ್ನ ದಾಲ್ಚಿನ್ನಿ ನೀರನ್ನು ಕುಡಿಯುವ ಮೂಲಕವೂ ದೇಹ ತೂಕವನ್ನು ನಿಯಂತ್ರಣದಲ್ಲಿಡಬಹುದು.  ಹೌದು ನಿಮ್ಮ ದೇಹ ತೂಕವು ವೇಗವಾಗಿ ಹೆಚ್ಚುತ್ತಿದೆ ಮತ್ತು ನೀವು ಅದನ್ನು ಕಡಿಮೆ ಮಾಡಲು ಬಯಸಿದರೆ, ಬೆಚ್ಚಗಿನ ನೀರಿನಲ್ಲಿ  ದಾಲ್ಚಿನ್ನಿ ಅಥವಾ ಅದರ ಪುಡಿಯನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಅದನ್ನು ಸೇವನೆ ಮಾಡಿ. ಇದರಿಂದ ತೂಕವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲ ಇದರ ನಿಯಮಿತ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯಗಳನ್ನು ಸಹ ಕಡಿಮೆ ಮಾಡಬಹುದು.

ದಾಲ್ಚಿನ್ನಿ ನೀರನ್ನು ತಯಾರಿಸುವುದು ಹೇಗೆ ಮತ್ತು ಇದು ಹೇಗೆ ತೂಕವನ್ನು ಕಡಿಮೆ ಮಾಡಲು ಸಹಕಾರಿ:

ಮೊದಲನೆಯದಾಗಿ 1.5 ಕಪ್ ನೀರನ್ನು ತೆಗೆದುಕೊಂಡು ಅದಕ್ಕೆ ದಾಲ್ಚಿನ್ನಿ ತುಂಡು ಅಥವಾ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ. ಅದು ತಣ್ಣಗಾದಾಗ ಅದನ್ನು ಸೋಸಿ, ಆ ನೀರನ್ನು ಒಂದು ಲೋಟಕ್ಕೆ ವರ್ಗಾಯಿಸಿ, ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ,  ರಾತ್ರಿ ಮಲಗುವ ಮುನ್ನ  ಕುಡಿಯಿರಿ.

ರಾತ್ರಿ ಬಿಸಿ ನೀರಿನಲ್ಲಿ ದಾಲ್ಚಿನ್ನಿ  ಬೆರೆಸಿ ಕುಡಿಯುವುದರಿಂದ ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದ  ತೂಕವನ್ನು ಕಳೆದುಕೊಳ್ಳಲು ಸುಲಭವಾಗುತ್ತದೆ.  ಮತ್ತು ಇದರಲ್ಲಿರುವ  ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಸಹ ತೂಕವನ್ನು ಕಡಿಮೆ ಮಾಡಲು ಬಹಳಷ್ಟು  ಸಹಾಯ ಮಾಡುತ್ತದೆ.  ಅಷ್ಟೇ ಅಲ್ಲದೆ ಇದು ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವು ಮುಂತಾದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಸಹ ಹೋಗಲಾಡಿಸುತ್ತದೆ.

ರಾತ್ರಿ ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಸಿಗುವ ಇತರ ಪ್ರಯೋಜನಗಳು:

ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ:

ದಾಲ್ಚಿನ್ನಿ ಆಂಟಿಆಕ್ಸಿಡೆಂಟ್ ಮತ್ತು ಪಾಲಿಫಿನಾಲ್ ನಂತಹ ಅನೇಕ ಸಂಯುಕ್ತಗಳನ್ನು ಹೊಂದಿದ್ದು, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಇದನ್ನೂ ಓದಿ: ಮಧ್ಯರಾತ್ರಿ ಹಸಿವು ತಡೆಯಲು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ಚರ್ಮದ ಆರೋಗ್ಯಕ್ಕೆ ಒಳ್ಳೆಯದು:

ಮಲಗುವ ಮುನ್ನ ದಾಲ್ಚಿನ್ನಿ ನೀರು ಕುಡಿಯುವುದರಿಂದ ಹೊಳೆಯುವ ಮತ್ತು ಆರೋಗ್ಯಕ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು. ದಾಲ್ಚಿನ್ನಿ ನೀರು ಚರ್ಮದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಮೊಡವೆ ಹಾಗೂ ಇತರೆ ಚರ್ಮ ಸಂಬಂಧಿ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಅಷ್ಟೇ ಅಲ್ಲ ದಾಲ್ಚಿನ್ನಿ ನೀರು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹಗೊಳ್ಳುವ ವಿಷವನ್ನು ಸಹ ತೆಗೆದುಹಾಕಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ:

ದಾಲ್ಚಿನ್ನಿ ನೀರಿನಲ್ಲಿ ಪ್ರೋಆಂಥೋಸಯಾನಿಡಿನ್ ಮತ್ತು ಪಾಲಿಫಿನಾಲ್ ನಂತಹ ಉತ್ಕರ್ಷಣ ನಿರೋಧಕಗಳಿದ್ದು, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಪಾನೀಯ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ.

ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ:

ಮಲಗುವ ಮುನ್ನ ದಾಲ್ಚಿನ್ನಿ ಪಾನೀಯವನ್ನು ಸೇವಿಸುವುದರಿಂದ ಮೆದುಳಿನ ಕಾರ್ಯವು ವರ್ಧಿಸುತ್ತದೆ ಮತ್ತು ಇದು ಸ್ಮರಣಾ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಅಲ್ಝೈಮರ್ ನಂತಹ ಮೆದುಳಿನ ಕಾಯಿಲೆಗಳ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.

ದಾಲ್ಚಿನ್ನಿ ನೀರು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ:

ಮಲಗುವ ಮೊದಲು ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್ ರೋಗವು ಬಾರದಂತೆ ನೋಡಿಕೊಳ್ಳಬಹುದು. ಹೌದು ಇದು ಕ್ಯಾನ್ಸರ್ ವಿರೋಧಿ ಸಂಯುಕ್ತಗಳನ್ನು ಹೊಂದಿದ್ದು, ಅದು ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ