ಮಳೆಗಾಲದಲ್ಲಿ ಮದುವೆಯಾಗುತ್ತಿರುವ ಹೆಣ್ಣುಮಕ್ಕಳಿಗೆ ತಮ್ಮ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಮಳೆಗಾಲದಲ್ಲಿ ತಂಪಾದ ವಾತಾವರಣವು ಹಲವು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮುಖದಲ್ಲಿ ಕಪ್ಪು ಕಲೆಗಳು, ಮೊಡವೆಗಳು ಉಂಟಾಗುತ್ತವೆ. ಮದುವೆಯಲ್ಲಿ ಚೆನ್ನಾಗಿ ಕಾಣಿಸಬೇಕು ಎಂಬುದು ಎಲ್ಲಾ ವಧು-ವರರ ಕನಸಾಗಿರುತ್ತದೆ.
ಸೋಪ್-ಮುಕ್ತ ಕ್ಲೆನ್ಸರ್ ಬಳಕೆ ಮಾಡಿ: ಮುಂಗಾರಿನಲ್ಲಿ ಚರ್ಮವು ಈಗಾಗಲೇ ಸಾಕಷ್ಟು ಎಣ್ಣೆಯನ್ನು ಬಿಡುಗಡೆ ಮಾಡುತ್ತದೆ ಮತ್ತು ಆದ್ದರಿಂದ ಸೋಪ್-ಮುಕ್ತ ಕ್ಲೆನ್ಸರ್ ಅನ್ನು ಬಳಸುವುದು ಚರ್ಮದ ವಿನ್ಯಾಸವನ್ನು ಸಮತೋಲನಗೊಳಿಸಲು ಉತ್ತಮ ಮಾರ್ಗವಾಗಿದೆ.
ಪ್ರತಿ ಬಾರಿ ನಿಮ್ಮ ಮುಖವನ್ನು ತೊಳೆಯುವಾಗ ಚರ್ಮದ ನೈಸರ್ಗಿಕ ತೈಲಗಳನ್ನು ತೆಗೆದುಹಾಕಲು ಕ್ಲೀನರ್ ಬಿಡುವುದಿಲ್ಲ. ಮುಖವನ್ನು ಅತಿಯಾಗಿ ತೊಳೆಯಬೇಡಿ ಎಂದು ಯಾವಾಗಲೂ ನೆನಪಿಡಿ, ಏಕೆಂದರೆ ಇದು ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಗೆ ಕಾರಣವಾಗಬಹುದು ಮತ್ತು ರಂಧ್ರಗಳನ್ನು ಮುಚ್ಚಬಹುದು.
ಸದಾ ಮಾಯ್ಚುರೈಸ್ ಆಗಿಡಿ: ತ್ವಚೆಯನ್ನು ಸದಾ ಮಾಯ್ಚುರೈಸ್ ಆಗಿಡಿ, ನಿಮ್ಮ ಚರ್ಮಕ್ಕೆ ಹೊಂದುವಂತಹ ಮಾಯ್ಚುರೈಸರ್ ಬಳಕೆ ಮಾಡಿ, ಪ್ರತಿ ಬಾರಿ ಮುಖವನ್ನು ತೊಳೆದ ಬಳಿಕವೂ ಮಾಯ್ಚುರೈಸರ್ ಬಳಸಿ.
ಸನ್ಸ್ಕ್ರೀನ್ ಲೋಷನ್: ಹೇಗೂ ಮನೆಯ ಒಳಗೆ ಕಾರ್ಯಕ್ರಮ ನಡೆಯುತ್ತಿದೆ ಸೂರ್ಯನಿಗೆ ಮುಖವೊಡ್ಡಿಕೊಳ್ಳುವುದೇನೂ ಇಲ್ಲ ಎಂದು ಸನ್ಸ್ಕ್ರೀನ್ ಲೋಷನ್ ಬಳಕೆ ಮಾಡುವುದನ್ನು ನಿಲ್ಲಿಸುತ್ತಾರೆ. ಖಂಡಿತವಾಗಿಯೂ ಈ ತಪ್ಪನ್ನು ಮಾಡಬೇಡಿ.
ಹೆಚ್ಚಿನ ಮೇಕ್ಅಪ್ ಮಾಡಬೇಡಿ: ಚೆನ್ನಾಗಿ ಕಾಣಬೇಕು ಎನ್ನುವ ಕಾರಣಕ್ಕೆ ಹೆಚ್ಚಿನ ಮೇಕ್ಅಪ್ ಮಾಡಿ ನಿಮ್ಮ ಚರ್ಮವನ್ನು ಹಾಳು ಮಾಡಿಕೊಳ್ಳಬೇಡಿ.