ಬ್ರೇಕ್ಫಾಸ್ಟ್ನಲ್ಲಿ ಈ ಆಹಾರಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ
ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ಆಹಾರಕ್ರಮಕ್ಕೆ ಹೆಚ್ಚಿನ ಒತ್ತು ನೀಡುವುದು. ನೀವು ಏನು ತಿನ್ನುತ್ತಿದ್ದೀರಿ ಮತ್ತು ಯಾವಾಗ ತಿನ್ನುತ್ತಿದ್ದೀರಿ, ಇವೆರಡೂ ಮುಖ್ಯವಾಗುತ್ತದೆ.
ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ಆಹಾರಕ್ರಮಕ್ಕೆ ಹೆಚ್ಚಿನ ಒತ್ತು ನೀಡುವುದು. ನೀವು ಏನು ತಿನ್ನುತ್ತಿದ್ದೀರಿ ಮತ್ತು ಯಾವಾಗ ತಿನ್ನುತ್ತಿದ್ದೀರಿ, ಇವೆರಡೂ ಮುಖ್ಯವಾಗುತ್ತದೆ. ಕೆಲವೊಮ್ಮೆ ಒಂದೇ ಆಹಾರವನ್ನು ವಿವಿಧ ಸಮಯಗಳಲ್ಲಿ ತೆಗೆದುಕೊಳ್ಳಲಾಗುತ್ತದೆ, ಇದು ಅವರ ದೇಹದ ಮೇಲೆ ವಿಭಿನ್ನ ಪರಿಣಾಮವನ್ನುಂಟು ಮಾಡುತ್ತದೆ.
ಬೆಳಗಿನ ಬ್ರೇಕ್ ಫಾಸ್ಟ್ ತುಂಬಾ ಮುಖ್ಯವಾದದ್ದಾಗಿದೆ. ನೀವು 8-10 ಗಂಟೆಗಳ ಕಾಲ ಉಪವಾಸದ ಬಳಿಕ ಬೆಳಗ್ಗೆ ಏನಾದರೂ ತಿನ್ನುತ್ತೀರಿ ಹಾಗಾಗಿ ಬೆಳಗ್ಗೆಯ ಆಹಾರ ಉತ್ತಮವಾಗಿರಬೇಕು. ಬೆಳಗ್ಗೆ ಎದ್ದ ಬಳಿಕ 40 ನಿಮಿಷಗಳ ಒಳಗೆ ಏನಾದರೂ ತಿನ್ನಬೇಕು
ಎದ್ದ ಬಳಿಕ, ವ್ಯಕ್ತಿಯು ನಲವತ್ತು ನಿಮಿಷಗಳಲ್ಲಿ ಏನನ್ನಾದರೂ ತಿನ್ನಬೇಕು ಎಂದು ಅಧ್ಯಯನ ಹೇಳುತ್ತದೆ. ಇದರಿಂದ ಆಹಾರದ ಚಯಾಪಚಯವು ಉತ್ತಮವಾಗುತ್ತದೆ. ದಿನ ಆರಂಭದಲ್ಲಿ ಸಂಸ್ಕರಿಸಿದ ಆಹಾರಗಳು ಬೇಡ ದಿನದ ಆರಂಭದಲ್ಲಿ ನೀವು ಸಕ್ಕರೆ ಆಹಾರ ಪದಾರ್ಥಗಳು ಅಥವಾ ಹೆಚ್ಚಿನ ಸಂಸ್ಕರಿಸಿದ ಸಕ್ಕರೆ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ವಾಸ್ತವವಾಗಿ, ನೀವು ಬೆಳಗಿನ ಉಪಾಹಾರದಲ್ಲಿ ಸಾಕಷ್ಟು ಸಕ್ಕರೆಯನ್ನು ಸೇವಿಸಿದಾಗ, ನಿಮ್ಮ ತೂಕವನ್ನು ಹೆಚ್ಚಿಸುವ ಸಾಧ್ಯತೆಗಳು ಬಹಳವಾಗಿ ಹೆಚ್ಚಾಗುತ್ತವೆ. ಇದಲ್ಲದೆ, ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಬೆಳಗಿನ ಉಪಾಹಾರಕ್ಕೆ ಸಕ್ಕರೆ ಅಂಶಗಳಿದ್ದರೆ ನೀವು ನಿಮ್ಮ ಆಹಾರದಲ್ಲಿ ಹೆಚ್ಚುವರಿ ಕ್ಯಾಲೊರಿಗಳನ್ನು ಸೇರಿಸುತ್ತಿದ್ದೀರಿ ಎಂದರ್ಥ. ಪ್ಯಾಕ್ನಲ್ಲಿರುವ ಜ್ಯೂಸ್ಗಳ ಸೇವನೆ ಬೇಡ ಆಫೀಸ್ಗೆ ಹೊರಡುವ ಆತುರದಲ್ಲಿ ಜನರು ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ಗಳನ್ನುಕುಡಿಯುತ್ತಾರೆ. ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ ಎಂದುಕೊಂಡಿರುತ್ತಾರೆ. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ.
ಬೆಳಗಿನ ಉಪಾಹಾರ ಹೇಗಿರಬೇಕು? ಬೆಳಗಿನ ಉಪಾಹಾರದಲ್ಲಿ, ನೀವು ಪ್ರೋಟೀನ್ ಮತ್ತು ಫೈಬರ್‌ಗೆ ಸಮಾನ ಗಮನ ನೀಡಬೇಕು ಇದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ ಮತ್ತು ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.
ಪ್ಯಾನ್‌ಕೇಕ್‌ಗಳನ್ನು ತಿನ್ನಬೇಡಿ ಹೆಚ್ಚಿನ ಜನರು ಬೆಳಗಿನ ಉಪಾಹಾರದಲ್ಲಿ ಪ್ಯಾನ್‌ಕೇಕ್‌ಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ವಾಸ್ತವದಲ್ಲಿ ಇದು ಉತ್ತಮ ಉಪಾಹಾರವೆಂದು ಪರಿಗಣಿಸಲು ಸಾಧ್ಯವಿಲ್ಲ. ವಾಸ್ತವವಾಗಿ, ಅವುಗಳನ್ನು ಮೈದಾದಿಂದ ತಯಾರಿಸಲಾಗುತ್ತದೆ.
ಬೆಣ್ಣೆ ಟೋಸ್ಟ್ ತಿನ್ನಬೇಡಿ ಬೆಳಗಿನ ಉಪಾಹಾರಕ್ಕಾಗಿ ಬೆಣ್ಣೆ ಬ್ರೆಡ್ಗಳನ್ನು ತಿನ್ನುವುದು ಸಾಮಾನ್ಯವಾಗಿ ಕಾಣುತ್ತೇವೆ. ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬೆಣ್ಣೆಯಲ್ಲಿ ಕೊಬ್ಬಿನಂಶ ತುಂಬಾ ಹೆಚ್ಚಿದ್ದರೆ, ಬ್ರೆಡ್ ಅನ್ನು ಮೈದಾದಿಂದ ತಯಾರಿಸಲಾಗುತ್ತದೆ.
Published On - 12:44 pm, Sat, 9 July 22