Kannada News Lifestyle Mosquito Repellents: These plants you can grow anywhere at Home to keep Mosquitoes away Lifestyle News in Kannada
Mosquito repellent plants: ಮನೆಯಲ್ಲಿ ಸೊಳ್ಳೆ ಕಾಟವೇ? ಈ ಗಿಡಗಳನ್ನು ನೆಟ್ಟರೆ ಸೊಳ್ಳೆ ನಿಮ್ಮ ಹತ್ತಿರ ಸುಳಿಯುವುದಿಲ್ಲ
ಮಳೆಗಾಲ ಮಾತ್ರವಲ್ಲದೇ ಈ ಬೇಸಿಗೆಯಲ್ಲಿಯು ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ. ರಾತ್ರಿಯಾದರೆ ಸಾಕು, ಕಿವಿ ಬಳಿ ಗುಯಿಂಗುಟ್ಟುತ್ತ ನಿದ್ದೆ ಮಾಡಲು ಕೂಡ ಬಿಡುವುದಿಲ್ಲ. ಸೊಳ್ಳೆಗಳ ಸಂತತಿಯು ವಿಪರೀತವಾದರೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ ಮಲೇರಿಯಾ, ಗುನ್ಯಾದಂಥಹ ಕಾಯಿಲೆಗಳು ಬರುತ್ತವೆ. ಹೀಗಾಗಿ ನಮ್ಮ ಆರೋಗ್ಯವನ್ನು ರಕ್ಷಿಸಲು ಸೊಳ್ಳೆ ಕಾಟದಿಂದ ಮನೆಯ ಸುತ್ತ ಇಂತಹ ಗಿಡಗಳನ್ನು ನೆಡುವುದು ಉತ್ತಮ.
Follow us on
ಸೊಳ್ಳೆ ಏನಾದರೂ ಕಚ್ಚಿ ಬಿಟ್ಟರೆ ಆ ಜಾಗವು ಊದಿಕೊಂಡು ತುರಿಕೆ ಆರಂಭವಾಗಿ ಚರ್ಮದ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಹೆಚ್ಚಿನವರು ಸೊಳ್ಳೆ ಪರದೆ, ಕಾಯಿಲ್, ಕ್ರೀಮ್ ಹೀಗೆ ನಾನಾ ರೀತಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಮನೆಯ ಸುತ್ತ ಮುತ್ತ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ನಿಮ್ಮ ಹತ್ತಿರವೇ ಸುಳಿಯುವುದಿಲ್ಲ.
ಸೊಳ್ಳೆಗಳನ್ನು ಓಡಿಸಲು ಸುಲಭ ಉಪಾಯವೆಂದರೆ ಮನೆಯ ಸುತ್ತ ಮುತ್ತ ತುಳಸಿ ಮತ್ತು ಪುದೀನ ಸಸ್ಯವನ್ನು ನೆಡುವುದು. ಈ ಸಸ್ಯದ ಎಲೆಯಲ್ಲಿರುವ ಪರಿಮಳದಿಂದ ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಬರುವುದಿಲ್ಲ.
ರೋಸರಿ ಸಸ್ಯ ವನ್ನು ಮನೆಯ ಹಾಸುಮಾಸಿನಲ್ಲಿ ನೆಡುವುದರಿಂದ ಸೊಳ್ಳೆಗಳು ಬರುವುದಿಲ್ಲ. ಇದರ ಪರಿಮಳಯುಕ್ತವಾದ ಸುವಾಸನೆಗೆ ಈ ಸೊಳ್ಳೆಗಳು ಹಾಗೂ ಕೀಟಗಳು ದೂರ ಓಡುತ್ತವೆ.
ಲ್ಯಾವೆಂಡರ್ ಸಸ್ಯವು ಕೂಡ ಸೊಳ್ಳೆಗಳ ಕಾಟಕ್ಕೆ ಪ್ರಯೋಜನಕಾರಿಯಾಗಿದೆ. ಈ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಪರಿಮಳದಿಂದ ಸೊಳ್ಳೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದಾಗಿದೆ.
ಮನೆಯ ಮುಂದೆ ಚೆಂಡು ಹೂವಿನ ಸಸ್ಯವನ್ನು ನೆಡುವುದರಿಂದ ನೋಡುವುದಕ್ಕೆ ಸುಂದರವಾಗಿ ಕಾಣುವುದಲ್ಲದೇ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು. ಈ ಹೂವಿನ ಸುವಾಸನೆಯು ಸೊಳ್ಳೆಗಳಿಗೆ ತೊಂದರೆ ಉಂಟುಮಾಡಿ ಅವುಗಳನ್ನು ಓಡಿಸುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ