Akshaya Tritiya 2024: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು?

Akshaya Tritiya Festival 2024: ಧರ್ಮ ಮತ್ತು ಚಿನ್ನದ ಖರೀದಿಗೆ ಕೊಂಡಿ ಬೆಸೆದಿರುವ ಏಕೈಕ ದೇಶ ಭಾರತ. ಚಿನ್ನ ಅಮೂಲ್ಯವಾದ ಲೋಹವಾಗಿದ್ದು, ಇದನ್ನು ವಿವಿಧ ಧಾರ್ಮಿಕ ಅಂಶಗಳಲ್ಲಿ ಬಳಸಲಾಗುತ್ತದೆ. ಆದರೆ ಚಿನ್ನವನ್ನು ಖರೀದಿಸಲು ಅಕ್ಷಯ ತೃತೀಯ ಸರಿಯಾದ ಸಮಯ ಎಂದು ಏಕೆ ಪರಿಗಣಿಸಲಾಗುತ್ತದೆ? ಎಂಬುದಕ್ಕೆ ಕೆಲವು ಜನಪ್ರಿಯ ಕಾರಣಗಳು ಇಲ್ಲಿವೆ.

Akshaya Tritiya 2024: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು?
ಅಕ್ಷಯ ತೃತೀಯ Image Credit source: istock
Follow us
|

Updated on: May 09, 2024 | 5:48 PM

ಅಕ್ಷಯ ತೃತೀಯದಂದು (Akshaya Tritiya) ಸೂರ್ಯ ಮತ್ತು ಚಂದ್ರರು ಪ್ರಕಾಶಮಾನವಾಗಿರುತ್ತಾರೆ ಎಂದು ಹಿಂದೂಗಳು (Hindu) ನಂಬುತ್ತಾರೆ. ಇದು ವರ್ಷದ ಅಪರೂಪದ ದಿನವಾಗಿದೆ ಮತ್ತು ಈ ದಿನ ಬಹಳ ಅದೃಷ್ಟವನ್ನು ತರುತ್ತದೆ. ಆದ್ದರಿಂದ, ಈ ದಿನದಂದು ಚಿನ್ನವನ್ನು (Gold) ಖರೀದಿಸುವುದು ಕುಟುಂಬ ಅಥವಾ ವ್ಯವಹಾರಕ್ಕೆ ಅದೃಷ್ಟದ ಸಂಕೇತವಾಗಿದೆ. ಅಕ್ಷಯ ತೃತೀಯದ ದಿನ ಅನೇಕ ಜನರು ಚಿನ್ನದ ನಾಣ್ಯಗಳು ಅಥವಾ ಆಭರಣಗಳನ್ನು ಖರೀದಿಸುತ್ತಾರೆ. ಚಿನ್ನವನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಚಿನ್ನದ ಗ್ರಾಹಕ ಎಂದು ನಿಮಗೆ ತಿಳಿದಿದೆಯೇ? ಕಳೆದ ಒಂದು ದಶಕದಲ್ಲಿ ಭಾರತದ ಸರಾಸರಿ ಚಿನ್ನದ ಬೇಡಿಕೆ 800 ಟನ್‌ಗಳಿಗಿಂತ ಹೆಚ್ಚಿದೆ. ಈ ಹೆಚ್ಚಿನ ಬೇಡಿಕೆಗೆ ಭಾರತೀಯರಿಗೆ ಚಿನ್ನದ ಮೇಲಿರುವ ಅಪಾರ ಪ್ರೀತಿಯೇ ಕಾರಣ. ಸಾಮಾನ್ಯವಾಗಿ ಭಾರತೀಯರು ಎಲ್ಲಾ ರೀತಿಯ ಹಬ್ಬ, ಸಂಭ್ರಮ, ಸಮಾರಂಭ, ಆಚರಣೆಗಳಿಗೆ ಚಿನ್ನವನ್ನು ಖರೀದಿಸುತ್ತಾರೆ. ಚಿನ್ನವನ್ನು ಖರೀದಿಸಲು ವಿಶೇಷವಾಗಿ ಮಂಗಳಕರವಾದ ಒಂದು ಹಬ್ಬವೆಂದರೆ ಅಕ್ಷಯ ತೃತೀಯ. ಅಕ್ಷಯ ತೃತೀಯದ ದಿನ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವುದು ದೀರ್ಘಾವಧಿಯ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಅಕ್ಷಯ ತೃತೀಯವು ಮೊದಲ ಯುಗದ ಆರಂಭವನ್ನು ಸೂಚಿಸುತ್ತದೆ. ಈ ದಿನದಂದು ಶ್ರೀಕೃಷ್ಣನು ದ್ರೌಪದಿಗೆ ಪತ್ರವನ್ನು (ಎಲೆ) ನೀಡಿದನೆಂದು ನಂಬಲಾಗಿದೆ. ಹಾಗೇ, ಅಕ್ಷಯ ತೃತೀಯದಂದು ಚಂದ್ರನ ಮತ್ತು ಎಲ್ಲಾ ಗ್ರಹಗಳ ಅಧಿಪತಿ ಎಂದು ಪರಿಗಣಿಸಲ್ಪಟ್ಟಿರುವ ಸೂರ್ಯನು ತನ್ನ ಉತ್ತುಂಗದ ಕಾಂತಿಯಲ್ಲಿರುತ್ತಾನೆ ಎಂದು ನಂಬಲಾಗಿದೆ. ಈ ದಿನ ಇತರರಿಗಿಂತ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುವುದರಿಂದ, ಹೊಸ ಕೆಲಸ ಆರಂಭಿಸಲು, ಶುಭ ಕಾರ್ಯಗಳನ್ನು ನಡೆಸಲು ಇದು ಉತ್ತಮವಾದ ದಿನ.

ಇದನ್ನೂ ಓದಿ: Akshaya Tritiya 2024 Date: ಅಕ್ಷಯ ತೃತೀಯದಂದು ಇರುವ ಶುಭ ಸಮಯ, ದಿನದ ಮಹತ್ವ, ಇತಿಹಾಸದ ಇಲ್ಲಿದೆ

ಹಿಂದೂ ಪುರಾಣಗಳ ಪ್ರಕಾರ, ಅಕ್ಷಯ ತೃತೀಯ ಗಂಗೆ ಸ್ವರ್ಗದಿಂದ ಭೂಮಿಗೆ ಇಳಿದು ಬಂದ ದಿನ. ಹಾಗೇ, ಅನ್ನಪೂರ್ಣ ದೇವತೆಯು ಅಕ್ಷಯ ತೃತೀಯದಂದು ಜನಿಸಿದಳು ಎಂದು ನಂಬಲಾಗಿದೆ. ‘ಅಕ್ಷಯ’ ಎಂದರೆ ‘ಎಂದಿಗೂ ಕಡಿಮೆಯಾಗುವುದಿಲ್ಲ’ ಎಂದರ್ಥ. ಈ ಹಬ್ಬದಂದು ಚಿನ್ನವನ್ನು ಖರೀದಿಸಿದರೆ ನಮ್ಮ ಸಂಪತ್ತು ಹೇರಳವಾಗುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯವನ್ನು ಮಂಗಳಕರವೆಂದು ಪರಿಗಣಿಸುವುದರಿಂದ ಅನೇಕ ಜನರು ಈ ದಿನ ಹೊಸ ಉದ್ಯಮಗಳನ್ನು ಪ್ರಾರಂಭಿಸುತ್ತಾರೆ. ಈ ದಿನದಂದು ಅಮೂಲ್ಯವಾದ ಲೋಹಗಳನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಹಲವರು ನಂಬುತ್ತಾರೆ.

ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದು ಅತ್ಯಂತ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಮ್ಮ ಜೀವನದಲ್ಲಿ ಶಾಶ್ವತವಾದ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

ಅಕ್ಷಯ ತೃತೀಯದಲ್ಲಿ ಚಿನ್ನವನ್ನು ಖರೀದಿಸುವ ಅಭ್ಯಾಸವು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಇದು ಹಲವು ತಲೆಮಾರುಗಳಿಂದ ನಡೆದುಬಂದಿದೆ. ಚಿನ್ನವನ್ನು ಯಾವಾಗಲೂ ಭಾರತದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಭದ್ರತೆಯ ಸಂಕೇತವೆಂದು ಪೂಜಿಸಲಾಗುತ್ತದೆ.

ಒಟ್ಟಾರೆಯಾಗಿ ಅಕ್ಷಯ ತೃತೀಯ ಒಂದು ಮಂಗಳಕರ ದಿನ. ಹಿಂದೂ ಸಂಪ್ರದಾಯದ ಪ್ರಕಾರ, ಈ ದಿನದ 24 ಗಂಟೆಗಳ ಪ್ರತಿ ಕ್ಷಣವೂ ಪ್ರತಿಯೊಂದು ಕೆಲಸಕ್ಕೂ ಒಳ್ಳೆಯದು. ಆದ್ದರಿಂದ, ಚಿನ್ನದ ನಾಣ್ಯಗಳನ್ನು ಖರೀದಿಸುವುದು ಅಥವಾ ಒಂದು ಸಣ್ಣ ಚಿನ್ನವನ್ನು ಖರೀದಿಸುವುದು ಒಳ್ಳೆಯ ಸಮಯವನ್ನು ತರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು