Akshaya Tritiya 2024: ಅಕ್ಷಯ ತೃತೀಯದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ
Akshaya Tritiya Festival 2024: ಈ ವರ್ಷ ಮೇ.10 ಶುಕ್ರವಾರದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ.ಈ ವರ್ಷದ ಅಕ್ಷಯ ತೃತೀಯವನ್ನು ಆಚರಿಸುವುದರ ಜೊತೆಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಹಂಚಿಕೊಳ್ಳಬಹುದಾದ ಕೆಲವು ಶುಭಾಶಯಗಳು ಇಲ್ಲಿವೆ.

Akshaya Tritiya 2024
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಈ ವರ್ಷ ಮೇ.10 ಶುಕ್ರವಾರದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ. ಅಕ್ಷಯ ತೃತೀಯವು ಸಮೃದ್ಧಿ ಮತ್ತು ಸಂಪತ್ತಿನ ಭರವಸೆಯನ್ನು ತರುತ್ತದೆ. ಈ ಶುಭ ದಿನದಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಿದರೆ, ಅದು ಸಂಪತ್ತನ್ನು ಸೇರಿಸುತ್ತದೆ ಎಂದು ನಂಬಲಾಗಿದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮತ್ತು ಹೊಸ ವ್ಯವಹಾರವನ್ನು ಪ್ರಾರಂಭಿಸುವುದು ಮುಂತಾದ ಮಂಗಳಕರ ಆಚರಣೆಗಳನ್ನು ಈ ದಿನ ಮಾಡಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯವನ್ನು ಆಚರಿಸುವುದರ ಜೊತೆಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಹಂಚಿಕೊಳ್ಳಬಹುದಾದ ಕೆಲವು ಶುಭಾಶಯಗಳು ಇಲ್ಲಿವೆ.
ಅಕ್ಷಯ ತೃತೀಯದ ಶುಭಾಶಯಗಳು:
- ಅಕ್ಷಯ ತೃತೀಯದಂದು ನೀವು ಕೈಗೊಂಡ ಎಲ್ಲಾ ಕಾರ್ಯಗಳು ನಿಮಗೆ ಅಕ್ಷಯ ಫಲವನ್ನು ನೀಡಲಿ, ಅದೃಷ್ಟ ಲಕ್ಷ್ಮಿ ನಿಮಗೆ ಒಲಿಯುವಂತಾಗಲಿ ಎಂದು ಹಾರೈಸುತ್ತೇನೆ. ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು.
- ಅಕ್ಷಯ ತೃತೀಯ ಶುಭಾಶಯಗಳು. ಭಗವಂತ ನಿಮ್ಮ ಸಮೃದ್ಧಿ ಮತ್ತು ಸಂತೋಷವನ್ನು ಕಾಪಾಡಲಿ.
- ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿ ನಿಮಗೆ ಒಲಿಯಲಿ ಎಂದು ಹಾರೈಸುವೆ. ಅಕ್ಷಯ ತೃತೀಯ ಶುಭಾಶಯಗಳು
- ಯಜ್ಞ, ಪೂಜೆ ಮತ್ತು ಆಚರಣೆಗಳೊಂದಿಗೆ, ಈ ಮಂಗಳಕರ ದಿನದಂದು ನಮ್ಮ ಮನೆಗಳಿಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಸ್ವಾಗತಿಸೋಣ. ಅಕ್ಷಯ ತೃತೀಯ ಶುಭಾಶಯಗಳು.
- ಅಕ್ಷಯ ತೃತೀಯವು ಬೇಡಿದ್ದನ್ನು ನೀಡುವ ನಿಮ್ಮ ಕೈಗಳನ್ನು ಎಂದಿಗೂ ಅಕ್ಷಯವಾಗಿರಿಸಲಿ. ನಿಮ್ಮಿಂದ ಮತ್ತಷ್ಟು ಉಪಕಾರಗಳು ಈ ಸಮಾಜಕ್ಕೆ ಆಗುವಂತಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಅಕ್ಷಯ ತೃತೀಯದ ಶುಭಾಶಯಗಳು.
- ಕ್ಷಯವಾಗಲಿ ನಿಮ್ಮೆಲ್ಲಾ ಸಂಕಷ್ಟಗಳು, ಕ್ಷಯವಾಗಲಿ ನಿಮ್ಮೆಲ್ಲಾ ನೋವುಗಳು, ಕ್ಷಯವಾಗಲಿ ನಿಮ್ಮೆಲ್ಲಾ ಅಜ್ಞಾನಗಳು.. ಎಂದು ಹಾರೈಸುತ್ತಾ ಅಕ್ಷಯ ತೃತೀಯದ ಶುಭಾಶಯಗಳು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ