ಅಮ್ಮ ಎಂದರೆ ಏನೋ ಹರುಷವೋ ನನ್ನ ಪಾಲಿಗೆ ಅವಳೇ ದೈವವು, ಅಮ್ಮ ಅಂದರೇನೇ ಹಾಗೆ ನೋವನ್ನು ಮರೆಸುತ ಸದಾ ಕಾಳಜಿಯನ್ನು ಬಯಸುವ ಜೀವ. ವಿಶ್ವದಾದ್ಯಂತ ತಾಯಂದಿರ ದಿನವನ್ನು ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ಈ ಬಾರಿ ಮೇ 12 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಒಂದು ವೇಳೆ ದೂರವಿದ್ದರೆ ಅಮ್ಮಂದಿರ ದಿನವನ್ನು ಈ ರೀತಿಯಾಗಿ ಸೆಲೆಬ್ರೇಟ್ ಮಾಡಿ ಅಮ್ಮನ ಮೊಗದಲ್ಲಿ ನಗು ಮೂಡಿಸಬಹುದು.
* ಪತ್ರ ಬರೆಯಿರಿ : ಅಮ್ಮನ ಜೊತೆಯಲ್ಲಿ ದಿನವನ್ನು ಆಚರಿಸಲು ಸಾಧ್ಯವಿಲ್ಲ ಎಂದಾದರೆ ಅಮ್ಮನಿಗಾಗಿ ಒಂದು ಪತ್ರ ಬರೆಯಿರಿ. ಈ ಪತ್ರದಲ್ಲಿ ಅಮ್ಮನಿಗೆ ಹೇಳಬೇಕಾದ ವಿಚಾರವನ್ನು ತಿಳಿಸಿ ಬಿಡಿ. ಅದಲ್ಲದೇ ಕ್ಷಮೆ ಕೇಳಬೇಕೆಂದಿದ್ದರೆ ಅದನ್ನು ಕೂಡ ಉಲ್ಲೇಖಿಸಬಹುದು. ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ಒಳ್ಳೆಯ ಮಾರ್ಗವಾಗಿದ್ದು, ಈ ಪತ್ರವನ್ನು ಓದಿದ ಬಳಿಕ ನಿಮ್ಮ ತಾಯಿಯು ಖಂಡಿತವಾಗಿ ಖುಷಿ ಪಡುತ್ತಾರೆ.
* ಉಡುಗೊರೆಯನ್ನು ಕಳುಹಿಸಿಕೊಡಿ : ನಿಮ್ಮ ಅಮ್ಮನಿಗೆ ಏನು ಇಷ್ಟ ಎನ್ನುವುದು ಮಕ್ಕಳಾದ ನಿಮಗೆ ಗೊತ್ತಿರುತ್ತದೆ. ಈ ದಿನದಂದು ನಿಮಗೆ ಬರಲು ಸಾಧ್ಯವಾಗದೇ ಹೋದರೆ ಉಡುಗೊರೆಯನ್ನು ಕಳುಹಿಸಿ ಕೊಡಬಹುದು. ಇಲ್ಲವಾದರೆ ನಿಮ್ಮ ಅಪ್ಪನ ಬಳಿ ಸೆಲೆಬ್ರೇಶನ್ ಹೇಗೆ ಮಾಡಬೇಕು ಎನ್ನುವ ಐಡಿಯಾವನ್ನು ಕೊಡಿ. ಈ ಮೂಲಕ ಅಮ್ಮಂದಿರ ದಿನವನ್ನು ಅಮ್ಮನನ್ನು ಖುಷಿಯಾಗಿರಿಸಿಕೊಳ್ಳಬಹುದು.
ಇದನ್ನೂ ಓದಿ: ಆವಾಸ ಸ್ಥಾನಗಳ ನಾಶ, ಕಣ್ಮರೆಯತ್ತ ವಲಸೆ ಹಕ್ಕಿಗಳು
* ವಿಡಿಯೋ ಕಾಲ್ ನಲ್ಲಿ ಮಾತನಾಡಿ : ಅಮ್ಮನಿಂದ ದೂರವಿರುವವರು ಈ ತಾಯಂದಿರ ದಿನದಂದು ಅವಳ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಬಹುದು. ಈ ಮೂಲಕ ಪ್ರೀತಿಯ ಅಮ್ಮನಿಗೆ ಶುಭಾಶಯಗಳನ್ನು ಕೋರಬಹುದು.
* ಸರ್ಪ್ರೈಸ್ ಆಗಿ ಮನೆಗೆ ಬನ್ನಿ : ನೀವು ಸರ್ಪ್ರೈಸ್ ಆಗಿ ಮನೆಗೆ ಬಂದರೆ ಅಮ್ಮ ಖಂಡಿತವಾಗಿಯೂ ಖುಷಿಯಾಗುತ್ತಾಳೆ. ಹೀಗಾಗಿ ನೀವು ಹೇಳದೇನೇ ಈ ದಿನದಂದು ಮನೆಗೆ ಬಂದರೆ ಆಕೆಯ ಖುಷಿಗೆ ಪಾರವೇ ಇರುವುದಿಲ್ಲ. ನಿಮ್ಮ ಈ ಸರ್ಪ್ರೈಸ್ ಭೇಟಿಯು ಆಕೆಗೆ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ