Mother’s Day 2024: ಅಮ್ಮಂದಿರ ದಿನಾಚರಣೆಯ ಈ ವಿಶೇಷ ದಿನದಂದು ನಿಮ್ಮ ತಾಯಿಗೆ ಈ ರೀತಿಯ ಉಡುಗೊರೆ ನೀಡಿ

|

Updated on: May 08, 2024 | 5:19 PM

ನೀವು ನಿಮ್ಮ ಹಣದಲ್ಲಿ ಖರೀದಿಸಿದ ಪ್ರತಿಯೊಂದು ವಸ್ತುವೂ ಕೂಡ ನಿಮ್ಮ ತಾಯಿಗೆ ವಿಶೇಷವಾದುದು. ಅಮ್ಮಂದಿರ ದಿನಾಚರಣೆಯ ಈ ವಿಶೇಷ ದಿನದಂದು ನೀವು ನಿಮ್ಮ ಅಮ್ಮನಿಗೆ ಕೊಡಬಹುದಾದ ವಿಶೇಷ ಗಿಫ್ಟ್​ ಐಡಿಯಾಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

Mothers Day 2024: ಅಮ್ಮಂದಿರ ದಿನಾಚರಣೆಯ ಈ ವಿಶೇಷ ದಿನದಂದು ನಿಮ್ಮ ತಾಯಿಗೆ ಈ ರೀತಿಯ ಉಡುಗೊರೆ ನೀಡಿ
Mothers Day 2024
Follow us on

ಅಮ್ಮಂದಿರ ದಿನ ಸಮೀಪಿಸುತ್ತಿದೆ. ಪ್ರತೀ ವರ್ಷ  ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ದಿನ(Mother’s Day)  ವಿಶ್ವದಾದ್ಯಂತ ಆಚರಿಸಲಾಗುತ್ತದೆ.  ಮೇ.12 ರಂದು ವನ್ನು ಆಚರಿಸಲಾಗುತ್ತದೆ. ನಮ್ಮನ್ನು ಈ ಜಗತ್ತಿಗೆ ತಂದ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೂ ಕೂಡ ಈ ವಿಶೇಷ ದಿನದಂದು ನಿಮ್ಮ ಅಮ್ಮನಿಗೆ ಇಷ್ಟವಾಗುವಂತಹ ಉಡುಗೊರೆಯನ್ನು ನೀಡಿ ಈ ದಿನವನ್ನು ಇನ್ನಷ್ಟು ವಿಶೇಷಗೊಳಿಸಿ. ಅಮ್ಮಂದಿರ ದಿನಾಚರಣೆಯ ಈ ವಿಶೇಷ ದಿನದಂದು ನೀವು ನಿಮ್ಮ ಅಮ್ಮನಿಗೆ ಕೊಡಬಹುದಾದ ವಿಶೇಷ ಗಿಫ್ಟ್​ಗಳ ಐಡಿಯಾಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಸೀರೆ ಗಿಫ್ಟ್​ ಮಾಡಿ:

ನೀವು ನಿಮ್ಮ ಸ್ವಂತ ಹಣದಲ್ಲಿ ಖರೀದಿಸಿದ ಪ್ರತಿಯೊಂದು ವಸ್ತುವೂ ಕೂಡ ನಿಮ್ಮ ತಾಯಿಗೆ ವಿಶೇಷವಾದುದು. ಆದ್ದರಿಂದ ಈ ತಾಯಂದಿರ ದಿನದಂದು ನಿಮ್ಮ ಅಮ್ಮನಿಗೆ ಒಂದು ಸುಂದರವಾದ ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡ. ಈ ಸೀರೆಯನ್ನು ಯಾವುದಾದರೂ ಮದುವೆ ಸಮಾರಂಭಗಳಿಗೆ ತೊಟ್ಟಾಗ ನಿಮ್ಮನ್ನೇ ಮೊದಲು ನೆನಪಿಸಿಕೊಳ್ಳುತ್ತಾರೆ.

ಫೋಟೋ ಫ್ರೇಮ್​​:

ನೀವು ನಿಮ್ಮ ಅಮ್ಮನೊಂದಿಗೆ ಕಳೆದ ಸುಂದರ ಫೋಟೋ ಅಥವಾ ನಿಮ್ಮ ಅಮ್ಮನೊಂದಿಗೆ ಇರುವ ಬಾಲ್ಯದ ಫೋಟೋವನ್ನು ಫ್ರೇಮ್​ ಹಾಕಿ ಗಿಫ್ಟ್​​ ಮಾಡಿ. ಈ ಫೋಟೋ ಪ್ರತೀ ಸಲ ನೋಡಿದಾಗ ನಿಮ್ಮ ಅಮ್ಮನಿಗೆ ಮತ್ತೆ ಹಿಂದಿನ ನೆನಪುಗಳು ಮರುಕಳಿಸಬಹುದು.

ಹೂಗುಚ್ಛ ಮತ್ತು ಕೇಕ್‌:

ಅಮ್ಮಂದಿರ ದಿನ ಅವರ ಇಷ್ಟದ ಕೇಕ್​ ಹಾಗೂ ಹೂಗುಚ್ಛವನ್ನು ತರಿಸಿ ಮನೆಯನ್ನು ಚೆನ್ನಾಗಿ ಅಲಂಕರಿಸಿ ಅವರಿಗೆ ಸರ್ಪ್ರೈಸ್​ ನೀಡಿ. ಕುಟುಂಬದ ಸದಸ್ಯರೆಲ್ಲರೊಂದಿಗೆ ವಿಶೇಷವಾಗಿ ಮೇ.12 ರಂದು ಅಮ್ಮಂದಿರ ದಿನವನ್ನು ಸೆಲಬ್ರೆಟ್​ ಮಾಡಿ.

ಚಿನ್ನಾಭರಣ:

ನೀವು ದುಬಾರಿ ಬೆಲೆಯ ಗಿಫ್ಟ್​​ ಕೊಡಲು ಬಯಸಿದರೆ ಚಿನ್ನಾಭರಣ ಉತ್ತಮ ಆಯ್ಕೆಯಾಗಿದೆ. ನೀವು ಅಮ್ಮನಿಗೆ ಇಷ್ಟವಾಗುವಂತಹ ದೇವರ ಪೆಂಡೆಂಟ್​ ಇರುವ ಉದಾಹರಣೆಗೆ ಲಕ್ಷ್ಮೀ ದೇವಿಯ ಪೆಂಡೆಂಟ್​ ಇರುವ ಸುಂದರವಾದ ಸರ, ಅಥವಾ ಉಂಗುರುಗಳನ್ನು ಉಡುಗೊರೆಯಾಗಿ ನೀಡಬಹುದಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ