Naga Panchami 2025: ಕರಾವಳಿಯಲ್ಲಿ ನಾಗರ ಪಂಚಮಿಯಂದು ಅರಶಿನ ಎಲೆಯ ಕಡುಬು ಮಾಡುವುದು ಯಾಕೆ? ಈ ಬಗ್ಗೆ ಅರ್ಚಕರು ಹೇಳೋದೇನು?

ಶ್ರಾವಣ ಮಾಸದಂದು ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ನಾಗರ ಪಂಚಮಿ ದಿನ ನಾಗ ದೇವರಿಗೆ ಹಾಲೆರೆದು, ವಿಶೇಷ ಖಾದ್ಯಗಳನ್ನು ಮಾಡಿ ನೈವೇದ್ಯವಾಗಿ ಇಡಲಾಗುತ್ತದೆ. ಕರಾವಳಿ ಭಾಗದಲ್ಲಿ ಅಂದರೆ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ನಾಗರಪಂಚಮಿಯಂದು ಅರಶಿನ ಎಲೆ ಕಡುಬು ಮಾಡುವುದು ವಿಶೇಷ. ಹಾಗಾದ್ರೆ ನಾಗರಪಂಚಮಿ ಹಬ್ಬಕ್ಕೆ ಅರಶಿನ ಎಲೆಯ ಕಡುಬು ಈ ಸಿಹಿ ತಿನಿಸನ್ನು ಮಾಡುವುದೇಕೆ? ಇದರ ಹಿಂದಿನ ಕಾರಣವೇನು? ಈ ಕುರಿತಾದ ಮಾಹಿತಿ ಇಲ್ಲಿದೆ.

Naga Panchami 2025: ಕರಾವಳಿಯಲ್ಲಿ ನಾಗರ ಪಂಚಮಿಯಂದು ಅರಶಿನ ಎಲೆಯ ಕಡುಬು ಮಾಡುವುದು ಯಾಕೆ? ಈ ಬಗ್ಗೆ ಅರ್ಚಕರು ಹೇಳೋದೇನು?
ಅರಶಿನ ಎಲೆಯ ಸಿಹಿ ಕಡುಬು

Updated on: Jul 27, 2025 | 6:08 PM

ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಹಬ್ಬವೇ ‘ನಾಗರಪಂಚಮಿ (Naga Panchami). ಈ ವರ್ಷ ಜುಲೈ 29 ರಂದು ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕರಾವಳಿ–ಮಲೆನಾಡಿನಲ್ಲಿ ಭಾಗಗಳಲ್ಲಿ ನಾಗನಿಗೆ ಪ್ರಮುಖ ಸ್ಥಾನ ನೀಡಲಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗಗಳಲ್ಲಿ ನಾಗಬನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಚಕ್ಕುಲಿ, ಅರಳು, ಉಂಡೆ ವಿವಿಧ ಸಿಹಿ ತಿಂಡಿಗಳನ್ನು ಮಾಡುತ್ತಾರೆ. ಈ ದಿನ ಕರಾವಳಿ ಭಾಗದ ಬಹುತೇಕರ ಮನೆಯಲ್ಲಿ ಅರಶಿನ ಎಲೆಯ ಸಿಹಿ ಕಡುಬು (turmeric leaf kadubu) ಈ ಸಿಹಿ ಖಾದ್ಯವನ್ನು ಮಾಡುತ್ತಾರೆ. ಅರಿಶಿನ ಎಲೆಗಳಲ್ಲಿ ಸುತ್ತಿ ತಯಾರಿಸುವ ಈ ಸಿಹಿ ತಿಂಡಿಯಲ್ಲಿ ತೆಂಗಿನಕಾಯಿ, ಬೆಲ್ಲದ ಸಿಹಿ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ತುಳುವಿನಲ್ಲಿ ಅರಶಿನ ಎಲೆ ಪತೋಳಿ ಅಥವಾ ಅರಶಿನ ಎಲೆಯ ಸಿಹಿ ಕಡುಬಿಗೆ ಈರಡ್ಯೆ ಎಂದು ಹೇಳುವುದಿದೆ. ಹಾಗಾದ್ರೆ ನಾಗರಪಂಚಮಿ ಹಬ್ಬಕ್ಕೆ ಅರಶಿನ ಎಲೆಯ ಸಿಹಿ ಕಡುಬು ಮಾಡುವುದರ ಹಿಂದಿನ ಕಾರಣವೇನು? ಈ ಬಗ್ಗೆ ಅರ್ಚಕರಾದ ಚೆಂಪಿ ರಾಮಚಂದ್ರ ಅನಂತ ಭಟ್ (Chempi Ramachandra Anantha Bhat) ಏನು ಹೇಳುತ್ತಾರೆ, ಇಲ್ಲಿದೆ ಮಾಹಿತಿ.

ಅರಶಿನ ಎಲೆಯ ಸಿಹಿ ಕಡುಬು ಮಾಡುವುದರ ಹಿಂದಿದೆ ಈ ಕಾರಣ

ಅರ್ಚಕರಾದ ಚೆಂಪಿ ರಾಮಚಂದ್ರ ಅನಂತ ಭಟ್ ಅವರು ಹೇಳುವಂತೆ ನಾಗರಪಂಚಮಿ ಹಬ್ಬದ ದಿನ ಕರಿದ ಪದಾರ್ಥಗಳ ಸೇವನೆ ಮಾಡಬಾರದು, ಸಾತ್ವಿಕ ಆಹಾರವನ್ನು ಸೇವಿಸಬೇಕು. ಭೂಮಂಡಲವನ್ನು ಧಾರಣೆ ಮಾಡಿರುವ ನಾಗ ದೇವರಿಗೆ ಪಂಚಾಮೃತ ಅಭಿಷೇಕ, ಸಿಹಿಯಾಳ ಅಭಿಷೇಕ ಮಾಡುವಂತಹ ಸಮಯದಲ್ಲಿ ಸಾತ್ವಿಕ ಆಹಾರ ಸೇವನೆ ಮಾಡುವುದು ಒಳ್ಳೆಯದು. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೊರತು ಪಡಿಸಿ ತಾಜಾ ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಡೈರಿ ಉತ್ಪನ್ನಗಳು ಸೇರಿದಂತೆ ಮನೆಯಲ್ಲೇ ತಯಾರಿಸಿದ ಆಹಾರಗಳ ಸೇವನೆ ಒಳ್ಳೆಯದು. ಆದರೆ ಸಾತ್ವಿಕ ಆಹಾರ ತಯಾರಿಸುವಾಗ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವಂತಿಲ್ಲ.

ಇದನ್ನೂ ಓದಿ
ಅಪರೂಪಕ್ಕೆ ಕಾಣಸಿಗುವ ಕೇದಗೆ ಹೂವನ್ನು ಸಿಕ್ರೆ ಬಿಡಬೇಡಿ? ಯಾಕೆ ಗೊತ್ತಾ
ನಾಗರಪಂಚಮಿಯ ದಿನ ಅರಿಶಿನ ಎಲೆಯ ಸಿಹಿಕಡುಬು ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಸ್ವರ್ಗದಂತಿರುವ “ರಾಣಿ ಝರಿ”
ಕೂಡ್ಲು ತೀರ್ಥ ಜಲಪಾತದ ಸೊಬಗನ್ನು ಸವಿಯಲು ಯಾವಾಗ ಹೋದ್ರೆ ಬೆಸ್ಟ್‌

ಇದನ್ನೂ ಓದಿ: Nag Panchami 2025: ನಾಗನಿಗೆ ಪ್ರೀಯವಾದ ಕೇದಗೆ ಹೂವಿನಲ್ಲೂ ಅಡಗಿದೆ ಆರೋಗ್ಯದ ಗುಟ್ಟು

ನಾಗರಪಂಚಮಿ ಹಬ್ಬದಂದು ಔಷಧೀಯ ಗುಣವುಳ್ಳ ಅರಶಿನ ಎಲೆಯಿಂದ ಮಾಡಿದ ಸಿಹಿ ಕಡುಬು ಸೇವನೆ ಮಾಡುವುದರಿಂದ ಆರೋಗ್ಯ ಲಾಭಗಳು ಅತ್ಯಧಿಕವಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಔಷಧೀಯ ಗುಣವು ನಮ್ಮ ದೇಹಕ್ಕೆ ಈ ಸಿಹಿ ಪದಾರ್ಥದ ಮೂಲಕ ಸೇರಿಕೊಳ್ಳುವುದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದಿದ್ದಾರೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ