Nail Infection: ಮಹಿಳೆಯರೇ ಎಚ್ಚರ..! ಪೆಡಿಕ್ಯೂರ್ ಮಾಡಿಸುವ ಮುನ್ನ ಈ ಸ್ಟೋರಿ ಓದಿ
ಪೆಡಿಕ್ಯೂರ್ ಮಾಡಿಸಿ ಬೆರಳುಗಳನ್ನೇ ಕಳೆದುಕೊಂಡ ಫಟನೆ ಜಾರ್ಜಿಯಾದ ಫ್ಲೋವರಿದಲ್ಲಿ ನಡೆದಿದೆ. ಈಕೆಯ ಹೆಸರು ಅನಿತಾ ಹೌಸ್(59). ಆದ್ದರಿಂದ ವಿಶೇಷವಾಗಿ ನೀವು ಹೋಗುವ ಬ್ಯೂಟಿ ಪಾರ್ಲರ್ ಅಥವಾ ಸಲೂನ್ಗಳು ಎಷ್ಟು ಸ್ವಚ್ಚತೆಯನ್ನು ಫಾಲೋ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ಅಗತ್ಯ.
ಮಹಿಳೆಯರು ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಲು ಸದಾ ಏನಾದರೊಂದು ಹೊಸ ಹೊಸ ಸಾಹಸಗಳನ್ನು ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಸರ್ಜರಿಗಳಿಗೆ ಮರುಳಾಗುವುದು ಇಂತಹ ಸಾಕಷ್ಟು ಉದಾಹರಣೆಗಳನ್ನು ನೀವಿಗಾಗಲೇ ನೋಡಿರುತ್ತೀರಿ. ಆದರೆ ಇಲ್ಲೊಂದು ಅದಕ್ಕಿಂತಲೂ ವಿಭಿನ್ನವಾಗಿದೆ. ಪೆಡಿಕ್ಯೂರ್ ಮಾಡಿಸಿ ಬೆರಳುಗಳನ್ನೇ ಕಳೆದುಕೊಂಡ ಫಟನೆ ಜಾರ್ಜಿಯಾದ ಫ್ಲೋವರಿದಲ್ಲಿ ನಡೆದಿದೆ. ಈಕೆಯ ಹೆಸರು ಅನಿತಾ ಹೌಸ್(59).
ಫೆಬ್ರವರಿ 2019ರಲ್ಲಿ ಹೌಸ್ ಮತ್ತು ಆಕೆಯ ಸಹೋದರಿ ಪೆಡಿಕ್ಯೂರ್ ಮಾಡಿಸಲು ಹತ್ತಿರದ ನೇಲ್ ಸಲೂನ್‌ಗೆ ತೆರಳಿದ್ದಾರೆ. ಪೆಡಿಕ್ಯೂರ್ ಮಾಡಿಸಿದ ನಂತರ ಉಗುರಿನಲ್ಲಿ ಅಲರ್ಜಿಯಂತಹ ಲಕ್ಷಣಗಳು ಕಂಡುಬಂದಿದೆ. ದಿನಗಳೆದಂತೆ ಈ ಸಮಸ್ಯೆಯೂ ಹೆಚ್ಚಾಗುತ್ತಾ ಹೋಗಿದೆ. ವೈದ್ಯರು ಚಿಕಿತ್ಸೆಯ ಪ್ರಥಮ ಹಂತವಾಗಿ ಆಂಟಿಬಯೋಟಿಕ್ ಕ್ರೀಮ್ಗಳನ್ನು ನೀಡಿದ್ದಾರೆ. ಆದರೆ ಕಾಲ್ಬೆರಳಲ್ಲಿ ಅತಿಯಾದ ನೋವು, ಊತ ಹಾಗೂ ಬೆರಳಿನ ಸುತ್ತಲಿನ ಚರ್ಮ ಕೆಂಪು ಬಣ್ಣಕ್ಕೆ ತಿರುಗಿದೆ.
ಇದನ್ನೂ ಓದಿ: ಪ್ರಪಂಚದಾದ್ಯಂತ ಗರ್ಭಾವಸ್ಥೆ, ಹೆರಿಗೆಯ ಸಮಯದಲ್ಲಿ ಪ್ರತಿ 2 ನಿಮಿಷಕ್ಕೆ ಒಬ್ಬ ಮಹಿಳೆ ಸಾವು: ಯು ಎನ್ ಏಜೆನ್ಸಿ
ಪ್ರಾರಂಭದಲ್ಲಿ ವೈದ್ಯರು ಆಕೆಯ ಕಾಲ್ಬೆರಳ ಉಗುರು ತೆಗೆದ್ದಿದ್ದಾರೆ, ಆದರೆ ಸೋಂಕು ಇಡೀ ಬೆರಳಿಗೆ ಹರಡಿಕೊಂಡಿದ್ದರಿಂದ ಮುಂದೆ ಪಾದಗಳಿಗೆ ಏನು ಹಾನಿಯಾಗಬಾರದು ಎಂದು ಬೆರಳುಗಳನ್ನು ಕತ್ತರಿಸಿ ತೆಗೆದ್ದಿದ್ದಾರೆ. ಆದ್ದರಿಂದ ಪ್ರತಿಯೊಂದು ಮಹಿಳೆಯು ತನ್ನ ಸೌಂದರ್ಯ ಬಗ್ಗೆ ಕಾಳಜಿವಹಿಸುವ ಜೊತೆಗೆ ನೈರ್ಮಲ್ಯದ ಕಡೆ ಗಮನಹರಿಸಬೇಕಿದೆ. ವಿಶೇಷವಾಗಿ ನೀವು ಹೋಗುವ ಬ್ಯೂಟಿ ಪಾರ್ಲರ್ ಅಥವಾ ಸಲೂನ್ಗಳು ಎಷ್ಟು ಸ್ವಚ್ಚತೆಯನ್ನು ಫಾಲೋ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ಅಗತ್ಯ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:14 pm, Thu, 23 February 23