Patchouli Oil: ಪಚ್ಚೆತೆನೆ ಎಣ್ಣೆಯಲ್ಲಿದೆ ಅನೇಕ ಸೌಂದರ್ಯ ಪ್ರಯೋಜನ
ಪಚ್ಚೆತೆನೆ (ಪ್ಯಾಚೌಲಿ) ಎಣ್ಣೆಯನ್ನು ಸುವಾಸನೆಯುಕ್ತ ಗಿಡಮೂಲಿಯ ಎಲೆಗಳಿಂದ ತೆಗೆಯಲಾಗುತ್ತದೆ. ಇದು ಚರ್ಮಕ್ಕೆ ಬಹು ಪ್ರಯೋಜನಕಾರಿಯಾಗಿದೆ.ವಿಶೇಷವಾಗಿ ಇದು ಸನ್‍ಸ್ಕ್ರೀನ್‍ನಂತೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಪಚ್ಚೆತೆನೆ (ಪ್ಯಾಚೌಲಿ) ಎಣ್ಣೆಯನ್ನು (patchouli oil) ಸುವಾಸನೆಯುಕ್ತ ಗಿಡಮೂಲಿಯ ಎಲೆಗಳಿಂದ ತೆಗೆಯಲಾಗುತ್ತದೆ. ಇದು ಚರ್ಮಕ್ಕೆ ಬಹು ಪ್ರಯೋಜನಕಾರಿಯಾಗಿದೆ. ನಟಿ ದೀಪಿಕಾ ಪಡುಕೋಣೆ ಪ್ಯಾಚೌಲಿ ಗ್ಲೋ ಎಂಬ ಹೊಸ ಉತ್ಪನ್ನದೊಂದಿಗೆ ತನ್ನ ಬ್ರ್ಯಾಂಡ್ 82e ನ್ನು ಪ್ರಾರಂಭಿಸಿದಾಗಿನಿಂದ, ಸೌಂದರ್ಯ ಉತ್ಸಾಹಿಗಳು ಈ ಟ್ರೆಂಡಿ ಪ್ರೋಡಕ್ಟ್ ಬಗ್ಗೆ ಇಂಟರ್ನೆಟ್ನಲ್ಲಿ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಇದು ಸನ್‍ಸ್ಕ್ರೀನ್‍ನಂತೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಪಚ್ಚೆತೆನೆಯು ದೀರ್ಘಕಾಲಿಕ ಸುವಾಸನೆಯುಕ್ತ ಮೂಲಿಕೆಯಾಗಿದ್ದು ಇದನ್ನು ಫಿಲಿಪೈನ್ ಮತ್ತು ಮಲೇಷ್ಯಾದ ಸ್ಥಳೀಯ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದರ ಎಲೆಗಳನ್ನು ಪ್ಯಾಚೌಲಿ ಎಣ್ಣೆ ಎಂಬ ಸಾರಭೂತ ತೈಲವನ್ನು ತಯಾರಿಸಲು ಬಳಸಲಾಗುತ್ತದೆ. ಇದು ಚರ್ಮದ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ. ಮತ್ತು ಇಂದ್ರಿಯಗಳನ್ನು ಸಮತೋಲನಗೊಳಿಸುತ್ತದೆ. ಆದ್ದರಿಂದ ಶಾಂತ ವಾತವರಣವನ್ನು ಸೃಷ್ಟಿಸಲು ಈ ತೈಲವು ಐಷಾರಾಮಿಸ್ಪಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಅದಕ್ಕಾಗಿಯೇ ಇದು ಅರೋಮಾಥೆರಪಿ, ಸೌಂದರ್ಯವರ್ಧಕಗಳು ಮತ್ತು ಸುಗಂಧದ್ರವ್ಯ ಉದ್ಯಮದಲ್ಲಿ ಬಹು ಉಪಯೋಗವನ್ನು ಹೊಂದಿದೆ. ಈ ಸಸ್ಯದಿಂದ ಪಡೆದ ತೈಲವು ಸ್ಟೆರಾಲ್‍ಗಳು, ಫ್ಲೇವನಾಯ್ಡ್ ಮತ್ತು ಫೈಟೊಕೆಮಿಕಲ್‍ಗಳ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತದೆ. ಸೌಂದರ್ಯವರ್ಧಕಗಳು ಮಾತ್ರವಲ್ಲದೆ ಪಚ್ಚೆತೆನೆಯ ಎಣ್ಣೆಯು ಉರುಯೂತದ ಉಲ್ಬಣವನ್ನು ಕಡಿಮೆ ಮಾಡುತ್ತದೆ.
ಇದನ್ನು ಓದಿ:lifestyle: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ
ಗುರುಗ್ರಾಮ್‍ನ ಮೆರಾಕಿ ಸ್ಕಿನ್ ಕ್ಲಿನಿಕ್‍ನ ನಿರ್ದೇಶಕರು ಮತ್ತು ಸಹ ಸಂಸ್ಥಾಪಕರಾದ ಹಾಗೂ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಮತ್ತು ಕಾಸ್ಮೆಟಾಲಜಿಸ್ಟ್ ಡಾ. ಸ್ನೇಹಾ ಘುನಾವತ್ ಅವರ ಪ್ರಕಾರ, ಪ್ಯಾಚೌಲಿ ಎಣ್ಣೆಯು ಸಾಂಪ್ರದಾಯಿಕ ಆಯುರ್ವೇದ ಪ್ರಯೋಜನಗಳನ್ನು ಸಹ ಹೊಂದಿದೆ. ಉರಿಯೂತ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ: ಇದು ಕೆಂಪು ಮತ್ತು ಉರಿಯೂತದ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಒಣ ಚರ್ಮ, ಎಸ್ಜಿಮಾ ಮತ್ತು ಡರ್ಮಟೈಟಿಸ್‍ನ್ನು ನಿರ್ವಹಿಸಲು ಈ ಎಣ್ಣೆಯು ಸಹಕಾರಿಯಾಗಿದೆ.
ಗಾಯದ ಗುಣಪಡಿಸುವಕೆಯನ್ನು ಉತ್ತೇಜಿಸುತ್ತದೆ. ಇದು ಜೀವಕೋಶಗಳ ಪುಸರುತ್ಪಾದನೆ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ. ಗಾಯದ ಗುಣಪಡಿಸುವಿಕೆಯನ್ನು ಸುಧಾರಿಸುತ್ತದೆ. ವಯಸ್ಸಾಗುವಿಕೆಯ ವಿರೋಧಿ: ಇದು ಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಸ್ವತಂತ್ರ ರಾಡಿಕಲ್‍ಗಳ ಪರಿಣಾಮಕಾರಿ ಸ್ಕ್ಯಾವೆಂಜರ್ ಆಗಿ ಕಾರ್ಯವಿರ್ವಹಿಸುತ್ತದೆ. ಇದು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಕೊಲಾಜಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಮೊಡವೆ ಮತ್ತು ಎಣ್ಣೆಯುಕ್ತ ಚರ್ಮ: ಇದರ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಹಾಗೂ ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸುವ ಗುಣಲಕ್ಷಣಗಳಿಂದಾಗಿ, ಇದು ಚರ್ಮದ ಮೊಡವೆ ಮತ್ತು ಎಣ್ನೆಯುಕ್ತತೆಉ ನಿಯಂತ್ರಣದಲ್ಲಿ ಅಪಾರ ಪ್ರಯೋಜನಗಳನ್ನು ಹೊಂದಿದೆ. ಸನ್‍ಸ್ಕ್ರೀನ್ ಆಗಿ ಪಚ್ಚೆತೆನೆಯ ಎಣ್ಣೆಯ ಪಾತ್ರದ ಬಗ್ಗೆ ಮಾತನಾಡುತ್ತಾ ಡಾ. ಸ್ನೇಹಾ ಘುನಾವತ್ ಹೇಳಿದರು ‘ಪ್ಯಾಚೌಲಿ ಎಣ್ಣೆಯು ವಯಸ್ಸಾಗುವಿಕೆಯ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಇದು ಕಡಿಮೆ ಮಾಡುತ್ತದೆ. ವಿಶೇಷವಾಗಿ ಶುಷ್ಕ ಮತ್ತು ಹಾನಿಗೊಳಗಾದ ಚರ್ಮದ ಸನ್‍ಸ್ಕ್ರೀನ್ ಆಗಿ ಇದು ಕಾರ್ಯನಿರ್ವಹಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ