AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Orange Side Effects: ಈ ಆರೋಗ್ಯ ಸಮಸ್ಯೆಗಳಿರುವವರು ಕಿತ್ತಳೆ ಹಣ್ಣನ್ನು ಸೇವಿಸಲೇಬಾರದು

ಚಳಿಗಾಲದಲ್ಲಿ ಕಿತ್ತಳೆ ಹಣ್ಣು ಹೇರಳವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಕಿತ್ತಳೆ ಹಣ್ಣನ್ನು ಇಷ್ಟಪಡದವರಿಲ್ಲ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಕಿತ್ತಳೆ ಹಣ್ಣಿನಿಂದ ದೂರವಿರಬೇಕು.

Orange Side Effects: ಈ ಆರೋಗ್ಯ ಸಮಸ್ಯೆಗಳಿರುವವರು ಕಿತ್ತಳೆ ಹಣ್ಣನ್ನು ಸೇವಿಸಲೇಬಾರದು
ಕಿತ್ತಳೆ
TV9 Web
| Edited By: |

Updated on: Jan 06, 2023 | 8:00 AM

Share

ಚಳಿಗಾಲದಲ್ಲಿ ಕಿತ್ತಳೆ ಹಣ್ಣು ಹೇರಳವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಕಿತ್ತಳೆ ಹಣ್ಣನ್ನು ಇಷ್ಟಪಡದವರಿಲ್ಲ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಕಿತ್ತಳೆ ಹಣ್ಣಿನಿಂದ ದೂರವಿರಬೇಕು. ಕಿತ್ತಳೆಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಮೆಗ್ನೀಷಿಯಂ, ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಷಿಯಂನಂತಹ ಪೋಷಕಾಂಶಗಳು ಇದರಲ್ಲಿದ್ದು ದೇಹಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನವನ್ನು ನೀಡುತ್ತದೆ.

ಈ ಆರೋಗ್ಯ ಸಮಸ್ಯೆಗಳಿರುವವರು ಕಿತ್ತಳೆ ತಿನ್ನುವುದು ಬೇಡ

ಆ್ಯಸಿಡಿಟಿಯಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಆ್ಯಸಿಡಿಟಿ ದೂರುಗಳನ್ನು ಹೊಂದಿರುವವರು ಕಿತ್ತಳೆ ಅಥವಾ ಅದರ ರಸವನ್ನು ಸೇವಿಸಬಾರದು ಏಕೆಂದರೆ ಇದು ಎದೆ ಮತ್ತು ಹೊಟ್ಟೆಯಲ್ಲಿ ಉರಿಯುವಿಕೆಯನ್ನು ಹೆಚ್ಚಿಸುತ್ತದೆ.

ಹುಳುಕು ಹಲ್ಲು ಇರುವವರು ಹುಳುಕು ಹಲ್ಲು ಕಿತ್ತಳೆ ಹಣ್ಣನ್ನು ತಿಂದರೆ ಹಲ್ಲುಗಳು ಹದಗೆಡುತ್ತದೆ. ಜುಮ್ಮೆನಿಸುವಿಕೆ ಅನುಭವವಾಗುತ್ತದೆ.

ಹೊಟ್ಟೆ ನೋವು ಅನೇಕ ಕಾರಣಗಳಿಂದ ಹೊಟ್ಟೆ ನೋವು ಬರಬಹುದು, ಆದರೆ ನೀವು ಇದ್ದಕ್ಕಿದ್ದಂತೆ ಈ ಸಮಸ್ಯೆಯನ್ನು ಎದುರಿಸಿದರೆ, ತಕ್ಷಣ ಕಿತ್ತಳೆ ತಿನ್ನುವುದನ್ನು ನಿಲ್ಲಿಸಿ ಏಕೆಂದರೆ ಕಿತ್ತಳೆಯಲ್ಲಿರುವ ಆಮ್ಲವು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಅಜೀರ್ಣ ಸಮಸ್ಯೆ ಇರುವವರು ಹೊಟ್ಟೆ ಸಮಸ್ಯೆ ಇರುವವರು ಕಿತ್ತಳೆ ಸೇವಿಸಬಾರದು ಏಕೆಂದರೆ ಇದು ಅತಿಸಾರ, ಹೊಟ್ಟೆ ಸೆಳೆತ ಮತ್ತು ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡಬಹುದು. ಕಿತ್ತಳೆ ಹಣ್ಣನ್ನು ಪೂರ್ತಿಯಾಗಿ ತಿಂದರೆ ಅದು ದೇಹಕ್ಕೆ ನಾರಿನಂಶವನ್ನು ನೀಡುತ್ತದೆ, ಇದು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ