Naraka Chaturdashi 2024: ನರಕ ಚತುರ್ದಶಿಯಂದು ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 30, 2024 | 3:36 PM

ಹಿಂದೂ ಧರ್ಮದಲ್ಲಿ ನರಕ ಚತುರ್ದಶಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಶ್ರೀಕೃಷ್ಣನು ನರಕಾಸುರನನ್ನು ವಧೆ ಮಾಡಿ ವಿಜಯ ಸಾಧಿಸಿದ ದಿನವಾಗಿದೆ. ದೀಪಾವಳಿಯ ಒಂದು ದಿನ ಮುಂಚಿತವಾಗಿ ಆಚರಿಸಲಾಗುವ ನರಕ ಚತುರ್ದಶಿಯೂ ವಿವಿದೆಡೆಯಲ್ಲಿ ವಿಭಿನ್ನ ಸಂಪ್ರದಾಯದೊಂದಿಗೆ ಆಚರಿಸಲಾಗುತ್ತದೆ. ಈ ಬಾರಿಯ ನರಕ ಚತುರ್ದಶಿಗೆ ಬಂಧು-ಬಾಂಧವರಿಗೆ ಹಾಗೂ ಆತ್ಮೀಯರಿಗೆ ಶುಭ ಕೋರಲು ಬಯಸಿದರೆ ವಿಶೇಷ ಸಂದೇಶಗಳು ಇಲ್ಲಿದೆ.

Naraka Chaturdashi 2024: ನರಕ ಚತುರ್ದಶಿಯಂದು ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ಸಾಂದರ್ಭಿಕ ಚಿತ್ರ
Follow us on

ಬೆಳಕಿನ ಹಬ್ಬ ದೀಪಾವಳಿಯು ಐದು ದಿನಗಳ ಕಾಲ ಆಚರಿಸುವ ಹಬ್ಬವಾಗಿದ್ದು, ನರಕ ಚತುರ್ದಶಿಯೂ ಒಂದು ಭಾಗವಾಗಿದೆ. ಈ ಹಬ್ಬವನ್ನು ಕೆಲವೆಡೆ ಚೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಈ ಹಬ್ಬವನ್ನು ಪ್ರತಿ ವರ್ಷ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ಶ್ರೀಕೃಷ್ಣನು ನರಕಾಸುರನನ್ನು ಕೊಂದು ಇಡೀ ಜಗತ್ತನ್ನು ರಕ್ಷಿಸಿದ ದಿನವಾಗಿದೆ. ಈ ನರಕ ಚತುರ್ದಶಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿಯ ಶುಭಾಶಯ ಕೋರಿ ಹಬ್ಬವನ್ನು ಸಂಭ್ರಮಿಸಬಹುದಾಗಿದೆ.

  • ಶ್ರೀಕೃಷ್ಣ ನರಕಾಸುರನ ವಿರುದ್ಧ ಜಯ ಸಾಧಿಸಿದಂತೆ ನಿಮ್ಮ ಬದುಕಿನಲ್ಲಿರುವ ಕಷ್ಟಗಳು ದೂರವಾಗಲಿ, ಜೀವನದಲ್ಲಿ ನೀವು ಜಯ ಸಾಧಿಸಲಿ ನರಕ ಚತುರ್ದಶಿ ಶುಭಾಶಯಗಳು.
  • ದುಷ್ಟ ಶಿಕ್ಷಣ, ಶಿಕ್ಷರಕ್ಷಣದ ಸಂಕೇತವಾಗಿರುವ ನರಕ ಚತುರ್ದಶಿ ಹಬ್ಬವು ಜೀವನದ ದುಃಖಗಳನ್ನು ಪರಿಹರಿಸಿ, ಮಂಗಳವನ್ನು ಉಂಟು ಮಾಡಲಿ. ನಿಮಗೂ ನಿಮ್ಮ ಕುಟುಂಬಕ್ಕೂ ನರಕ ಚತುರ್ದಶಿ ಶುಭಾಶಯಗಳು.
  • ಕೆಟ್ಟದ್ದರ ಮೇಲೆ ಒಳಿತಿನ ವಿಜಯವಾಗಲಿ. ಬದುಕಿನಲ್ಲಿ ಸದಾ ಸಂತೋಷವೇ ತುಂಬಿರಲಿ. ನರಕ ಚತುರ್ದಶಿ ಹಬ್ಬದ ಶುಭಾಶಯಗಳು.
  • ನಿಮ್ಮ ಜೀವನದಲ್ಲಿ ಸಮೃದ್ಧಿ, ಆರೋಗ್ಯ ಮತ್ತು ಸಂಪತ್ತು ತುಂಬಿ ತುಳುಕಲಿ. ನರಕ ಚತುರ್ದಶಿಯ ಶುಭಾಶಯಗಳು.
  • ನಾಡಿನ ಜನತೆಗೆ ನರಕ ಚತುರ್ದಶಿ ದೀಪಾವಳಿ ಹಬ್ಬದ ಶುಭಾಶಯಗಳು. ಈ ಸಂಭ್ರಮದ ಬೆಳಕಿನ ಹಬ್ಬವು ನೋವುಗಳ ಕತ್ತಲೆಯನ್ನು ದೂರಸರಿಸಿ ನಲಿವಿನ ಬೆಳಕನ್ನು ಪಸರಿಸಲಿ, ಎಲ್ಲರಿಗೂ ಉತ್ತಮ ಆರೋಗ್ಯ, ಸಮೃದ್ಧಿಗಳನ್ನು ಹೊತ್ತು ತರಲಿ.
  • ಶ್ರೀಕೃಷ್ಣ ಪರಮಾತ್ಮನು ನರಕಾಸುರನ ವಧಿಸಿ ಜಗದ ಕಂಟಕವ ನಿವಾರಿಸಿದಂತೆ, ನಾವು ನಮ್ಮೊಳಿರುವ ಅಹಂಕಾರವೆಂಬ ತಮವ ತೊಡೆದು ಪ್ರೀತಿಯ ದೀಪವನ್ನು ಬೆಳಗೋಣ. ಎಲ್ಲರಿಗೂ ನರಕ ಚತುರ್ದಶಿಯ ಶುಭಾಶಯಗಳು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ