ಒಂದು ದೇಶದ ಅಭಿವೃದ್ಧಿಯತ್ತ ಸಾಗಲು ಹಾಗೂ ಆಡಳಿತವು ಉತ್ತಮ ರೀತಿಯಲ್ಲಿ ನಡೆಯಲು ನಾಗರಿಕ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಹಾಗೂ ಜವಾಬ್ದಾರಿಯುತವಾಗಿ ಕೆಲಸ ಮಾಡುವುದು ಬಹಳ ಮುಖ್ಯ. ನಾಗರಿಕ ಸೇವಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯವೈಖರಿಯನ್ನು ಗುರುತಿಸುವ ಉದ್ದೇಶದಿಂದ ಈ ದಿನವು ಹೊಂದಿದೆ.
ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947 ರಲ್ಲಿ ನವದೆಹಲಿಯ ಮೆಟ್‌ಕಾಫ್ ಹೌಸ್‌ನಲ್ಲಿ ಆಡಳಿತಾತ್ಮಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ದಿನದ ಸವಿನೆನಪಿಗಾಗಿ ಏಪ್ರಿಲ್ 21 ರಂದು ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ. ಮೊದಲ ಬಾರಿಗೆ 2006 ರಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ಈ ದಿನವನ್ನು ಆಚರಿಸಲಾಯಿತು.
ರಾಷ್ಟ್ರೀಯ ನಾಗರಿಕ ಸೇವಾ ದಿನವು ರಾಷ್ಟ್ರದ ಸೇವೆಗಾಗಿ ನಾಗರಿಕ ಸೇವಾ ವರ್ಗದ ಅಧಿಕಾರಿಗಳ ಕಾರ್ಯವನ್ನು ಗುರುತಿಸಲು ಇರುವ ದಿನವಾಗಿದೆ. ಸಾರ್ವಜನಿಕ ಸೇವಾ ಇಲಾಖೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು, ಉತ್ತಮ ಆಡಳಿತವನ್ನು ನೀಡುವಲ್ಲಿ ಅವರ ನಿರಂತರ ಪರಿಶ್ರಮವನ್ನು ಶ್ಲಾಘಿಸುವ ಮೂಲಕ ಅಂತಹವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕೆಲಸವಾಗುತ್ತದೆ.
ಇದನ್ನೂ ಓದಿ: Summer Health: ಭಾರತದಲ್ಲಿ ಉಷ್ಣದ ಅಲೆಯ ಹೆಚ್ಚಳ; ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ತಡೆಯುವ 5 ಮಾರ್ಗಗಳಿವು
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ