ನವರಾತ್ರಿಯು ದುರ್ಗಾ ದೇವಿಯ ಆರಾಧನೆ ಸಮಯ. ಹಿಂದೂ ಧರ್ಮದಲ್ಲಿ ನವರಾತ್ರಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಶಾರದೀಯ ನವರಾತ್ರಿಯು ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಈ ಬಾರಿ ಅಕ್ಟೋಬರ್ 3 ರಿಂದ 12 ರವರೆಗೆ ಒಂಬತ್ತು ದಿನಗಳ ಕಾಲ ದೇವಿಯನ್ನು ಆರಾಧಿಸಲಾಗುತ್ತದೆ. ಈ ಒಂಬತ್ತು ದಿನಗಳ ಉತ್ಸವದಲ್ಲಿ, ದುರ್ಗೆಗೆ ಬಗೆಬಗೆ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ನೀಡಲಾಗುತ್ತದೆ. ಆರನೇ ದಿನದಂದು ದೇವಿಗೆ ಬಾಳೆಹಣ್ಣಿನ ಬರ್ಫಿಯನ್ನು ನೈವೇದ್ಯವಾಗಿ ಅರ್ಪಿಸಬಹುದಾಗಿದೆ.
* ಮೂರರಿಂದ ನಾಲ್ಕು ಬಾಳೆಹಣ್ಣು
* ಬೆಲ್ಲ
* ಕಾಲು ಕಪ್ ರವ
* ಕಾಲು ಕಪ್ ಗೋಧಿ ಹಿಟ್ಟು
* ಏಲಕ್ಕಿ ಪುಡಿ
* ತುಪ್ಪ
* ಗೋಡಂಬಿ ಬಾದಾಮಿ
* ನೀರು
* ಬಾಳೆಹಣ್ಣು ಬರ್ಫಿ ಮಾಡಲು ಬಾಳೆಹಣ್ಣನ್ನು ಕತ್ತರಿಸಿ ನುಣ್ಣಗೆ ರುಬ್ಬಿಕೊಳ್ಳಿ
* ತದನಂತರದಲ್ಲಿ ಒಂದು ಬಾಣಲೆಗೆ ಬೆಲ್ಲ ಹಾಕಿ ಅದರ ಅರ್ಧದಷ್ಟು ನೀರು ಹಾಕಿ ಪಾಕ ಮಾಡಿಟ್ಟುಕೊಳ್ಳಿ.
* ಆ ಬಳಿಕ ಇನ್ನೊಂದು ಬಾಣಲೆಗೆ ತುಪ್ಪ ಹಾಕಿ ಬಿಸಿಯಾಗುತ್ತಿದ್ದಂತೆ ಗೋಧಿ ಹಿಟ್ಟು ಹಾಗೂ ರವಾ ಹಾಕಿ ಮಧ್ಯಮ ಹುರಿಯಲ್ಲಿ ಉರಿದುಕೊಳ್ಳಿ.
* ಈಗಾಗಲೇ ರುಬ್ಬಿಟ್ಟ ಬಾಳೆಹಣ್ಣಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
* ನಂತರದಲ್ಲಿ ಪಾಕ ಮಾಡಿಕೊಂಡ ಬೆಲ್ಲ ಹಾಕಿ ಮಧ್ಯಮ ಹುರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಹಾಗೂ ಬೇಕಿದ್ದರೆ ತುಪ್ಪ ಸೇರಿಸಿಕೊಳ್ಳಿ.
* ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಕತ್ತರಿಸಿಟ್ಟ ಗೋಡಂಬಿ ಹಾಗೂ ಬಾದಾಮಿಯನ್ನು ಸೇರಿಸಿಕೊಳ್ಳಿ.
* ಒಂದು ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿಕೊಳ್ಳಿ. ಇದನ್ನು ಬೇಕಾದ ಆಕಾರದಲ್ಲಿ ಕತ್ತರಿಸಿ ಎರಡು ಗಂಟೆಗಳ ಕಾಲ ಇಟ್ಟರೆ ಬಾಳೆಹಣ್ಣಿನ ಬರ್ಫಿ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Mon, 7 October 24