ನೋಡಿ… ಅಪ್ಪಿ ತಪ್ಪಿಯೂ ದೇಹದ ಈ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಡಿ

ಟ್ಯಾಟೂ ಹಾಕಿಸಿಕೊಳ್ಳುವುದು ಈಗಿನ ಕಾಲದಲ್ಲಿ ಒಂದು ಫ್ಯಾಷನ್‌ ಆಗಿಬಿಟ್ಟಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಬಹುತೇಕ ಎಲ್ಲರೂ ಟ್ಯಾಟೂ ಹಾಕಿಸಿಕೊಳ್ಳಲು ಇಷ್ಟಪಡುತ್ತಾರೆ. ನಿಮಗೂ ಕೂಡಾ ಹಚ್ಚೆ ಹಾಕಿಸಿಕೊಳ್ಳುವುದೆಂದರೆ ಇಷ್ಟನಾ? ನೀವು ಕೂಡಾ ಟ್ಯಾಟೂ ಹಾಕಿಸಿಕೊಳ್ಳುವ ಯೋಜನೆಯಲ್ಲಿದ್ದೀರಾ? ಹಾಗಿದ್ರೆ ಅಪ್ಪಿ ತಪ್ಪಿಯೂ ದೇಹದ ಈ ಕೆಲವು ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಡಿ.

ನೋಡಿ… ಅಪ್ಪಿ ತಪ್ಪಿಯೂ ದೇಹದ ಈ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬೇಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 15, 2025 | 4:12 PM

ಹಚ್ಚೆ (Tattoo) ಹಾಕಿಸಿಕೊಳ್ಳುವುದು ಅಥವಾ ಟ್ಯಾಟೂ ಹಾಕಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್‌ ಆಗಿಬಿಟ್ಟಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಬಹುತೇಕ ಹೆಚ್ಚಿನವರಿಗೆ ಟ್ಯಾಟೂ ಹಾಕಿಸಿಕೊಳ್ಳುವುದೆಂದರೆ ಅದೇನೋ ಕ್ರೇಜ್.‌ ಕೆಲವರು ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡರೆ, ಕೆಲವರು ಕತ್ತಿನ ಭಾಗ ಕೈ (Hand), ತೋಳು, ಕಾಲುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇನ್ನೂ ಕಣ್ಣನ್ನೂ ಬಿಡದೆ ಮೈ ತುಂಬಾ ಹಚ್ಚೆ ಹಾಕಿಸಿಕೊಳ್ಳುವವರೂ ಇದ್ದಾರೆ. ನೀವು ಕೂಡಾ ಟ್ಯಾಟೂ ಪ್ರಿಯರೇ? (Tattoo Lovers) ನಿಮಗೂ ಕೂಡಾ ಹಚ್ಚೆ ಹಾಕಿಸಿಕೊಳ್ಳುವುದೆಂದರೆ ಇಷ್ಟನಾ? ನೀವೇನಾದ್ರೂ ಹಚ್ಚೆ ಹಾಕಿಸಿಕೊಳ್ಳುವ ಯೋಜನೆಯಲ್ಲಿದ್ದರೆ, ಅಪ್ಪಿತಪ್ಪಿಯೂ ದೇಹದ ಈ ಭಾಗಗಳ ಮೇಲೆ ಹಚ್ಚೆ ಹಾಕಿಸುವಂತಹ ಸಾಹಸಕ್ಕೆ ಕೈ ಹಾಕಬೇಡಿ.

ದೇಹದ ಈ ಭಾಗಗಳ ಮೇಲೆ ಹಚ್ಚೆ ಹಾಕಿಸಬೇಡಿ:

ದೇಹದಲ್ಲಿನ ಕೆಲವೊಂದು ಸೂಕ್ಷ್ಮ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ತುಂಬಾನೇ ಅಪಾಯಕಾರಿ. ಹೌದು ಇದರಿಂದ ನರಗಳಿಗೆ ಹಾನಿ, ಸೋಂಕು, ಅಲರ್ಜಿಯಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ತಪ್ಪಿಯೂ ಈ ಕೆಲವು ಭಾಗಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಡಿ.

ಮುಂಗೈ ಮತ್ತು ಬೆರಳುಗಳ ಮೇಲೆ: ಹೆಚ್ಚಿನ ಜನರು ಮುಂಗೈ ಮತ್ತು ಕೈ ಬೆರೆಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಲಲು ಇಷ್ಟಪಡುತ್ತಾರೆ. ಆದರೆ ಬೆರಳುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ಅಪಾಯಕಾರಿ. ಮುಂಗೈ ಮತ್ತು ಬೆರಳುಗಳ ಚರ್ಮ ತುಂಬಾನೇ ತೆಳುವಾಗಿರುತ್ತದೆ. ಅಲ್ಲದೆ ಈ ಭಾಗಗಳಲ್ಲಿ ಮೂಳೆಗಳು, ನರಗಳು ಕೂಡಾ ಹೆಚ್ಚಿರುತ್ತವೆ. ಚರ್ಮ ತೀರಾ ತೆಳುವಾಗಿರುವುದರಿಂದ ಬೆರಳು ಮತ್ತು ಮುಂಗೈಗೆ ಟ್ಯಾಟೂ ಹಾಕಿಸುವಾಗ ರಕ್ತಸ್ತ್ರಾವ ಮತ್ತು ಗಾಯಗಳಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ
ಓಟಕ್ಕಿಂತ 2 ಕಿಲೋಮೀಟರ್ ನಡೆಯುವುದು ಉತ್ತಮ
ಸ್ನಾನಗೃಹದಿಂದ ಆಧುನಿಕ ಬಳಕೆವರೆಗೆ, ಟರ್ಕಿಶ್ ಟವೆಲ್‌ ಇಂಟರೆಸ್ಟಿಂಗ್ ಸ್ಟೋರಿ
ಗರ್ಭಿಣಿಯಾಗಿದ್ದರೂ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ ದಿಟ್ಟ ಹೆಣ್ಣು
ಮುಖದ ಆಕಾರವೂ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ತಿಳಿಸುತ್ತೆ

ಮೊಣಕೈ: ನೀವು ಯಾವುದೇ ಕಾರಣಕ್ಕೂ ಮೊಣಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬಾರದು. ಏಕೆಂದರೆ ಮೊಣಕೈ ಚರ್ಮವು ತುಂಬಾನೇ ಮೃದುವಾಗಿರುತ್ತದೆ ಮತ್ತು ಎಹಚ್ಚು ಸೂಕ್ಷ್ಮವಾಗಿರುತ್ತದೆ. ಹಾಗಿರುವಾಗ ಮೊಣಕೈ ಮೇಲೆ ಸೂಜಿ ತಾಕುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಮತ್ತು ಇದು ನಂತರದಲ್ಲಿ ಚರ್ಮದ ಅಲರ್ಜಿಯನ್ನು ಸಹ ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಕಂಕುಳಿನ ಭಾಗ: ಕಂಕುಳಿನ ಭಾಗಕ್ಕೂ ಟ್ಯಾಟೂ ಹಾಕಿಸಿಕೊಳ್ಳಬಾರದು. ಈ ಭಾಗದ ಚರ್ಮ ತುಂಬಾನೇ ಸೂಕ್ಷ್ಮವಾಗಿರುವ ಕಾರಣ ಸೂಜಿ ತಾಕಿದಾಗ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಶಾಯಿಯ ರಾಸಾಯನಿಕಗಳ ಕಾರಣದಿಂದ ಈ ಭಾಗದಲ್ಲಿ ಚರ್ಮದ ಸೋಂಕು, ಅಲರ್ಜಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಜಂಕ್ ಫುಡ್ ತಿನ್ನುವುದರಿಂದ ಈ ಒತ್ತಡಗಳು ಕಾಡಬಹುದು!

ಮುಖ: ಕೆಲವರು ಮುಖ, ಕಣ್ಣುಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಕಣ್ಣು ಹಾಗೂ ಮುಖದ ಚರ್ಮ ಸೂಕ್ಷ್ಮವಾಗಿರುವುದರಿಂದ ಇದು ಚರ್ಮದ ಹಾನಿ, ತುರಿಕೆ, ಅಲರ್ಜಿ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಪಕ್ಕೆಲುಬು: ಪಕ್ಕೆಲುಬು ಇರುವ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಬಾರದು. ಇಲ್ಲಿ ಟ್ಯಾಟೂ ಹಾಕಿಸುವುದರಿಂದ ಅತಿಯಾದ ನೋವು ಉಂಟಾಗುವುದು ಮಾತ್ರವಲ್ಲದೆ, ಇದರಿಂದ ಗುಳ್ಳೆಗಳು ಉಂಟಾಗುವುದು, ತುರಿಕೆ ಇತ್ಯಾದಿ ಚರ್ಮದ ಸೋಂಕಿನ ಅಪಾಯ ಕೂಡಾ ಇದೆ.

ಇದಲ್ಲದೆ ಒಳ ತುಟಿ, ಖಾಸಗಿ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬಾರದು. ಇಂತಹ ಸೂಕ್ಷ್ಮ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ತುರಿಕೆ, ದದ್ದು, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ