New Year 2023: ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ಸಲಹೆಗಳು ಇಲ್ಲಿವೆ

| Updated By: ಅಕ್ಷತಾ ವರ್ಕಾಡಿ

Updated on: Jan 01, 2023 | 10:51 AM

ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಆರೋಗ್ಯಕರ ಬೆಳಗಿನ ಅಭ್ಯಾಸಗಳನ್ನು ಕಂಡುಹಿಡಿಯಲು ಮನೋವೈದ್ಯಶಾಸ್ತ್ರದ ಪರಿಣಿತರಾದ ಡಾ ರಿಷಿ ಗೌತಮ್ ನೀಡಿರುವ ಸಲಹೆಗಳು ಇಲ್ಲಿವೆ.

New Year 2023: ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ಸಲಹೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ಹೊಸ ವರ್ಷ 2023(New Year 2023) ರಲ್ಲಿ, ನೀವು ದಿನವನ್ನು ಹೇಗೆ ಪ್ರಾರಂಭಿಸುತ್ತೀರಿ ಎಂಬುದು ಅಗತ್ಯವಾಗಿರುತ್ತದೆ. ದಿನ ಹೇಗೆ ಪ್ರಾರಂಭವಾಗುತ್ತದೆ ಎಂಬುದು, ದಿನ ಪೂರ್ತಿ ಹೇಗೆ ಇರುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ವಿಶೇಷವಾಗಿ ಮಾನಸಿಕ ಆರೋಗ್ಯ(Mental Health)ಕ್ಕಾಗಿ ನೀವು ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ, ಧನಾತ್ಮಕವಾಗಿರಲು ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ನಿಮಗೆ ಸಹಾಯ ಮಾಡುವ 10 ಆರೋಗ್ಯಕರ ಬೆಳಗಿನ ಅಭ್ಯಾಸಗಳು ಇಲ್ಲಿವೆ. ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಆರೋಗ್ಯಕರ ಬೆಳಗಿನ ಅಭ್ಯಾಸಗಳನ್ನು ಕಂಡುಹಿಡಿಯಲು ಅಮೇರಿಕಾ ಮೂಲದ ಮಾನಸಿಕ ಆರೋಗ್ಯ ತಜ್ಞ ಮತ್ತು ಮನೋವೈದ್ಯಶಾಸ್ತ್ರದ ಪರಿಣಿತರಾದ ಡಾ ರಿಷಿ ಗೌತಮ್ ನೀಡಿರುವ ಸಲಹೆಗಳು ಇಲ್ಲಿವೆ.

1. ಸರಿಯಾದ ನಿದ್ದೆ:

ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಎಷ್ಟು ಮುಖ್ಯ. ಸರಿಯಾದ ನಿದ್ದೆ ನಿಮ್ಮನ್ನು ದಿನ ಪೂರ್ತಿ ಉಲ್ಲಾಸದಿಂದಿರುವಂತೆ ಮಾಡುತ್ತದೆ. ದಿನದಲ್ಲಿ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ ನಿಮ್ಮ ಸೌಂದರ್ಯವನ್ನು ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಆದ್ದರಿಂದ ರಾತ್ರಿಯೂ ಸಮಯಕ್ಕೆ ಸರಿಯಾಗಿ ಮಲಗಲು ಪ್ರಯತ್ನಿಸಿ ಮತ್ತು ಕನಿಷ್ಠ ಎಂಟರಿಂದ ಒಂಬತ್ತು ಗಂಟೆಗಳ ನಿದ್ದೆ ಮಾಡಿ.

2. ನಿದ್ದೆಯಿಂದ ಎದ್ದ ಕೂಡಲೇ ಮೊಬೈಲ್ ಬಳಸುವ ಅಭ್ಯಾಸ ಬಿಟ್ಟು ಬಿಡಿ:

ಮೊದಲು ಎದ್ದ ಕೂಡಲೇ ಮೊಬೈಲ್ ಬಳಸುವ ಅಭ್ಯಾಸ ಬಿಟ್ಟು ಬಿಡಿ. ಬೆಳಗೆ ಎದ್ದ ತಕ್ಷಣ ಮೊಬೈಲ್ ಬಳಸುವ ಅಭ್ಯಾಸ ಸಾಕಷ್ಟು ಜನರಿಗಿರುತ್ತದೆ. ಇದು ನಿಮ್ಮ ಕಣ್ಣಿನ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

3. ಧ್ಯಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ:

ನಿಮ್ಮನ್ನು ಮಾನಸಿಕವಾಗಿ ಆರೋಗ್ಯದಿಂದಿಡಲು ಯೋಗಾಭ್ಯಾಸ ಅಗತ್ಯವಾಗಿದೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದಿಷ್ಟು ಹೊತ್ತು ಸಮಯವನ್ನು ಯೋಗಾಸನ ಮಾಡಲು ಮೀಸಲಿಡಿ. ಇದು ನಿಮ್ಮನ್ನು ಒತ್ತಡದಿಂದ ಹೊರತರಲು ಸಹಾಯಮಾಡುತ್ತದೆ.

4. ವ್ಯಾಯಮ:

ತೂಕವನ್ನು ಕಳೆದುಕೊಳ್ಳಲು ಮಾತ್ರ ವ್ಯಾಯಮ ಮಾಡಲು ಯೋಚಿಸಬೇಡಿ. ಬೆಳಿಗ್ಗೆ ವ್ಯಾಯಮವು ನಿಮ್ಮ ದೇಹವನ್ನು ಚುರುಕಿನಿಂದ ಇರುವಂತೆ ಮಾಡುತ್ತದೆ. ಜೊತೆಗೆ ನಿಮ್ಮನ್ನು ಮಾನಸಿಕವಾಗಿ ಚುರುಕಿನಿಂದ ಇರುವಂತೆ ಮಾಡುತ್ತದೆ.

ಇದನ್ನು ಓದಿ: ನಿಮಗೆ ಪಾರ್ಟಿ ಇಷ್ಟವಿಲ್ಲದಿದ್ದರೆ, ನ್ಯೂ ಇಯರ್​ನ್ನು ಹೀಗೆ ಆಚರಿಸಿ

5. ಹೈಡ್ರೇಟ್:

ರಾತ್ರಿಯ ನಿದ್ದೆಯ ನಂತರ ದೇಹವು ಸಾಕಷ್ಟು ತೇವಾಂಶವನ್ನು ಕಳೆದುಕೊಂಡಿರುತ್ತದೆ. ಆದ್ದರಿಂದ ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಒಂದು ಲೋಟ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ.

6. ಸೂರ್ಯನ ಕಿರಣ:

ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕೋಣೆಯ ಕಿಟಕಿಯ ಪರದೆಗಳನ್ನು ತೆರೆಯಿರಿ. ಇದರಿಂದ ನಿಮ್ಮ ಕೋಣೆಯು ಬೆಳಗುತ್ತದೆ ಮತ್ತು ನಿಮ್ಮನ್ನು ಮಾನಸಿಕವಾಗಿ ಆರೋಗ್ಯದಿಂದಿಡಲು ಸಹಾಯಮಾಡುತ್ತದೆ.

ಜೀವವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: