New Year Party: ನಿಮಗೆ ಪಾರ್ಟಿ ಇಷ್ಟವಿಲ್ಲದಿದ್ದರೆ, ನ್ಯೂ ಇಯರ್​ನ್ನು ಹೀಗೆ ಆಚರಿಸಿ

ಕೆಲವರು ಈ ತಯಾರಿಯಲ್ಲಿ ನಿರತರಾಗಿದ್ದಾರೆ, ಇನ್ನೂ ಕೆಲವರು ಯಾವುದೇ ಪ್ಲಾನ್ಸ್ ಮಾಡಿರುವುದಿಲ್ಲ. ನೀವು ಈ ಎರಡನೆಯ ಗುಂಪಿಗೆ ಸೇರಿದವರಾಗಿದ್ದರೆ, ನಿಮಗೆ ಹೊಸ ವರ್ಷದ ಮುನ್ನಾದಿನವನ್ನು ಮನೆಯಲ್ಲಿಯೇ ಆಚರಿಸಲು ಕೆಲವೊಂದು ಆಸಕ್ತಿದಾಯಕ ಐಡಿಯಾಗಳು ಇಲ್ಲಿವೆ.

New Year Party: ನಿಮಗೆ ಪಾರ್ಟಿ ಇಷ್ಟವಿಲ್ಲದಿದ್ದರೆ, ನ್ಯೂ ಇಯರ್​ನ್ನು ಹೀಗೆ ಆಚರಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 31, 2022 | 6:40 PM

ನೀವು ಸೆಲ್ಫ್ ಪ್ಯಾಂಪರಿಂಗ್ ಸೆನ್‌ನಲ್ಲಿ ತೊಡಗುವುದರಿಂದ ಹಿಡಿದು ದೂರದಲ್ಲಿರುವ ನಿಮ್ಮ ಪ್ರೀತಿ ಪಾತ್ರರೊಂದಿಗೆ ವರ್ಚುವಲ್ ದಿನಾಂಕವನ್ನು ಪಾರ್ಟಿ ಅಥವಾ ಡೇಟ್‌ನ್ನು ಯೋಜಿಸುವವರೆಗೆ, ನೀವು ಹೊಸ ವರ್ಷದ ಮುನ್ನಾದಿನವನ್ನು ವಿಶೇಷವಾಗಿಸಲು ಸಾಕಷ್ಟು ಮಾರ್ಗಗಳಿವೆ. ಹೊಸ ವರ್ಷದ ಮುನ್ನಾದಿನ ಬಂದು ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭಗೊಳ್ಳಲಿದೆ. ಕೆಲವರು ಈ ತಯಾರಿಯಲ್ಲಿ ನಿರತರಾಗಿದ್ದಾರೆ, ಇನ್ನೂ ಕೆಲವರು ಯಾವುದೇ ಪ್ಲಾನ್ಸ್ ಮಾಡಿರುವುದಿಲ್ಲ. ನೀವು ಈ ಎರಡನೆಯ ಗುಂಪಿಗೆ ಸೇರಿದವರಾಗಿದ್ದರೆ, ನಿಮಗೆ ಹೊಸ ವರ್ಷದ ಮುನ್ನಾದಿನವನ್ನು ಮನೆಯಲ್ಲಿಯೇ ಆಚರಿಸಲು ಕೆಲವೊಂದು ಆಸಕ್ತಿದಾಯಕ ಐಡಿಯಾಗಳು ಇಲ್ಲಿವೆ.

ಸೆಲ್ಫ್ ಪ್ಯಾಂಪರಿಂಗ್ ಸೆಷನ್‌ನಲ್ಲಿ ತೊಡಗಿಕೊಳ್ಳುವುದರಿಂದ ಹಿಡಿದು ನಿಮ್ಮ ಪ್ರೀತಿ ಪಾತ್ರರೊಂದಿಗೆ ವರ್ಚುವಲ್ ಪಾರ್ಟಿಯನ್ನು ಯೋಜಿಸುವವರೆಗೆ, ನೀವು ಹೊಸ ವರ್ಷದ ಮುನ್ನಾದಿನವನ್ನು ವಿಶೇಷವಾಗಿಸಲು ಸಾಕಷ್ಟು ಮಾರ್ಗಗಳಿವೆ. ನೀವು ವಿಶೇಷವಾಗಿ ಆಗಿ 2023ರ ವರ್ಷವನ್ನು ಬರ ಮಾಡಿಕೊಳ್ಳಬೇಕು ಎಂದು ಬಯಸಿದರೆ ಈ 7 ಅಂಶಗಳನ್ನು ಮಾಡಿ.

1. ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸಿ ಮತ್ತು ಸ್ನೇಹಶೀಲ ಕಾರ್ನರ್‌ನ್ನು ನಿರ್ಮಿಸಿ

ಅವ್ಯವಸ್ತಗೊಂಡ ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸುವ ಮೂಲಕ ಹೊಸವರ್ಷವನ್ನು ಸ್ವಾಗತಿಸಿ. ಅನಗತ್ಯವಾಗಿ ಜಾಗ ಆಕ್ರಮಿಸಿಕೊಳ್ಳುವ ವಸ್ತುಗಳು ಹಾಗೂ ನಿಮ್ಮ ವಾಡ್ರೋಬ್‌ನಲ್ಲಿ ಇರುವ ಅನಗತ್ಯ ವಸ್ತುಗಳನ್ನು ಹೊರ ಹಾಕುವ ಮೂಲಕ ಕೋಣೆಯನ್ನು ಡೀಪ್ ಕ್ಲೀನಿಂಗ್ ಮಾಡಿ. ಸುಂದರವಾದ ಒಳಾಂಗಣ ಸಸ್ಯ, ಡೆಕೋರ್ ಪೀಸ್‌ಗಳು, ಸುಂದರವಾದ ರಗ್, ಕನ್ನಡಿ, ಲ್ಯಾಂಪ್ ಶೇಡ್ ಅಥವಾ ಕೋಣೆಯನ್ನು ಸುಂದರವಾಗಿ ಕಾಣುವಂತೆ ಮಾಡುವ ಕೆಲವೊಂದು ವಸ್ತುಗಳನ್ನು ಜೋಡಿಸುವ ಮೂಲಕ ಕೋಣೆಯನ್ನು ಯೂನಿಕ್ ಆಗಿ ಸೆಟ್‌ಅಪ್ ಮಾಡಿಕೊಳ್ಳಬಹುದು. ಮತ್ತು ರೂಮ್ ಕ್ಲೀನ್ ಮಾಡುವುದು ಒಂದು ರೀತಿಯ ಥೆರಫಿ ಆಗಿದೆ.

2. ಪುಸ್ತಕವನ್ನು ಓದಿ

ಒಂದು ಕಪ್ ಹಾಟ್ ಚಾಕೊಲೇಟ್ ಸವಿಯುತ್ತಲೋ ಅಥವಾ ನಿಮ್ಮ ನೆಚ್ಚಿನ ತಿನಿಸನ್ನು ತಿನ್ನುತ್ತಾ ಬೆಚ್ಚಗಿನ ಕಂಬಳಿಯನ್ನು ಮೈಗೆ ಹಾಸುತ್ತಾ ನಿಮ್ಮ ನೆಚ್ಚಿನ ಪುಸ್ತಕವನ್ನು ಓದುತ್ತಾ ಮಧ್ಯರಾತ್ರಿ ಹೊಸ ವರ್ಷವನ್ನು ಸ್ವಾಗತಿಸಬಹುದು. ಹೆಚ್ಚಿನ ಪುಸ್ತಕಗಳನ್ನು ಓದುವುದು ನಿಮ್ಮ ಹೊಸ ವರ್ಷದ ಸಂಕಲ್ಪಗಳಲ್ಲಿ ಒಂದಾಗಿದ್ದರೆ, 2023ನ್ನು ಸ್ವಾಗತಿಸಲು ಪುಸ್ತಕವನ್ನು ಓದುವುದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ.

3. ಸ್ವತಃ ನೀವೆ ರುಚಿಕರವಾದ ಊಟವನ್ನು ತಯಾರಿಸಿ

ನಿಮ್ಮನ್ನು ಕಾರ್ಯನಿರತವಾಗಿಟ್ಟುಕೊಳ್ಳಲು ಮತ್ತು ಹೊಸ ವರ್ಷವನ್ನು ಆಚರಿಸಲು ಮತ್ತೊಂದು ಮಾರ್ಗವೆಂದರೆ ಆರೋಗ್ಯಕರ ಊಟವನ್ನು ಮನೆಯಲ್ಲಿಯೆ ತಯಾರಿಸಿಕೊಂಡು ತಿನ್ನುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು.

ಇದನ್ನು ಓದಿ:ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರನ್ನು ಇಂಪ್ರೆಸ್​ ಮಾಡಲು ಬಾದಾಮ್​ ಹಲ್ವಾ ಮಾಡಿಕೊಡಿ – New Year 2022

4. ನೀವು ಧೀರ್ಘಕಾಲದ ವರೆಗೆ ಮಾತನಾಡದ ಯಾರಿಗಾದರೂ ಕರೆ ಮಾಡಿ

ನಿಮ್ಮ ಬ್ಯುಸಿ ಲೈಫ್‌ಸ್ಟೆಲ್‌ನಲ್ಲಿ ನಿಮ್ಮ ನೆಚ್ಚಿನ ಯಾರಿಗಾದರೂ ಕರೆ ಮಾಡಿ ಮಾತನಾಡಲು ಕಷ್ಟ ಸಾಧ್ಯವಾಗಿರುತ್ತದೆ. ಈ ಸಂದಂರ್ಭದಲ್ಲಿ ನಿಮ್ಮ ಸ್ನೇಹಿತರಿಗೋ ಅಥವಾ ನಿಮ್ಮ ನೆಚ್ಚಿನ ವ್ಯಕ್ತಿಗಳಿಗೆ ಕರೆ ಮಾಡಿ ಮಾತನಾಡುವ ಮೂಲಕ ಸಮಯ ಕಳೆಯಬಹುದು.

5. F.R.I.E.N.D.S ಚಿತ್ರವನ್ನು ಹೆಚ್ಚು ಹೆಚ್ಚು ಬಾರಿ ವೀಕ್ಷಣೆ ಮಾಡಿ

ಚಲನಚಿತ್ರ ಅಥವಾ ಸಿಟ್ಕಾಮ್‌ಗಳನ್ನು ವೀಕ್ಷಿಸುವ ಮೂಲಕ ಹೊಸ ವರ್ಷದ ಮುನ್ನಾದಿನವನ್ನು ಆಚರಿಸಬಹುದು.

6. ನಿಮ್ಮ ಮೆಚ್ಚಿನ ಹಾಡುಗಳನ್ನು ಪ್ಲೇ ಮಾಡುತ್ತಾ ಲಾಂಗ್ ಡ್ರೆವ್ ಹೋಗಿ

ನಿಮಗೆ ಪಾರ್ಟಿ, ಡಿಜೆ ಇಷ್ಟವಿಲ್ಲದಿದ್ದರೆ, ಶಾಂತತೆಯನ್ನು ಬಯಸುವವರಾಗಿದ್ದರೆ, ನೀವು ಒಬ್ಬರೆ ಮೆಲೋಡಿ ಹಾಡುಗಳನ್ನು ಕೇಳುತ್ತಾ ಕಾರ್‌ನಲ್ಲಿ ಲಾಂಗ್ ಡ್ರೆವ್ ಹೋಗಬಹುದು. ಇದು ನಿಮ್ಮ ಮನಸ್ಸನ್ನು ಕೂಡಾ ರಿಲ್ಯಾಕ್ಸ್ ಮಾಡುತ್ತದೆ.

7. ವರ್ಚುವಲ್ ಪಾರ್ಟಿಗಳನ್ನು ಯೋಜಿಸಿ

ಈ ಹೊಸ ವರ್ಷದ ಮುನ್ನಾದಿನದಂದು ನೀವು ನಿಮ್ಮ ಪ್ರೀತಿ ಪಾತ್ರರಿಂದ ದೂರವಿದ್ದರೆ, ಇಂಟರ್‌ನೆಟ್ ಮೂಲಕ ವರ್ಚುವಲ್ ಪಾರ್ಟಿಯನ್ನು ಪ್ಲಾನ್ ಮಾಡಿ. ಚೆನ್ನಾಗಿರುವ ಬಟ್ಟೆಯನ್ನು ಹಾಕಿ, ಫುಡ್ ಮತ್ತು ಕಾಕ್ಟೆಲ್‌ನ್ನು ಸವಿಯುತ್ತಾ ವರ್ಚುವಲ್ ಆಗಿ ನಿಮ್ಮ ಸ್ನೇಹಿತರೊಂದಿಗೆ ದೂರದಿಂದಲೇ ಸಮಯವನ್ನು ಕಳೆಯಬಹುದು.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Sat, 31 December 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್