ಗರ್ಭಾವಸ್ಥೆಯೂ ಮಹಿಳೆಯರ ಜೀವನದಲ್ಲಿ ಅತ್ಯಂತ ಮಹತ್ತರವಾದ ಘಟ್ಟವಾಗಿದ್ದು, ಈ ಸಮಯದಲ್ಲಿ ಅತಿಯಾದ ಕಾಳಜಿಯೂ ಅಗತ್ಯ. ಆಹಾರ ಕ್ರಮ ಹಾಗೂ ಜೀವನ ಶೈಲಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ ಆಗುತ್ತದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಿದ್ದರೆ ಮಾತ್ರ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯೂ ಸರಿಯಾಗಿ ಆಗಲು ಸಾಧ್ಯ. ಆದರೆ ಇದೀಗ ಮೂವತ್ತು ವರ್ಷದ ಬಳಿಕ ಗರ್ಭವನ್ನು ಧರಿಸುತ್ತಿರುವ ಮಹಿಳೆಯರಲ್ಲಿ ಸ್ಥೂಲಕಾಯದ ಸಮಸ್ಯೆಯೂ ಹೆಚ್ಚಾಗುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ ಚಂದ್ರಿಕಾ ಆನಂದ್ ಅವರು, ‘ಭಾರತದಲ್ಲಿ ಗರ್ಭಿಣಿ ಮಹಿಳೆಯರಲ್ಲಿ ಸ್ಥೂಲಕಾಯ ಸಮಸ್ಯೆಯೂ ಏರಿಕೆಯಾಗುತ್ತಿದ್ದು, ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಹಲವಾರು ಕಾಯಿಲೆಗಳನ್ನು ಉಂಟು ಮಾಡಬಹುದು. ಅತಿಯಾದ ತೂಕವು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮವನ್ನು ಬೀರಬಹುದು’ ಎಂದಿದ್ದಾರೆ.
ಇದನ್ನೂ ಓದಿ: ಈ ವರ್ಷ ರಂಜಾನ್ ಯಾವಾಗ?; ದಿನಾಂಕ, ಸಮಯ, ಇಫ್ತಾರ್ ಕೂಟದ ವಿವರ ಇಲ್ಲಿದೆ
ಸ್ಥೂಲಕಾಯದ ಸಮಸ್ಯೆಯನ್ನು ಹೊಂದಿರುವ ಗರ್ಭಿಣಿ ಮಹಿಳೆಯರು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ಈ ಸಮಯದಲ್ಲಿ ವೈದ್ಯರೊಂದಿಗೆ ಪೂರ್ವಭಾವಿ ಸಮಾಲೋಚನೆ ಹಾಗೂ ನಿಯಮಿತ ತಪಾಸಣೆಗಳಿಂದ ಅತಿಯಾದ ತೂಕದ ಸಮಸ್ಯೆಯನ್ನು ಗುರುತಿಸಬಹುದಾಗಿದೆ. ಇದರಿಂದಾಗಿ ತಾಯಿ ಮತ್ತು ಮಗುವಿಗೆ ಸುರಕ್ಷಿತ ಮತ್ತು ಆರೋಗ್ಯಕರ ಗರ್ಭಧಾರಣೆಕ್ಕೆ ಸಹಾಯಕವಾಗಲಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Mon, 4 March 24