Ramadan 2024: ಈ ವರ್ಷ ರಂಜಾನ್ ಯಾವಾಗ?; ದಿನಾಂಕ, ಸಮಯ, ಇಫ್ತಾರ್​ ಕೂಟದ ವಿವರ ಇಲ್ಲಿದೆ

ರಂಜಾನ್ ಮುಸ್ಲಿಮರ ಪವಿತ್ರ ಹಬ್ಬ. ರಂಜಾನ್ ಕೋಮು ಸೌಹಾರ್ದತೆಯ ತಿಂಗಳಾಗಿದ್ದು, ಆಧ್ಯಾತ್ಮಿಕ ಅನ್ವೇಷಣೆಯ ಸಮಯದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡಲಾಗುತ್ತದೆ. ಪವಿತ್ರ ಗ್ರಂಥ ಕುರಾನ್‌ನ ತೀವ್ರವಾದ ಪಠಣಗಳು ಮತ್ತು ದಾನ ಕಾರ್ಯಗಳನ್ನು ಮಾಡಲಾಗುತ್ತದೆ. ಚಂದ್ರನ ದರ್ಶನವನ್ನು ಅವಲಂಬಿಸಿ ರಂಜಾನ್ ಸಾಮಾನ್ಯವಾಗಿ 29 ಅಥವಾ 30 ದಿನಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಎಲ್ಲಾ ವಯಸ್ಕ ಮುಸ್ಲಿಮರು ಉಪವಾಸ ಮಾಡುವುದು ಕಡ್ಡಾಯವಾಗಿದೆ.

Ramadan 2024: ಈ ವರ್ಷ ರಂಜಾನ್ ಯಾವಾಗ?; ದಿನಾಂಕ, ಸಮಯ, ಇಫ್ತಾರ್​ ಕೂಟದ ವಿವರ ಇಲ್ಲಿದೆ
ರಂಜಾನ್‌Image Credit source: iStock
Follow us
ಸುಷ್ಮಾ ಚಕ್ರೆ
|

Updated on:Mar 07, 2024 | 2:50 PM

ರಂಜಾನ್ ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ತಿಂಗಳು. ಪ್ರಪಂಚದಾದ್ಯಂತ ಲಕ್ಷಾಂತರ ಮುಸ್ಲಿಮರಿಗೆ ಈ ರಂಜಾನ್ ಬಹಳ ಮುಖ್ಯವಾದ ಹಬ್ಬವಾಗಿದೆ. ರಂಜಾನ್ ಆಚರಣೆ 29ರಿಂದ 30 ದಿನಗಳವರೆಗೆ ಇರುತ್ತದೆ. ರಂಜಾನ್ (Ramadan 2024) ಉಪವಾಸ, ಪ್ರಾರ್ಥನೆ, ಸಮುದಾಯದ ಒಗ್ಗಟ್ಟನ್ನು ಒಳಗೊಂಡಿರುತ್ತದೆ. ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರವಾದಿ ಮುಹಮ್ಮದ್‌ಗೆ ಕುರಾನ್‌ನ ಮೊದಲ ಬಹಿರಂಗಪಡಿಸುವಿಕೆಯ ಸ್ಮರಣಾರ್ಥವಾಗಿ ರಂಜಾನ್ ಅನ್ನು ಆಚರಿಸಲಾಗುತ್ತದೆ. ಆದರೆ, ಇಸ್ಲಾಮಿಕ್ ಪವಿತ್ರ ತಿಂಗಳ ಆರಂಭವು ಚಂದ್ರನ ದರ್ಶನದ ಮೇಲೆ ಅವಲಂಬಿತವಾಗಿರುತ್ತದೆ. ಈ ವರ್ಷ, ರಂಜಾನ್ ಮಾರ್ಚ್ 11 ಅಥವಾ 12ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಈ ರಂಜಾನ್ ತಿಂಗಳು ಏಪ್ರಿಲ್ 9ರಂದು ಕೊನೆಗೊಳ್ಳುವ ಸಾಧ್ಯತೆಯಿದೆ. ಕಳೆದ ವರ್ಷ ರಂಜಾನ್ ಮಾರ್ಚ್ 24ರಂದು ಪ್ರಾರಂಭವಾಗಿತ್ತು ಮತ್ತು ಏಪ್ರಿಲ್ 21ರಂದು ಮುಕ್ತಾಯವಾಗಿತ್ತು.

ಪ್ರಪಂಚದಾದ್ಯಂತ 2024ರ ರಂಜಾನ್​ನ ಕೆಲವು ನಿರೀಕ್ಷಿತ ದಿನಾಂಕಗಳು ಇಲ್ಲಿವೆ. ಯುಎಇ, ಬಹ್ರೇನ್, ಕುವೈತ್, ಲೆಬನಾನ್, ಓಮನ್, ಪಾಕಿಸ್ತಾನ, ಸೌದಿ ಅರೇಬಿಯಾ, ಯುಕೆ, ಯುಎಸ್, ಟರ್ಕಿ, ಮಾಲ್ಡೀವ್ಸ್ ಮುಂತಾದ ದೇಶಗಳಲ್ಲಿ ರಂಜಾನ್ ಮಾರ್ಚ್ 11ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಭಾರತ, ಬಾಂಗ್ಲಾದೇಶ, ಇಂಡೋನೇಷ್ಯಾ, ಈಜಿಪ್ಟ್ ದೇಶಗಳಲ್ಲಿ ರಂಜಾನ್ ಮಾರ್ಚ್ 12ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.

ಇದನ್ನೂ ಓದಿ: Fact Check: ಸೌದಿ ಅರೇಬಿಯಾ ಮಸೀದಿಗಳ ಒಳಗೆ ಇಫ್ತಾರ್ ನಿಷೇಧ? ಸತ್ಯಾಸತ್ಯತೆ ಏನು?

ರಂಜಾನ್ ಸಮಯದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮುಸ್ಲಿಮರು ಉಪವಾಸ ಆಚರಿಸುತ್ತಾರೆ. ಮಾರಣಾಂತಿಕ ಅಥವಾ ದೀರ್ಘಕಾಲದ ಅನಾರೋಗ್ಯ ಇರುವವರು, ಪ್ರಯಾಣ ಮಾಡುವವರು, ವಯಸ್ಸಾದವರು, ಸ್ತನ್ಯಪಾನ ಮಾಡುವವರು, ಮಧುಮೇಹ ಸಮಸ್ಯೆ ಇರುವವರು ಅಥವಾ ಮುಟ್ಟಾದ ಮಹಿಳೆಯರು ರಂಜಾನ್ ಉಪವಾಸ ಆಚರಿಸುವುದಿಲ್ಲ. ಉಪವಾಸದ ಅವಧಿಯ 2 ಮುಖ್ಯ ಭೋಜನಗಳೆಂದರೆ ಇಫ್ತಾರ್ ಮತ್ತು ಸುಹೂರ್. ಇಫ್ತಾರ್ ಅನ್ನು ಸೂರ್ಯಾಸ್ತದ ನಂತರ ಸೇವಿಸಲಾಗುತ್ತದೆ ಮತ್ತು ಸುಹೂರ್ ಅನ್ನು ಸೂರ್ಯ ಹುಟ್ಟುವ ಮೊದಲು ಸೇವಿಸಲಾಗುತ್ತದೆ.

ಕುಟುಂಬಗಳು ಮತ್ತು ಸಮುದಾಯಗಳು ಒಟ್ಟಾಗಿ ತಮ್ಮ ಉಪವಾಸವನ್ನು ಮುರಿಯಲು ಇಫ್ತಾರ್ ಭೋಜನವು ಜನಪ್ರಿಯ ಮಾರ್ಗವಾಗಿದೆ. ಸಾಮಾನ್ಯವಾಗಿ ಖರ್ಜೂರ ಮತ್ತು ನೀರಿನ ಸೇವನೆಯಿಂದ ಇಫ್ತಾರ್ ಪ್ರಾರಂಭವಾಗುತ್ತದೆ. ನಂತರ ದೊಡ್ಡ ಊಟ ಇರುತ್ತದೆ. ಇಸ್ಲಾಂನಲ್ಲಿ ಉಪವಾಸವು ನಂಬಿಕೆಯ ಐದು ಸ್ತಂಭಗಳಲ್ಲಿ ಒಂದಾಗಿದೆ. ಜೊತೆಗೆ ಇದರ ಜೊತೆಗೆ ನಂಬಿಕೆ, ಪ್ರಾರ್ಥನೆ, ದಾನ ಮತ್ತು ತೀರ್ಥಯಾತ್ರೆ ಮಾಡಲಾಗುತ್ತದೆ. ತೀರ್ಥಯಾತ್ರೆಯನ್ನು ಅರೇಬಿಕ್‌ನಲ್ಲಿ ಹಜ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಆ ದೇವಸ್ಥಾನಕ್ಕೆ ಮುಸ್ಲಿಂ ಭಕ್ತರು ಹೆಚ್ಚಾಗಿ ಭೇಟಿ ನೀಡುತ್ತಾರೆ.. ಯಾಕೆ ಗೊತ್ತಾ? ಎಲ್ಲಿದೆ?

ಈ ವರ್ಷ ರಂಜಾನ್ ಯಾವಾಗ?:

ರಂಜಾನ್ ಎಂಬ ಪದವು ಅರೇಬಿಕ್ ಮೂಲವಾದ ರಮಿಡಾ ಅಥವಾ ಅರ್-ರಾಮದ್‌ನಿಂದ ಬಂದಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಹಂತಗಳನ್ನು ಅನುಸರಿಸುತ್ತದೆ. ಇದನ್ನು ಸಾಮಾನ್ಯವಾಗಿ ಚಂದ್ರನ ಚಕ್ರ ಎಂದು ಕರೆಯಲಾಗುತ್ತದೆ. ಇದರ ಪರಿಣಾಮವಾಗಿ, ಪವಿತ್ರ ರಂಜಾನ್ ತಿಂಗಳು ಗ್ರೆಗೋರಿಯನ್ ಕ್ಯಾಲೆಂಡರ್​ನಲ್ಲಿ ಪ್ರತಿ ವರ್ಷ ಸುಮಾರು 10 ದಿನಗಳ ಮುಂಚಿತವಾಗಿ ಬರುತ್ತದೆ. ಈ ವರ್ಷ ರಂಜಾನ್ ಮಾರ್ಚ್ 11 ಅಥವಾ ಮಾರ್ಚ್ 12ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ.

ಸಾಮಾನ್ಯವಾಗಿ, ರಂಜಾನ್‌ನ ಅರ್ಧಚಂದ್ರಾಕೃತಿಯು ಸೌದಿ ಅರೇಬಿಯಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳೊಂದಿಗೆ ಭಾರತದ ಕೆಲವು ಭಾಗಗಳಲ್ಲಿ ಮೊದಲು ಕಂಡುಬರುತ್ತದೆ. ಇದಾದ ಒಂದು ದಿನದ ನಂತರ ಉಳಿದ ಭಾರತದ ಭಾಗಗಳು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಕಂಡುಬರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 4 March 24

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ