Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies : ಸಕ್ಕರೆ ಕಾಯಿಲೆಗೆ ಮನೆಯಲ್ಲೇ ಕಂಡುಕೊಳ್ಳಿ ಶಾಶ್ವತ ಪರಿಹಾರ

ಇತ್ತೀಚೆಗಿನ ದಿನಗಳಲ್ಲಿ ಕಾಯಿಲೆ ಬರುವುದಕ್ಕೆ ಇಷ್ಟೇ ವಯಸ್ಸು ಆಗಬೇಕಿಲ್ಲ. ಈಗಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಯೂ ಕಾಡಲು ಶುರುವಾಗುತ್ತವೆ. ಅದರಲ್ಲಿಯೂ ಈ ರಕ್ತದೊತ್ತಡ ಹಾಗೂ ಮಧುಮೇಹದಂತಹ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈಗೀಗ ಈ ಸಕ್ಕರೆ ಕಾಯಿಲೆ ಬಳಲುವವರ ಸಂಖ್ಯೆಯೂ ಹೆಚ್ಚಾಗಿದ್ದು, ಮನೆಯಲ್ಲೇ ಮಾಡುವ ಆಹಾರ ಪಥ್ಯ ಹಾಗೂ ಮನೆ ಮದ್ದಿನಿಂದ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿಕೊಳ್ಳಬಹುದು.

Home Remedies : ಸಕ್ಕರೆ ಕಾಯಿಲೆಗೆ ಮನೆಯಲ್ಲೇ ಕಂಡುಕೊಳ್ಳಿ ಶಾಶ್ವತ ಪರಿಹಾರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 04, 2024 | 5:27 PM

ಮಧುಮೇಹವು ಗಂಭೀರವಾದ ಕಾಯಿಲೆಯೂ ಅಲ್ಲದಿದ್ದರೂ ಆಹಾರ ಸೇವನೆ ವಿಚಾರದಲ್ಲಿಯೂ ಸ್ವಲ್ಪ ಜಾಗರೂಕರಾಗಿರಬೇಕು. ಬಾಯಿಗೆ ರುಚಿ ಬೇಕು ಎಂದು ಸಿಕ್ಕ ಸಿಕ್ಕ ಆಹಾರವನ್ನು ಸೇವಿಸಿದರೆ ಆರೋಗ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯಿಂದ ಬಳಲುವವರು ತಿನ್ನಲು ಬಯಕೆಯಾದರೂ ಎಲ್ಲಾ ಆಹಾರಗಳನ್ನು ಸೇವಿಸುವ ಆಗಿಲ್ಲ. ಒಂದು ವೇಳೆ ಮೈ ಮರೆತು ಸೇವಿಸಿಬಿಟ್ಟರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕಷ್ಟ ಪಡಬೇಕಾಗುತ್ತದೆ. ಹೀಗಾಗಿ ತಮ್ಮ ಆಹಾರ ಕ್ರಮಗಳನ್ನು ಕಟ್ಟು ನಿಟ್ಟಾಗಿದ್ದರೆ ಮಾತ್ರ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದು ಕಷ್ಟವೇನಲ್ಲ.

  1. ನಿಯಮಿತವಾಗಿ ನೆಲ್ಲಿಕಾಯಿಯ ಸೇವನೆ ಮಾಡುವುದರಿಂದ ಮಧುಮೇಹ ಸಮಸ್ಯೆಯೂ ದೂರವಾಗುತ್ತದೆ.
  2. ಬೇಯಿಸಿದ ಹುರುಳಿ ಕಾಳಿನ ಬಸಿದು, ಸಾರನ್ನು ತಯಾರಿಸಿ ಸೇವಿಸಿದರೆ ಮಧುಮೇಹ ಸಮಸ್ಯೆಗೆ ಉತ್ತಮ ಮನೆಮದ್ದು.
  3. ಮೂರು ತಿಂಗಳವರೆಗೆ ಎಂಟು ಹತ್ತು ಕರಿಬೇವಿನ ಸೊಪ್ಪನ್ನು ತಿನ್ನುವವ ಅಭ್ಯಾಸವನ್ನು ಬೆಳೆಸಿಕೊಂಡರೆ ಮಧುಮೇಹದಿಂದ ಪಾರಾಗಬಹುದು.
  4. ನೆಲ್ಲಿಕಾಯಿಯನ್ನು ನುಣ್ಣಗೆ ಅರೆದು ಸಕ್ಕರೆ ಬೆರೆಸಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದು.
  5. ದಿನನಿತ್ಯ ಕಡಲೆಕಾಯಿಯ ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯು ನಿವಾರಣೆಯಾಗುತ್ತದೆ.
  6. ಸಿಹಿಗುಂಬಳಕಾಯಿಯನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸವಿಟ್ಟುಕೊಂಡರೆ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು.
  7. ಪ್ರತಿದಿನ ಖರ್ಜೂರವನ್ನು ತಿನ್ನುವುದರಿಂದ ಮಧುಮೇಹ ರೋಗವು ಗುಣಮುಖ ವಾಗುತ್ತದೆ.
  8. ರಾಗಿ ಹಿಟ್ಟಿನಲ್ಲಿ ಮುದ್ದೆ ಮಾಡಿ ಸೇವನೆ ಮಾಡುತ್ತಿದ್ದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.
  9. ಹಸಿ ರಾಗಿ ತೆನೆಯನ್ನು ಸುಟ್ಟು, ಕಾಳುಗಳನ್ನು ಉದುರಿಸಿ ಅದಕ್ಕೆ ಕೊಬ್ಬರಿ, ಬೆಲ್ಲ ಸೇರಿಸಿ ಸೇವಿಸುತ್ತಿದ್ದರೆ ಮಧುಮೇಹಕ್ಕೆ ಪರಿಣಾಮಕಾರಿಯಾದ ಔಷಧಿಯಾಗಿದೆ.
  10. ಹಾಗಲಕಾಯಿಯ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣವಿದ್ದರೆ ನಿಯಂತ್ರಣಕ್ಕೆ ಬರುತ್ತದೆ.
  11. ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇವಿಸುತ್ತ ಬಂದರೆ ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ