AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Gain : ನೀವು ದಪ್ಪಗಾಗಬೇಕಾ ಹತ್ತೇ ನಿಮಿಷದಲ್ಲಿ ಮಾಡಿ ಈ ಶೇಕ್

ಕೆಲವರು ನೋಡುವುದಕ್ಕೆ ತೆಳ್ಳಗೆ ಇರುತ್ತಾರೆ. ಸಣ್ಣಗೆ ಇರುವವರನ್ನು ನೋಡಿ ಇವರೇನಪ್ಪಾ ಡಯಟ್ ಮಾಡುತ್ತಾರಾ ಎಂದೆನಿಸಬಹುದು. ಕೆಲವೊಮ್ಮೆ ಈ ತೆಳ್ಳಗಿನ ಮೈ ಕಟ್ಟು ಹೊಂದಿರುವವರನ್ನು ನೋಡಿ ಹಂಗಿಸಿ ಮಾತನಾಡುವವರೇ ಹೆಚ್ಚು. ಸಮಾರಂಭಗಳಿಗೆ ಹೋದರಂತೂ ಈ ಸಂಬಂಧಿಕರು ಕೇಳುವ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟವಾಗುತ್ತದೆವಾಗುತ್ತದೆ. ಅದಲ್ಲದೆ ತೆಳ್ಳಗಿನ ವ್ಯಕ್ತಿಗಳು ತಮ್ಮ ಅಳಳನ್ನು ತೋಡಿಕೊಳ್ಳುವುದನ್ನು ನೋಡಿರಬಹುದು. ನಾನು ಎಷ್ಟು ತಿಂದರೂ ದಪ್ಪವಾಗುವುದೇ ಇಲ್ಲ ಎನ್ನುವುದಿದೆ. ಆದರೆ ದಪ್ಪವಾಗಲು ಬೇಕಾದಷ್ಟು ತಿಂದರೆ ಸಾಕಾಗುವುದಿಲ್ಲ. ಪೌಷ್ಟಿಕಾಂಶಯುಕ್ತ ಆಹಾರವೂ ಅಷ್ಟೇ ಅಗತ್ಯವಾಗಿರುತ್ತದೆ. ಆದರೆ ತೂಕ ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಸಿಂಪಲ್ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿ ಸೇವಿಸುವುದು ಉತ್ತಮ.

Weight Gain : ನೀವು ದಪ್ಪಗಾಗಬೇಕಾ ಹತ್ತೇ ನಿಮಿಷದಲ್ಲಿ ಮಾಡಿ ಈ ಶೇಕ್
ಸಾಯಿನಂದಾ
| Edited By: |

Updated on: Mar 04, 2024 | 6:04 PM

Share

ಕೆಲವರು ಎಷ್ಟೇ ತಿಂದರೂ ದಪ್ಪಗಾಗುವುದಿಲ್ಲ, ಇನ್ನು ಕೆಲವರು ಏನು ತಿಂದರೆ ಹೋದರೂ ಬಲೂನಿನಂತೆ ಊದಿಕೊಂಡು ಬಿಡುತ್ತಾರೆ. ಇದು ನಮ್ಮ ಸುತ್ತ ಮುತ್ತಲಿನಲ್ಲಿ ಕಾಣಸಿಗುವ ಅನೇಕರ ಸಮಸ್ಯೆಯು ಕೂಡ. ಈ ಸಣ್ಣಗೆ ಇದ್ದವರೂ ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಪ್ರಾಡಕ್ಟ್ ಗಳನ್ನು ಸೇವಿಸಿ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿರುವುದನ್ನು ನೋಡಿರಬಹುದು. ಕೆಲವರು ಐಸ್ ಕ್ರೀಮ್, ಸ್ವೀಟ್ ತಿನ್ನುವ ಮೂಲಕ ದಪ್ಪಗಾಗಲು ಪ್ರಯತ್ನಿಸುತ್ತಾರೆ. ಆದರೆ ಪೌಷ್ಟಿಕಾಂಶಯುಕ್ತ ಆಹಾರದ ಜೊತೆಗೆ ಮಾನಸಿಕವಾಗಿ ನೆಮ್ಮದಿಯೊಂದಿದ್ದರೆ ತನ್ನಿಂದ ತಾನೇ ತೂಕದಲ್ಲಿ ಹೆಚ್ಚಳವಾಗುತ್ತದೆ. ಅದಲ್ಲದೇ, ಮನೆಯಲ್ಲಿಯೇ ಆಹಾರ ಕ್ರಮದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯಕರ ರೀತಿಯಲ್ಲಿ ತೂಕವನ್ನು ಹೆಚ್ಚಿಸುವುದು ಕೊಳ್ಳುವುದು ಸುಲಭ ವಿಧಾನವಾಗಿದೆ.

View this post on Instagram

A post shared by Fitology (@fitologyzone)

ವೆಯಿಟ್ ಗೇನ್ ಶೇಕ್ ಮಾಡಲು ಬೇಕಾಗುವ ಸಾಮಗ್ರಿಗಳು:

ನಾಲ್ಕೈದು ಒಣದ್ರಾಕ್ಷಿ, ಗೇರು ಬೀಜ, ಪಿಸ್ತಾ, ಮೂರು ಖರ್ಜುರ, ಒಂದು ಲೋಟ ಹಾಲು ಹಾಗೂ ಒಂದು ಬಾಳೆಹಣ್ಣು.

ಇದನ್ನೂ ಓದಿ: ಸಕ್ಕರೆ ಕಾಯಿಲೆಗೆ ಮನೆಯಲ್ಲೇ ಕಂಡುಕೊಳ್ಳಿ ಶಾಶ್ವತ ಪರಿಹಾರ

ವೆಯಿಟ್ ಗೇನ್ ಶೇಕ್ ಮಾಡುವ ವಿಧಾನ:

* ಸಮಪ್ರಮಾಣದಲ್ಲಿ ತೆಗೆದುಕೊಂಡ ಒಣದ್ರಾಕ್ಷಿ, ಗೇರು ಬೀಜ, ಬೀಜ ತೆಗೆದ ಖರ್ಜುರ, ಪಿಸ್ತಾ ಒಂದು ಬಟ್ಟಲಿಗೆ ಹಾಕಿಕೊಳ್ಳಿ.

* ಅದೇ ಬಟ್ಟಲಿಗೆ ಒಂದು ಲೋಟವನ್ನು ಹಾಕಿ ಈ ಮಿಶ್ರಣವನ್ನು ಮಿಕ್ಸಿ ಜಾರಿಗೆ ವರ್ಗಾಯಿಸಿ.

* ಕೊನೆಗೆ ಬಾಳೆಹಣ್ಣನ್ನು ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಂಡು ಲೋಟಕ್ಕೆ ವರ್ಗಾಯಿಸಿಕೊಳ್ಳಿ. ಡ್ರೈ ಫ್ರೂಟ್ಸ್ ಗಳನ್ನು ಸಣ್ಣಗೆ ಚೂರುಚೂರಾಗಿ ಕತ್ತರಿಸಿ ಮಿಶ್ರಣದ ಮೇಲ್ಗಡೆ ಹಾಕಿದರೆ ವೆಯಿಟ್ ಗೈನ್ ಶೇಕ್ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ