Obesity during pregnancy : ಗರ್ಭಾವಸ್ಥೆಯಲ್ಲಿ ಕಾಡುವ ಸ್ಥೂಲಕಾಯತೆಯೂ ಈ ಕಾಯಿಲೆಗಳಿಗೂ ಕಾರಣವಾಗಬಹುದು!
ಇತ್ತೀಚೆಗಿನ ಬೊಜ್ಜಿನ ಸಮಸ್ಯೆಯೂ ಸರ್ವೇ ಸಾಮಾನ್ಯವಾಗಿದೆ. ಒತ್ತಡ ಭರಿತವಾದ ಜೀವನ ಶೈಲಿ ಹಾಗೂ ಆಹಾರ ಕ್ರಮವು ಏಕಾಏಕಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಗರ್ಭಿಣಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಸಹಜ. ಭಾರತದಲ್ಲಿ ಗರ್ಭಿಣಿ ಮಹಿಳೆಯರಲ್ಲಿ ಸ್ಥೂಲಕಾಯತೆಯ ಸಮಸ್ಯೆಯೂ ಹೆಚ್ಚಾಗುತ್ತಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರು ಬಹಿರಂಗ ಪಡಿಸಿದ್ದಾರೆ.
ಗರ್ಭಾವಸ್ಥೆಯೂ ಮಹಿಳೆಯರ ಜೀವನದಲ್ಲಿ ಅತ್ಯಂತ ಮಹತ್ತರವಾದ ಘಟ್ಟವಾಗಿದ್ದು, ಈ ಸಮಯದಲ್ಲಿ ಅತಿಯಾದ ಕಾಳಜಿಯೂ ಅಗತ್ಯ. ಆಹಾರ ಕ್ರಮ ಹಾಗೂ ಜೀವನ ಶೈಲಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ ಆಗುತ್ತದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಿದ್ದರೆ ಮಾತ್ರ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯೂ ಸರಿಯಾಗಿ ಆಗಲು ಸಾಧ್ಯ. ಆದರೆ ಇದೀಗ ಮೂವತ್ತು ವರ್ಷದ ಬಳಿಕ ಗರ್ಭವನ್ನು ಧರಿಸುತ್ತಿರುವ ಮಹಿಳೆಯರಲ್ಲಿ ಸ್ಥೂಲಕಾಯದ ಸಮಸ್ಯೆಯೂ ಹೆಚ್ಚಾಗುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ ಚಂದ್ರಿಕಾ ಆನಂದ್ ಅವರು, ‘ಭಾರತದಲ್ಲಿ ಗರ್ಭಿಣಿ ಮಹಿಳೆಯರಲ್ಲಿ ಸ್ಥೂಲಕಾಯ ಸಮಸ್ಯೆಯೂ ಏರಿಕೆಯಾಗುತ್ತಿದ್ದು, ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಹಲವಾರು ಕಾಯಿಲೆಗಳನ್ನು ಉಂಟು ಮಾಡಬಹುದು. ಅತಿಯಾದ ತೂಕವು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮವನ್ನು ಬೀರಬಹುದು’ ಎಂದಿದ್ದಾರೆ.
ಗರ್ಭಾವಸ್ಥೆಯಲ್ಲಿ ಕಾಡುವ ಸ್ಥೂಲಕಾಯತೆಯ ಪರಿಣಾಮಗಳು
- ಗರ್ಭಾವಸ್ಥೆಯ ಮಧುಮೇಹ: ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ ಹೆಚ್ಚಳದಿಂದ ಮಧುಮೇಹದ ಅಪಾಯವು ಹೆಚ್ಚಾಗಿರುತ್ತದೆ. ಒಂದು ವೇಳೆಯಲ್ಲಿ ಗರ್ಭಾವಸ್ಥೆಯಲ್ಲಿ ಕಾಡುವ ಈ ಸಮಸ್ಯೆಯಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹೆಣಗಾಡಬೇಕಾಗಬಹುದು. ಇದರ ಪರಿಣಾಮವಾಗಿ ಮಗುವಿನ ಬೆಳವಣಿಗೆಯ ಮೇಲು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ.
- ಪ್ರಿಕ್ಲಾಂಪ್ಸಿಯಾ: ಸ್ಥೂಲಕಾಯದಿಂದ ಗರ್ಭಿಣಿ ಮಹಿಳೆಯರಲ್ಲಿ ಪ್ರಿಕ್ಲಾಂಪ್ಸಿಯಾ ಸಮಸ್ಯೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆಯು ಕಾಡಿದಾಗ ಅಧಿಕ ರಕ್ತದೊತ್ತಡ, ಕಾಲುಗಳು, ಪಾದಗಳು ಹಾಗೂ ತೋಳುಗಳಲ್ಲಿ ಊತ ಕಂಡು ಬರುತ್ತದೆ. ಇದು ಮಗುವಿನ ಅಕಾಲಿಕ ಜನನಕ್ಕೆ ಕಾರಣವಾಗಬಹುದು. ಅದಲ್ಲದೇ, ತಾಯಿ ಹಾಗೂ ಮಗುವಿನ ಜೀವವನ್ನು ಉಂಟು ಮಾಡುತ್ತದೆ.
- ಸಿಸೇರಿಯನ್ ಹೆರಿಗೆಯ ಸಾಧ್ಯತೆ ಹೆಚ್ಚು : ಗರ್ಭಿಣಿ ಮಹಿಳೆಯರು ಸ್ಥೂಲಕಾಯದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಅಂತಹವರಿಗೆ ಸಿಸೇರಿಯನ್ ಮೂಲಕ ಮಗುವನ್ನು ಹೊರ ತೆಗೆಯಬೇಕಾಗುತ್ತದೆ. ಹೀಗಾಗಿ ನಾರ್ಮಲ್ ಹೆರಿಗೆಯನ್ನು ಮಾಡಿಸುವುದು ಕಷ್ಟವಾಗಿರುತ್ತದೆ.
- ಮ್ಯಾಕ್ರೋಸೋಮಿಯಾ: ಗರ್ಭಾವಸ್ಥೆಯಲ್ಲಿರುವ ಮಹಿಳೆಯರಲ್ಲಿ ಕಾಡುವ ಸಮಸ್ಯೆಗಳಲ್ಲಿ ಮ್ಯಾಕ್ರೋಸೋಮಿಯಾ ಕೂಡ ಒಂದು. ಮ್ಯಾಕ್ರೋಸೋಮಿಯಾ ಎಂದರೆ ಮಗುವಿನ ತೂಕವು ಹೆಚ್ಚಾಗುವುದು. ಮಗುವಿನ ತೂಕದ ಹೆಚ್ಚಳದಿಂದ ಹೆರಿಗೆಯ ಸಮಯದಲ್ಲಿ ಯೋನಿಯ ಭಾಗದಲ್ಲಿ ಹಾಗೂ ಮಗುವಿಗೆ ಗಾಯಗಳಾಗುವ ಸಾಧ್ಯತೆಯೂ ಹೆಚ್ಚು.
ಇದನ್ನೂ ಓದಿ: ಈ ವರ್ಷ ರಂಜಾನ್ ಯಾವಾಗ?; ದಿನಾಂಕ, ಸಮಯ, ಇಫ್ತಾರ್ ಕೂಟದ ವಿವರ ಇಲ್ಲಿದೆ
ಸ್ಥೂಲಕಾಯದ ಸಮಸ್ಯೆಯನ್ನು ಹೊಂದಿರುವ ಗರ್ಭಿಣಿ ಮಹಿಳೆಯರು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಅಭ್ಯಾಸಗಳನ್ನು ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ಈ ಸಮಯದಲ್ಲಿ ವೈದ್ಯರೊಂದಿಗೆ ಪೂರ್ವಭಾವಿ ಸಮಾಲೋಚನೆ ಹಾಗೂ ನಿಯಮಿತ ತಪಾಸಣೆಗಳಿಂದ ಅತಿಯಾದ ತೂಕದ ಸಮಸ್ಯೆಯನ್ನು ಗುರುತಿಸಬಹುದಾಗಿದೆ. ಇದರಿಂದಾಗಿ ತಾಯಿ ಮತ್ತು ಮಗುವಿಗೆ ಸುರಕ್ಷಿತ ಮತ್ತು ಆರೋಗ್ಯಕರ ಗರ್ಭಧಾರಣೆಕ್ಕೆ ಸಹಾಯಕವಾಗಲಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Mon, 4 March 24