New Color Olo: ಮಾನವರು ಇದುವರೆಗೆ ನೋಡಿರದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು

ಮಾನವರು ಇದುವರೆಗೆ ನೋಡಿರದ ಹೊಸ ಬಣ್ಣವನ್ನು ಕಂಡುಹಿಡಿಯಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಸೈನ್ಸ್ ಅಡ್ವಾನ್ಸಸ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸಂಶೋಧಕರು ಈ ಹೊಸ ಬಣ್ಣಕ್ಕೆ ಓಲೋ ಎಂದು ಹೆಸರಿಟ್ಟಿದ್ದು, ಈ ವಿಶೇಷ ಬಣ್ಣವನ್ನು ಜಗತ್ತಿನಲ್ಲಿ ಈವರೆಗೆ ಬರೀ 5 ಜನ ಮಾತ್ರ ನೋಡಿದ್ದಾರಂತೆ. ಈ ಹೊಚ್ಚ ಹೊಸ ಬಣ್ಣ ನವಿಲಿನ ನೀಲಿ ಬಣ್ಣದೊಂದಿಗೆ ಹೋಲಿಕೆಯನ್ನು ಹೊಂದಿದ್ದು, ಇದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

New Color Olo: ಮಾನವರು ಇದುವರೆಗೆ ನೋಡಿರದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು
ಸಾಂದರ್ಭಿಕ ಚಿತ್ರ
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: Apr 22, 2025 | 5:18 PM

ಕ್ಯಾಲಿಫೋರ್ನಿಯಾ, ಏ. 22: ವಿಜ್ಞಾನಿಗಳು (Scientists) ಒಂದಲ್ಲಾ ಒಂದು ಕುತೂಲಹಕಾರಿ ಸಂಶೋಧನೆ, ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಇಲ್ಲೊಂದು ವಿಜ್ಞಾನಿಗಳ ತಂಡ ಸಂಶೋಧನೆಯೊಂದನ್ನು ಮಾಡಿ ಹೊಸ ಬಣ್ಣವೊಂದನ್ನು (new color) ಕಂಡು ಹಿಡಿದಿದ್ದಾರೆ.  ಏಪ್ರಿಲ್‌ 18 ರಂದು ಸೈನ್ಸ್‌ ಅಡ್ವಾನ್ಸಸ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ಈ ಹೊಸ ಬಣ್ಣವನ್ನು ವಿಜ್ಞಾನಿಗಳು ಓಲೋ  (Olo) ಎಂದು ಹೆಸರಿಸಿದ್ದು, ಈ ವಿಶೇಷ ಬಣ್ಣವನ್ನು ಜಗತ್ತಿನಲ್ಲಿ ಕೇವಲ 5 ಮಂದಿ ಮಾತ್ರ ನೋಡಿದ್ದಾರಂತೆ. ನವಿಲಿನ ನೀಲಿ ಬಣ್ಣದೊಂದಿಗೆ ಹೋಲಿಕೆಯನ್ನು ಹೊಂದಿರುವ ಈ ಬಣ್ಣವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲಂತೆ. ಈ ಬಣ್ಣವನ್ನು ನೋಡಬೇಕಿದ್ದರೆ ಕಣ್ಣಿನ ರೆಟಿನಾಗಳ ಮೇಲೆ ಲೇಸರ್‌ ಕಿರಣಗಳನ್ನು ಹಾಯಿಸಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬರಿಗಣ್ಣಿಗೆ ಕಾಣದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು:

ಅಮೆರಿಕಾದ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಈ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದಿದ್ದಾರೆ. ನವಿಲಿನ ನೀಲಿ ಬಣ್ಣ ಅಥವಾ ಟೀಲ್‌ ಬಣ್ಣಕ್ಕೆ ಹೋಲಿಕೆಯಾಗುವ ಈ “ಓಲೋ” ಬಣ್ಣ ಬರಿಗಣ್ಣಿಗೆ ಕಾಣಿಸುವುದಿಲ್ಲ. ಈ ಬಣ್ಣವನ್ನು ನೋಡಬೇಕಿದ್ದರೆ ಕಣ್ಣಿನ ರೆಟಿನಾಗಳ ಮೇಲೆ ಲೇಸರ್‌ ಕಿರಣಗಳನ್ನು ಹಾಯಿಸಬೇಕು. ಆಗ ಮಾತ್ರ ಈ ಬಣ್ಣ ಕಣ್ಣಿಗೆ ಗೋಚರವಾಗುತ್ತದೆ. ನೀಲಿ ಮತ್ತು ಹಸಿರು ಮಿಶ್ರಿತವಾದ ಈ ವಿಶೇಷ ಬಣ್ಣವನ್ನು ಈವರೆಗೆ ಕೇವಲ 5 ಮಂದಿ ಮಾತ್ರ ನೋಡಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು Pop Base ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಇದನ್ನೂ ಓದಿ
ತಪ್ಪಿಯೂ ಅಡುಗೆ ಕೋಣೆಯಲ್ಲಿ ಬ್ಲಾಕ್ ಗ್ರಾನೈಟ್ ಬಳಕೆ ಮಾಡಬೇಡಿ!
ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಏಕೆ? ಪೌರಾಣಿಕ ಕಥೆ ಇಲ್ಲಿದೆ
ಬೇಸಿಗೆಯಲ್ಲಿ ಹಸಿ ಮಾವು ತಿನ್ಬೇಕಂತೆ; ಯಾಕೆ ಗೊತ್ತಾ?
ಯುವಕರೇ ಕೆಲಸದ ಸ್ಥಳದಲ್ಲಿ ಗಂಟೆಗಟ್ಟಲೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೀರಾ?

ಪೋಸ್ಟ್ ಇಲ್ಲಿದೆ ನೋಡಿ:

ವಾಸ್ತವವಾಗಿ ವಿಜ್ಞಾನಿಗಳು ಇಲ್ಲಿಯವರೆಗೆ ಮನುಷ್ಯರು ನೋಡಿರದ ಬಣ್ಣವನ್ನು ಕಂಡುಹಿಡಿದಿದ್ದಾರೆ. ಏಪ್ರಿಲ್ 18 ರಂದು ಸೈನ್ಸ್‌ ಅಡ್ವಾನ್ಸ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ಈ ಬಣ್ಣಕ್ಕೆ ಓಲೋ ಎಂದು ಹೆಸರಿಡಲಾಗಿದೆ. ಓಲೋ ಹೇಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ, ಆದರೆ ಅದು ನವಿಲು ನೀಲಿ ಅಥವಾ ಟೀಲ್ ಬಣ್ಣದಂತೆಯೇ ಇರುತ್ತದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ತಪ್ಪಿಯೂ ಅಡುಗೆ ಕೋಣೆಯಲ್ಲಿ ಬ್ಲಾಕ್ ಗ್ರಾನೈಟ್ ಬಳಕೆ ಮಾಡಬೇಡಿ! ಏಕೆ ಗೊತ್ತಾ

ಇದು ನಾವು ನೋಡುವ ಬಣ್ಣವಲ್ಲ, ಇದು ಸಂಪೂರ್ಣವಾಗಿ ವಿಭಿನ್ನವಾದ ಬಣ್ಣವಾಗಿದೆ. ದೈನಂದಿನ ಜೀವನದಲ್ಲಾಗಿರಲಿ ಅಥವಾ ಸ್ಮಾರ್ಟ್‌ಫೋನ್‌, ಮಾನಿಟರ್‌, ಟಿವಿ  ಡಿಸ್ಪ್ಲೇಗಳಲ್ಲಾಗಲಿ ಈ ಬಣ್ಣವನ್ನು ನೋಡಲು ಸಾಧ್ಯವಿಲ್ಲ. ಈ ಬಣ್ಣ ವಿಆರ್‌ ಹೆಡ್‌ಸೆಟ್‌ ತಂತ್ರಜ್ಞಾನಕ್ಕಿಂತ ಬಹಳ ದೂರದಲ್ಲಿದ್ದು ಇದನ್ನು ಕೇವಲ ರೆಟಿನಾಗಳ ಮೇಲೆ ಲೇಸರ್‌ ಕಿರಣಗಳನ್ನು ಹಾಯಿಸಿದಾಗ ಮಾತ್ರ ನೋಡಲು ಸಾಧ್ಯ ಎಂದು ಈ ಸಂಶೋಧನೆಯ ವಿಜ್ಞಾನಿ ಆಸ್ಟಿನ್ ರೂರ್ಡಾ ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Tue, 22 April 25