Optical Illusion: ಈ ಜೇನು ನೊಣದ ಸರಿಯಾದ ನೆರಳು ಯಾವುದೆಂದು ಹೇಳಬಲ್ಲಿರಾ?

ಬುದ್ಧಿವಂತಿಕೆಗೆ ಸವಾಲೊಡ್ಡುವಂತಹ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಈ ಮೂಲಕ ನಾವು ಮೆದುಳಿನ ಚುರುಕುತನ ಮಾತ್ರವಲ್ಲದೆ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಸಹ ಪರೀಕ್ಷಿಸಬಹುದು. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಅದರಲ್ಲಿ ಆರು ನೆರಳುಗಳಲ್ಲಿ ಯಾವುದು ಜೇನು ನೊಣದ ಸರಿಯಾದ ನೆರಳು ಎಂದು ಕಂಡು ಹಿಡಿಯಲು ನಿಮಗೆ ಸವಾಲನ್ನು ನೀಡಲಾಗಿದೆ. ನೀವು ಕೇವಲ 7 ಸೆಕೆಂಡುಗಳ ಒಳಗಾಗಿ ಈ ಸವಾಲನ್ನು ಪೂರ್ಣಗೊಳಿಸಬೇಕು.

Optical Illusion: ಈ ಜೇನು ನೊಣದ ಸರಿಯಾದ ನೆರಳು ಯಾವುದೆಂದು ಹೇಳಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Jagran Josh

Updated on: Jul 13, 2025 | 4:04 PM

ಆಪ್ಟಿಕಲ್ ಇಲ್ಯೂಷನ್ (Optical illusion) ಎನ್ನುವಂತಹದ್ದು  ನಮ್ಮ ಮೆದುಳು ಮತ್ತು ದೃಷ್ಟಿ ಸಾಮರ್ಥ್ಯಕ್ಕೆ ಸವಾಲೊಡ್ಡುವಂತಹ ಮೋಜಿನ ಆಟವಾಗಿದೆ. ಈ ಕಣ್ಕಟ್ಟಿನ ಚಿತ್ರಗಳು ಒಮ್ಮೆಲೇ ನಮಗೆ ಭ್ರಮೆಯನ್ನು ಉಂಟು ಮಾಡುವುದು ಮಾತ್ರವಲ್ಲದೆ ಇದು ನಮ್ಮ ಬುದ್ಧಿವಂತಿಕೆಯನ್ನು ಸಹ ಹೆಚ್ಚಿಸುತ್ತದೆ. ದೃಷ್ಟಿ ತೀಕ್ಷ್ಣತೆ ಮತ್ತು ಐಕ್ಯೂ ಮಟ್ಟವನ್ನು ಪರೀಕ್ಷಿಸುವಂತಹ ಇಂತಹ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಇಲ್ಲೊಂದು ಇಂತಹದ್ದೇ ಒಗಟಿನ ಆಟವೊಂದು ವೈರಲ್‌ ಆಗಿದ್ದು, ಇದರಲ್ಲಿ ನೀವು ಜೇನು ನೊಣದ ಸರಿಯಾದ  ನೆರಳು ಎಂಬುದನ್ನು ಪತ್ತೆಹಚ್ಚಬೇಕು. ಕೇವಲ 7 ಸೆಕೆಂಡುಗಳಲ್ಲಿ ಈ ಸವಾಲನ್ನು ಪೂರ್ಣಗೊಳಿಸುವ ಮೂಲಕ ನೀವೆಷ್ಟು ಬುದ್ಧಿವಂತರು ಎಂಬುದನ್ನು ನೀವು ಪರೀಕ್ಷಿಸಿ.

ಈ ಜೇನು ನೊಣದ ಸರಿಯಾದ ನೆರಳು ಯಾವುದೆಂದು ಹೇಳಬಲ್ಲಿರಾ?

 

ಇದನ್ನೂ ಓದಿ
ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿ
ಈ ಚಿತ್ರದಲ್ಲಿ ಅಡಗಿರುವ 16 ವೃತ್ತಗಳನ್ನು ನೀವು ಪತ್ತೆ ಹಚ್ಚಬಲ್ಲಿರಾ?
ಕಾಡಿನಲ್ಲಿ ಅಡಗಿ ಕುಳಿತಿರುವ ನಾಯಿಯನ್ನು ಹುಡುಕಬಲ್ಲಿರಾ?
ʼ4502ʼ ರ ನಡುವೆ ಇರುವ ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಬಲ್ಲಿರಾ?

ಈ ಮೇಲಿನ ಚಿತ್ರದಲ್ಲಿ ಒಂದು ಜೇನುನೊಣ ಹಾಗೂ ಆರು ನೆರಳುಗಳಿವೆ. ಆ ಆರರಲ್ಲಿ ಯಾವುದು ಜೇನುನೊಣದ ಸರಿಯಾದ ನೆರಳು ಎಂದು ನೀವು ಗುರುತಿಸಬೇಕು. ನೀವು 120%+ IQ ಮಟ್ಟವನ್ನು ಹೊಂದಿದ್ದೀರಿ ಎಂದಾದರೆ ನೀವು 7 ಸೆಕೆಂಡುಗಳಲ್ಲಿ  ಜೇನುನೊಣದ ಸರಿಯಾದ ನೆರಳು ಯಾವುದೆಂದು ಕಂಡುಹಿಡಿಯಬೇಕು.

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಹಾಗಾದರೆ, ನೀವು ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ? ಸರಿ, ಸವಾಲನ್ನು ಪ್ರಾರಂಭಿಸುವ ಮೊದಲು, ಚಿತ್ರವನ್ನು ಸಂಕ್ಷಿಪ್ತವಾಗಿ ಪರಿಶೀಲಿಸಿ. ಇದರಲ್ಲಿ ಒಂದು ಜೇನುನೊಣ ಹಾಗೂ ನೊಣದ ಆರು ವಿಭಿನ್ನ ನೆರಳುಗಳನ್ನು ನೋಡಬಹುದು. ಇದರಲ್ಲಿ ಸರಿಯಾದ ನೆರಳು ಯಾವುದೆಂದು ನೀವು ಕಂಡುಹಿಡಿಯಬೇಕು. ಬುದ್ಧಿವಂತಿಕೆ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಬಳಸಿಕೊಂಡು, ಬರೀ  7 ಸೆಕೆಂಡುಗಳಲ್ಲಿ ಈ ಆರು ನೆರಳುಗಳಲ್ಲಿ ಜೇನು ನೊಣದ ಸರಿಯಾದ ನೆರಳು ಯಾವುದು ಎಂಬುದನ್ನು ನೀವು ಗುರುತಿಸಲು ಪ್ರಯತ್ನಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ 16 ವೃತ್ತಗಳನ್ನು ನೀವು ಪತ್ತೆ ಹಚ್ಚಬಲ್ಲಿರಾ?

ಇಲ್ಲಿದೆ ಉತ್ತರ:

7 ಸೆಕೆಂಡುಗಳಲ್ಲಿ ಜೇನು ನೊಣದ ಸರಿಯಾದ ನೆರಳನ್ನು ಗುರುತಿಸಿದರವರಿಗೆ  ಅಭಿನಂದನೆಗಳು. ನೀವು ಉತ್ತರವನ್ನು ಕಂಡು ಹಿಡಿಯಲು ಯಶಸ್ವಿಯಾಗಿದ್ದರೆ ನೀವು  ಪ್ರತಿಭಾನ್ವಿತರು, ತೀಕ್ಷ್ಣವಾದ ಐಕ್ಯೂ ಮಟ್ಟ ಮತ್ತು ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿದ್ದೀರಿ ಎಂದರ್ಥ.

ಈಗ ಉತ್ತರವನ್ನು ಬಹಿರಂಗಪಡಿಸುವ ಸಮಯ: ಇಲ್ಲಿ ನೀಡಲಾದ ಆರು ನೆರಳುಗಳಲ್ಲಿ ಜೇನು ನೊಣದ ಸರಿಯಾದ ನೆರಳು ಯಾವುದು ಎಂದು ತಿಳಿಯಲು  ನೀವು ಉತ್ಸುಕರಾಗಿದ್ದೀರಾ? ಚಿತ್ರದಲ್ಲಿರುವ ಮೂರನೇ ನೆರಳು ಜೇನು ನೊಣದ ಸರಿಯಾದ ನೆರಳಾಗಿದೆ.


ಈ ರೀತಿಯ ಒಗಟಿನ ಆಟಗಳನ್ನು ಆಡುವುದರಿಂದ ನಿಮ್ಮ ದೃಷ್ಟಿ ತೀಕ್ಷ್ಣತೆ ಹೆಚ್ಚಾಗುತ್ತದೆ. ನಿಮ್ಮ ವೀಕ್ಷಣಾ ಕೌಶಲ್ಯ, ಸಮಸ್ಯೆ ಪರಿಹರಿಸುವ ಕೌಶಲ್ಯ, ಆಲೋಚನಾ ಕೌಶಲ್ಯ, ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಐಕ್ಯೂ ಮಟ್ಟವು ಸಹ  ಹೆಚ್ಚಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ