AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parenting Tips : ನಿಮ್ಮ ಮಕ್ಕಳ ತುಂಟಾಟದ ಬಗ್ಗೆ ಇರಲಿ ಗಮನ, ರೌಡಿಗಳಂತೆ ವರ್ತಿಸಿದರೆ ಹೀಗೆ ಮಾಡಿ

ಮಕ್ಕಳೆಂದ ಮೇಲೆ ತುಂಟಾಟ ಸಹಜ. ಕೆಲವೊಮ್ಮೆ ಮಕ್ಕಳ ತುಂಟಾಟಗಳು ನಗು ತರಿಸಿದರೆ ಕೆಲವೊಮ್ಮೆ ಪಿತ್ತ ನೆತ್ತಿಗೇರುತ್ತದೆ. ಕಿರಿಕಿರಿಯೆನಿಸಿ ಪೋಷಕರು ಗದರುತ್ತಾರೆ. ಹೀಗೆ ಮಾಡಿದರೆ ಮಕ್ಕಳು ಒಂದು ಐದು ನಿಮಿಷ ಸುಮ್ಮನೆ ಕುಳಿತುಕೊಳ್ಳುತ್ತಾರೆ ಬಿಟ್ಟರೆ ಕಿಡಿಗೇಡಿತನ ಮಾತ್ರ ನಿಲ್ಲುವುದಿಲ್ಲ. ಪೋಷಕರು ಮಕ್ಕಳನ್ನು ಬೆಳೆಸುವಾಗ ಈ ಕೆಲವು ಟಿಪ್ಸ್ ಗಳನ್ನು ಪಾಲಿಸಿದರೆ ಮಕ್ಕಳ ಕಿಡಿಗೇಡಿತನವನ್ನು ಸ್ವಲ್ಪ ಮಟ್ಟಿಗೆ ನಿಲ್ಲಿಸಬಹುದು.

Parenting Tips : ನಿಮ್ಮ ಮಕ್ಕಳ ತುಂಟಾಟದ ಬಗ್ಗೆ ಇರಲಿ ಗಮನ, ರೌಡಿಗಳಂತೆ ವರ್ತಿಸಿದರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Apr 10, 2024 | 5:15 PM

Share

ಈಗಿನ ಕಾಲದ ಮಕ್ಕಳು ತುಂಬಾನೇ ಬುದ್ದಿವಂತರು ಅಷ್ಟೇ ಕಿಡಿಗೇಡಿಗಳು. ಕುಳಿತಲ್ಲಿಯೇ ಕುಳಿತುಕೊಳ್ಳುವುದು ಕಡಿಮೆಯೇ. ಏನಾದರೊಂದು ತರಲೆ ತುಂಟಾಟಗಳನ್ನು ಮಾಡುತ್ತಾ ಹೆತ್ತವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುತ್ತಾರೆ. ಹೊರಗಡೆ ಹೋದಾಗ ತುಂಟಾಟವು ಅತಿರೇಕಕ್ಕೆ ಮಿತಿದರೆ ಒಂದೇಟು ಬೀಳುತ್ತದೆ ಆದರೆ ಪೋಷಕರು ತಮ್ಮ ಅತಿ ತುಂಟ ಮಕ್ಕಳನ್ನು ನಿಭಾಯಿಸುವುದನ್ನು ತಿಳಿದುಕೊಂಡರೆ ಯಾವುದೇ ಟೆನ್ಶನ್ ಇಲ್ಲದೆ ಆರಾಮಾಗಿರಬಹುದು.

  1. ಮಕ್ಕಳ ಮಾತನ್ನು ಹೆತ್ತವರು ಕಿವಿಗೊಟ್ಟು ಕೇಳುವುದು ಒಳ್ಳೆಯದು. ನಿಮ್ಮ ಮಕ್ಕಳು ಏನನ್ನಾದರೂ ಒಳ್ಳೆಯ ಕೆಲಸ ಮಾಡಿದರೆ ಸಾರ್ವಜನಿಕವಾಗಿ ಅವರನ್ನು ಹೊಗಳಿ, ಇದರಿಂದ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
  2. ಮಕ್ಕಳು ತಮಗಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಕೆಲವೊಮ್ಮೆ ಹೆದರುತ್ತಾರೆ. ಆದರೆ ನಿಮ್ಮ ಮಕ್ಕಳು ಸಮಸ್ಯೆಯಲ್ಲಿ ಸಿಲುಕಿಕೊಂಡಾಗ, ಅದರಿಂದ ಹೊರಬರುವುದು ಹೇಗೆ ಎನ್ನುವುದನ್ನು ತಿಳಿಸಿ. ಆ ಸಮಸ್ಯೆಯಿಂದ ಮಕ್ಕಳನ್ನು ಪಾರು ಮಾಡಿ, ಇದರಿಂದ ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆಯು ಬರುತ್ತದೆ.
  3. ಎಲ್ಲರ ಭಾವನೆಗಳು ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬರೂ ವಿಭಿನ್ನ ಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯಗಳನ್ನು ನಿಮ್ಮ ಮಕ್ಕಳಿಗೆ ಅರ್ಥ ಮಾಡಿಸುವುದು ಒಳ್ಳೆಯದು. ಇದರಿಂದ ಮಕ್ಕಳು ನಿಮ್ಮ ಭಾವನೆಗೆ ಬೆಲೆ ಕೊಡಲು ಸಾಧ್ಯವಾಗುತ್ತದೆ.
  4. ಮಕ್ಕಳ ಸಣ್ಣ ಸಣ್ಣ ಸಾಧನೆಯನ್ನು ಸಂಭ್ರಮಿಸಿ. ಅದಲ್ಲದೇ ಸಣ್ಣ ಪುಟ್ಟ ಯಶಸ್ಸಿನಿಂದ ಸಂತೋಷವು ಹೇಗೆ ಬರುತ್ತದೆ ಎಂದು ಮಕ್ಕಳಿಗೆ ತಿಳಿಸಿ. ಇದರಿಂದ ಮಕ್ಕಳು ತುಂಟಾಟವನ್ನು ಕಡಿಮೆ ಮಾಡಿ ಚಟುವಟಿಕೆಗಳಲ್ಲೂ ಹೆಚ್ಚೆಚ್ಚು ಭಾಗವಹಿಸುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್