
ಬಾಬಾ ರಾಮದೇವ್ (Baba Ramdev) ಪತಂಜಲಿ ಮೂಲಕ ಪ್ರಾಚೀನ ಆಯುರ್ವೇದ ವಿಧಾನಗಳನ್ನು ಜನಪ್ರಿಯಗೊಳಿಸುತ್ತಾ ಬಂದಿದ್ದಾರೆ. ಅವರು ತಮ್ಮ ಪತಂಜಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಮಾತ್ರವಲ್ಲ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಗುಣಪಡಿಸುವ ಆಯುರ್ವೇದ ಪರಿಹಾರಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಾರೆ. ಬಾಬಾ ರಾಮದೇವ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ಆಯರ್ವೇದ ಮತ್ತು ಯೋಗದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ. ವಿಡಿಯೋಗಳ ಮೂಲಕ ಮಾಹಿತಿ ಹಂಚಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಹಾಕಿದ ಪೋಸ್ಟ್ವೊಂದರಲ್ಲಿ ಬಾಬಾ ರಾಮದೇವ್ ಅವರು ವಾತ, ಪಿತ್ತ ಮತ್ತು ಕಫ ಅಸಮತೋಲನದ ಸಮಸ್ಯೆಗೆ ಪರಿಹಾರವಾಗುವ ಚಿಕಿತ್ಸೆಗಳ ಬಗ್ಗೆ ಮಾತನಾಡಿದ್ದಾರೆ.
ಇಂದಿನ ಒತ್ತಡದ ಜೀವನ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ, ದೇಹದ ಮೂರು ಮುಖ್ಯ ದೋಷಗಳಾದ ವಾತ, ಪಿತ್ತ ಮತ್ತು ಕಫಗಳ ಸಮತೋಲನಕ್ಕೆ ಧಕ್ಕೆಯಾಗಲು ಆರಂಭಿಸುತ್ತದೆ. ಅವುಗಳ ಸಮತೋಲನದಲ್ಲಿ ವ್ಯತ್ಯಯವಾದಾಗ, ದೇಹದಲ್ಲಿ ವಿವಿಧ ರೋಗಗಳು ಪ್ರಾರಂಭವಾಗುತ್ತವೆ. ಆದ್ದರಿಂದ ವಾತ, ಪಿತ್ತ ಮತ್ತು ಕಫ ದೋಷಗಳನ್ನು ಸಮತೋಲನಗೊಳಿಸಲು ಖಚಿತವಾದ ಚಿಕಿತ್ಸೆಯನ್ನು ಬಾಬಾ ರಾಮದೇವ್ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ Cardiotoxicity ಅಡ್ಡಪರಿಣಾಮ; ಪತಂಜಲಿಯಲ್ಲಿ ಪರಿಹಾರ
ಆಯುರ್ವೇದದ ಪ್ರಕಾರ, ನಮ್ಮ ದೇಹದಲ್ಲಿ ವಾತ, ಪಿತ್ತ ಮತ್ತು ಕಫ ಎಂಬ ಮೂರು ಪ್ರಮುಖ ದೋಷಗಳಿವೆ. ಬಾಬಾ ರಾಮದೇವ್ ಅವರ ಪ್ರಕಾರ, ದೇಹದಲ್ಲಿ ದೋಷಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ರೋಗಗಳನ್ನು ತಡೆಗಟ್ಟಲು ಮಾತ್ರವಲ್ಲದೆ, ದೀರ್ಘಾಯುಷ್ಯ ಮತ್ತು ಮಾನಸಿಕ ಶಾಂತಿಗೂ ಸಹ ಮುಖ್ಯವಾಗಿದೆ. ಇದಕ್ಕಾಗಿ, ಬಾಬಾ ರಾಮದೇವ್ ಕೆಲವು ನೈಸರ್ಗಿಕ ವಿಧಾನಗಳನ್ನು ಸೂಚಿಸಿದ್ದಾರೆ, ಅವುಗಳು ಈ ಕೆಳಗಿನಂತಿವೆ:
ಬಾಬಾ ರಾಮದೇವ್ ಹಾಕಿದ ಇನ್ಸ್ಟಾ ಪೋಸ್ಟ್
ಮೂತ್ರಪಿಂಡದ ಸಮಸ್ಯೆ ಇರುವ ಜನರು: ಬಾಬಾ ರಾಮದೇವ್ ಅವರ ಪ್ರಕಾರ, ಯಾರಿಗಾದರೂ ಮೂತ್ರಪಿಂಡದ ಸಮಸ್ಯೆಗಳಿದ್ದರೆ, ಸೋರೆಕಾಯಿ ತರಕಾರಿ ತಿನ್ನುವುದು ಅವರಿಗೆ ಪ್ರಯೋಜನಕಾರಿಯಾಗಿದೆ. ಸೋರೆಕಾಯಿ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ವಾಸ್ತವವಾಗಿ, ಸೋರೆಕಾಯಿಯಲ್ಲಿ ವಿಟಮಿನ್ ಸಿ ಯಿಂದ ವಿಟಮಿನ್ ಬಿ 1 ವರೆಗೆ ಅನೇಕ ಜೀವಸತ್ವಗಳು ಕಂಡುಬರುತ್ತವೆ. ಇದರ ಹೊರತಾಗಿ, ಬಾರ್ಲಿ ಹಿಟ್ಟಿನಿಂದ ಮಾಡಿದ ರೊಟ್ಟಿ ಮೂತ್ರಪಿಂಡದ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ, ಏಕೆಂದರೆ ಬಾರ್ಲಿಯಲ್ಲಿ ಹೆಚ್ಚಿನ ಫೈಬರ್ ಅಂಶವಿದೆ ಮತ್ತು ಇದು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಜಾಯಿಂಟ್ ಪೇನ್ಗೆ ಆಯುರ್ವೇದ ಪರಿಹಾರ; ದಿವ್ಯ ಪೀಡಾಂತಕ್ ತೈಲ ಬಳಸುವ ಕ್ರಮ ತಿಳಿಯಿರಿ
ಸಕ್ಕರೆಯನ್ನು ನಿಯಂತ್ರಿಸಲು: ಸಕ್ಕರೆಯನ್ನು ನಿಯಂತ್ರಿಸಲು, ನೀವು ಅರ್ಜುನ ಮರ ಅಥವಾ ಮತ್ತಿ ಮರದ ತೊಗಟೆಯೊಂದಿಗೆ ದಾಲ್ಚಿನ್ನಿ ಸೇರಿಸಿ ಸೇವಿಸಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಹೀಗೆ ಮಾಡುವುದರಿಂದ ಸಕ್ಕರೆ ನಿಯಂತ್ರಣಗೊಳ್ಳುತ್ತದೆ. ಇದರೊಂದಿಗೆ ಹೃದಯವೂ ಆರೋಗ್ಯವಾಗಿರುತ್ತದೆ. ಅದೇ ಸಮಯದಲ್ಲಿ, ಕಚ್ಚಾ ಆಹಾರವನ್ನು ಸೇವಿಸುವುದರಿಂದ ಸಕ್ಕರೆ ಮಟ್ಟ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬಾಬಾ ರಾಮದೇವ್ ಅವರು ಸೈನಸ್ ಮತ್ತು ಆಸ್ತಮಾಗೆ ಪತಂಜಲಿಯ ಒಂದು ಉತ್ಪನ್ನ ಇದೆ ಎಂದಿದ್ದಾರೆ. ಅವರ ಪ್ರಕಾರ, ಯಾರಾದರೂ ಸೈನಸ್ ಮತ್ತು ಆಸ್ತಮಾದಿಂದ ಬಳಲುತ್ತಿದ್ದರೆ ಅವರು ಅಣು ಎಣ್ಣೆಯನ್ನು ಬಳಸಬಹುದು.
ಇನ್ನಷ್ಟು ಜೀವನಶೈಲಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ