
ಪೆಂಗ್ವಿನ್‌ಗಳು (Penguin) ದಕ್ಷಿಣ ಗೋಳಾರ್ಧಕ್ಕೆ ಸ್ಥಳೀಯವಾಗಿರುವ ಜಲಚರ ಪಕ್ಷಿಗಳು. ಆಹಾರ ಸರಪಳಿಯ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಸಮುದ್ರ ಪರಿಸರ ವ್ಯವಸ್ಥೆಯಲ್ಲಿ ಪೆಂಗ್ವಿನ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕ್ರಿಲ್, ಸ್ಕ್ವಿಡ್ ಸೇರಿದಂತೆ ಮತ್ತಿತರ ಮೀನುಗಳನ್ನು ತಿಂದು ಬದುಕುವ ಇವುಗಳು ಸಮುದ್ರ ಜೀವಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಇಂದು ಇಂದು ಈ ಪಕ್ಷಿಗಳು ಹವಾಮಾನ ಬದಲಾವಣೆ, ಅತಿಯಾದ ಮೀನುಗಾರಿಕೆ ಮತ್ತು ಆವಾಸಸ್ಥಾನದ ನಾಶದಿಂದಾಗಿ ಪೆಂಗ್ವಿನ್‌ಗಳ ಸಂತತಿ ಅಳಿವಿನಂಚಿಗೆ ತಲುಪಿವೆ. ಹಾಗಾಗಿ ಈ ಪಕ್ಷಿಯ ಸಂತತಿಯನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಜನವರಿ 20 ರಂದು ಪೆಂಗ್ವಿನ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ಪೆಂಗ್ವಿನ್ ಪಕ್ಷಿಗಳ ಜಾಗತಿಕ ಮನ್ನಣೆ ಮತ್ತು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಪೆಂಗ್ವಿನ್ ಜಾಗೃತಿ ದಿನವನ್ನು ಸ್ಥಾಪಿಸಲಾಯಿತು. 1972 ರಲ್ಲಿ ಕ್ಯಾಲಿಫೋರ್ನಿಯಾದ ಅಲಮೊಗೊರ್ಡೊದ ಗೆರ್ರಿ ವ್ಯಾಲೇಸ್ ಅವರ ಪತ್ನಿ ಅಲೆಟಾ ಪೆಂಗ್ವಿನ್ ದಿನದ ಬಗ್ಗೆ ಉಲ್ಲೇಖಿಸಿದರು. ಅಂದಿನಿಂದ ಪ್ರತಿವರ್ಷ ಜನವರಿ 20 ರಂದು ಈ ಪಕ್ಷಿಗಳ ಸಂತತಿಯನ್ನು ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಪೆಂಗ್ವಿನ್ ಜಾಗೃತಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ನವೋದ್ಯಮಿಗಳ ಸ್ವಂತ ಬಿಸ್ನೆಸ್ ಕನಸನ್ನು ನನಸಾಗಿಸುತ್ತಿವೆ ಸ್ಟಾರ್ಟ್‌ಅಪ್
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ