AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Startup Day 2026: ನವೋದ್ಯಮಿಗಳ ಸ್ವಂತ ಬಿಸ್ನೆಸ್‌ ಕನಸನ್ನು ನನಸಾಗಿಸುತ್ತಿವೆ ಸ್ಟಾರ್ಟ್‌ಅಪ್‌

ಭಾರತೀಯ ಸ್ಟಾರ್ಟ್ಅಪ್‌ಗಳು ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವದೊಂದಿಗೆ ಅನೇಕ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಿದ್ದು, ಆರ್ಥಿಕ ಬೆಳವಣಿಗೆ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಗೆ ನವೋದ್ಯಮಗಳ ಮಹತ್ವದ ಕೊಡುಗೆಯನ್ನು ಗೌರವಿಸಲು ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

National Startup Day 2026: ನವೋದ್ಯಮಿಗಳ ಸ್ವಂತ ಬಿಸ್ನೆಸ್‌ ಕನಸನ್ನು ನನಸಾಗಿಸುತ್ತಿವೆ ಸ್ಟಾರ್ಟ್‌ಅಪ್‌
ರಾಷ್ಟ್ರೀಯ ನವೋದ್ಯಮ ದಿನImage Credit source: Pinterest
ಮಾಲಾಶ್ರೀ ಅಂಚನ್​
|

Updated on: Jan 16, 2026 | 10:29 AM

Share

ದೇಶದಲ್ಲಿಂದು ಸಾಕಷ್ಟು ಸ್ಟಾರ್ಟ್‌ಅಪ್‌ಗಳು (Startup) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ಜಾಗತೀಕರಣದ ಈ ಯುಗದಲ್ಲಿ, ಭಾರತೀಯ ನವೋದ್ಯಮ ಸಂಸ್ಕೃತಿಯನ್ನು ಹೊಸ ಎತ್ತರಕ್ಕೆ ಏರಿಸಲು ಪ್ರಯತ್ನಗಳು ನಡೆಯುತ್ತಿವೆ. ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಉದ್ಯೋಗ ಮತ್ತು ಅಭಿವೃದ್ಧಿಯ ಕನಸುಗಳನ್ನು ನನಸಾಗಿಸುವಲ್ಲಿ ನವೋದ್ಯಮಗಳ ಪಾತ್ರ ನಿರ್ಣಾಯಕವಾಗಿದ್ದು, ಭಾರತದಲ್ಲಿ ನವೋದ್ಯಮ ಪರಿಕಲ್ಪನೆಯನ್ನು ಪ್ರೋತ್ಸಾಹಿಸುವ, ಉದ್ಯಮಶೀಲತೆಯನ್ನು ಉತ್ತೇಜಿಸುವ ಹಾಗೂ ಭಾರತದ ಸ್ವಾವಲಂಬನೆಯ ಗುರಿಯನ್ನು ಸಾಧಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ರಾಷ್ಟ್ರೀಯ ನವೋದ್ಯಮ ದಿನದ ಇತಿಹಾಸವೇನು?

2016 ರಲ್ಲಿ ಪ್ರಾರಂಭವಾದ ಸ್ಟಾರ್ಟ್‌ಅಪ್‌ ಇಂಡಿಯಾ ಉಪಕ್ರಮದ ಸಂಸ್ಥಾಪನಾ ದಿನವನ್ನು ಗುರುತಿಸಲು ಜನವರಿ 16, 2022 ರಂದು ಮೊದಲ ಬಾರಿಗೆ ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಯಿತು. ಜನವರಿ 15, 2022 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 16 ರಂದು ರಾಷ್ಟ್ರೀಯ ನವೋದ್ಯಮ ದಿನವನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದರು. ಅದೇ ವರ್ಷ ಭಾರತ ತನ್ನ ಮೊದಲ ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಿತು. ಈ ದಿನವು ರಾಷ್ಟ್ರದ ಪ್ರಗತಿಗೆ ಸ್ಟಾರ್ಟ್‌ಅಪ್‌ ಸಮುದಾಯದ ಕೊಡುಗೆಗಳನ್ನು ಬೆಂಬಲಿಸುವ ಮತ್ತು ಗುರುತಿಸುವ  ಹಾಗೂ ನಾಗರಿಕರಲ್ಲಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಸ್ಟಾರ್ಟ್‌ಅಪ್‌ ಎಂದರೇನು?

ಸ್ಟಾರ್ಟ್‌ಅಪ್‌ ನವೋದ್ಯಮಿಗಳಿಗೆ ಸ್ವಂತ ಉದ್ದಿಮೆಯನ್ನು ಶುರು ಮಾಡಲು ಒಂದೊಳ್ಳೆ ವೇದಿಕೆಯಾಗಿದೆ. ಸ್ಟಾರ್ಟ್ಅಪ್ ಎಂದರೆ ಇದೀಗ ಕಾರ್ಯಾಚರಣೆ ಆರಂಭಿಸಿರುವ ಕಂಪನಿ. ಒಬ್ಬಂಟಿಯಾಗಿ ಅಥವಾ ಒಂದು ಟೀಮ್‌ನೊಂದಿಗೆ, ಇನ್ಕ್ಯುಬೇಶನ್ ಎಂಬ ಪ್ರಕ್ರಿಯೆಯ ಮೂಲಕ ಕಂಪನಿಗೆ ಅಡಿಪಾಯ ಹಾಕಲಾಗುತ್ತದೆ. ಇಲ್ಲಿ, ಜನರು ತಮ್ಮ ಕೌಶಲ್ಯ ಮತ್ತು ಪರಿಣತಿಯನ್ನು ತಂದು ಹೊಸ ವ್ಯವಹಾರ ಕಲ್ಪನೆಯ ಮೇಲೆ ಒಟ್ಟಾಗಿ ಕೆಲಸ ಮಾಡುತ್ತಾರೆ. ಈ ರೀತಿಯ ಕಂಪನಿಯು ಗ್ರಾಹಕರಿಗೆ ವಿಶಿಷ್ಟ ಉತ್ಪನ್ನ ಅಥವಾ ಸೇವೆಯನ್ನು ನೀಡುತ್ತದೆ.

ರಾಷ್ಟ್ರೀಯ ನವೋದ್ಯಮ ದಿನದ ಉದ್ದೇಶವೇನು?

  • ಮೊದಲನೆಯದಾಗಿ, ದೇಶದ ಯುವಕರನ್ನು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರನ್ನಾಗಿ ಪರಿವರ್ತಿಸುವುದು.
  • ಎರಡನೆಯದಾಗಿ, ತಳಮಟ್ಟದ ನಾವೀನ್ಯತೆಯನ್ನು ಉತ್ತೇಜಿಸುವುದು.
  • ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ರಕ್ಷಣೆ, ಕೃಷಿ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಸ್ಥಳೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು.

ಇದನ್ನೂ ಓದಿ: ಭಾರತೀಯ ಸೇನೆಯ ಅದಮ್ಯ ಧೈರ್ಯ, ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನವಿದು

ರಾಷ್ಟ್ರೀಯ ನವೋದ್ಯಮ ದಿನದ ಮಹತ್ವವೇನು?

  • ಭಾರತದಲ್ಲಿ ನವೋದ್ಯಮ ಪರಿಕಲ್ಪನೆಯನ್ನು ಪ್ರೋತ್ಸಾಹಿಸುವುದು ಮತ್ತು ದೇಶಾದ್ಯಂತ ಉದ್ಯಮಶೀಲತೆಯನ್ನು ಉತ್ತೇಜಿಸುವುದು ರಾಷ್ಟ್ರೀಯ ನವೋದ್ಯ, ದಿನದ ಉದ್ದೇಶವಾಗಿದೆ.
  • ಭಾರತದ ಆರ್ಥಿಕ ಬೆಳವಣಿಹೆ, ನಾವೀನ್ಯತೆ ಮತ್ತು ಉದ್ಯೋಗಸೃಷ್ಟಿಗೆ ನವೋದ್ಯಮಗಳ ಮಹತ್ವದ ಕೊಡುಗೆಗಳನ್ನು ಗೌರವಿಸಲು ರಾಷ್ಟ್ರೀಯ ನವೋದ್ಯಮ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವು ಯುವ ಪೀಳಿಗೆಗೆ ತಮ್ಮ ಆಲೋಚನೆಗಳನ್ನು ವಾಣಿಜ್ಯೀಕರಿಸಲು ಮತ್ತು ಜಾಗತಿಕವಾಗಿ ಪ್ರಸ್ತುತಪಡಿಸಲು ಸ್ಫೂರ್ತಿ ನೀಡುತ್ತದೆ.
  • ಈ ದಿನವು ದೇಶದ ಯುವಕರು ತಮ್ಮ ಕನಸುಗಳನ್ನು ನನಸಾಗಿಸಲು ಮತ್ತು ಅವರಿಗೆ ಹೊಸ ದಿಕ್ಕನ್ನು ನೀಡಲು ಪ್ರೇರೇಪಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ