Thums Up: ನೀವು ಥಂಬ್ಸ್ ಅಪ್ ಮಾಡುವಾಗ ನಿಮ್ಮ ಹೆಬ್ಬೆರಳು ಯಾವ ರೀತಿಯಾಗಿದೆ ಎಂದು ತಿಳಿದುಕೊಳ್ಳಿ

ಥಂಬ್ಸ್ ಅಪ್ ಮಾಡುವಾಗ ನಿಮ್ಮ ಹೆಬ್ಬೆರಳು ನೇರವಾಗಿ ಅಥವಾ ವಕ್ರವಾಗಿ ಇದ್ದರೆ ಇದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಇಲ್ಲಿದೆ ಇದರ ಕುರಿತು ಮಾಹಿತಿ.

Thums Up: ನೀವು ಥಂಬ್ಸ್ ಅಪ್ ಮಾಡುವಾಗ ನಿಮ್ಮ ಹೆಬ್ಬೆರಳು ಯಾವ ರೀತಿಯಾಗಿದೆ ಎಂದು ತಿಳಿದುಕೊಳ್ಳಿ
Thums Up
Image Credit source: Tips and Tricks
Updated By: ಅಕ್ಷತಾ ವರ್ಕಾಡಿ

Updated on: Nov 27, 2022 | 10:53 AM

ಪ್ರತಿಯೊಬ್ಬರೂ ಕೂಡ ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ ಮತ್ತು ಅವರ ನಡವಳಿಕೆ, ಮಾತನಾಡುವ ಶೈಲಿ, ಅಭಿಪ್ರಾಯ, ಆಲೋಚನಾ ಶಕ್ತಿ ಹೀಗೆ ಪ್ರತಿಯೊಂದರಲ್ಲೂ ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿರುತ್ತಾರೆ. ಆದರೆ ಕೆಲವೊಂದು ಸಮಯದಲ್ಲಿ ನಿಮ್ಮ ನಡವಳಿಕೆ ಹಾಗೂ ಮಾತುಗಾರಿಕೆಯಿಂದ ನಿಮ್ಮ ವ್ಯಕ್ತಿತ್ವ(Personality) ಏನು? ಎಂಬುದನ್ನು ತಿಳಿಯಲು ಸಾಧ್ಯವಿದೆ. ಆದರೆ ನೀವು ಮಾಡುವ ಥಂಬ್ಸ್ ಅಪ್(Thums Up) ನೀವು ಏನು ಎಂಬುದನ್ನು ತಿಳಿಸುತ್ತದೆ ಅಂದರೆ ನಿಮ್ಮ ಹೆಬ್ಬೆರಳು, ಉದಾಹರಣೆಗೆ, ಒಂದೆರಡು ವಿಶಿಷ್ಟ ವ್ಯಕ್ತಿತ್ವ ಲಕ್ಷಣಗಳನ್ನು ಸೂಚಿಸುತ್ತದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಥಂಬ್ಸ್ ಅಪ್ ಮಾಡುವಾಗ ನಿಮ್ಮ ಹೆಬ್ಬೆರಳು ನೇರವಾಗಿ ಅಥವಾ ವಕ್ರವಾಗಿ ಇದ್ದರೆ ಇದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಇಲ್ಲಿದೆ ಇದರ ಕುರಿತು ಮಾಹಿತಿ.

ಹೆಬ್ಬೆರಳಿನ ತುದಿ:

ಕೆಲವು ಜನರು ಥಂಬ್ಸ್ ಅಪ್ ಮಾಡುವಾಗ, ಅವರ ಹೆಬ್ಬೆರಳು ನೇರ ರೇಖೆಯಲ್ಲಿ ನಿಂತಿರುತ್ತದೆ. ಆದರೆ ಇನ್ನು ಕೆಲವು ಜನರದ್ದು ಹೆಬ್ಬೆರಳಿನ ತುದಿ ಸ್ವಲ್ಪ ವಕ್ರವಾಗಿರುತ್ತದೆ. ಇದು ನಿಮ್ಮ ಮನೋಧರ್ಮ ಮತ್ತು ನಿಮ್ಮ ಇಚ್ಛಾಶಕ್ತಿಯ ಬಗ್ಗೆ ಏನಾದರೂ ಹೇಳಬಹುದು.

ನೇರ ಹೆಬ್ಬೆರಳು(Straight thumb):

ಥಂಬ್ಸ್ ಅಪ್ ಮಾಡುವಾಗ ನಿಮ್ಮ ಹೆಬ್ಬೆರಳು ನೇರವಾಗಿದ್ದರೆ ಇದರ ವಿಶೇಷತೆಯ ಕುರಿತು ಇಲ್ಲಿದೆ ಮಾಹಿತಿ. ನೀವು ನೇರ ಹೆಬ್ಬೆರಳು ಹೊಂದಿದ್ದೀರಾ? ಇದರರ್ಥ ನೀವು ಇತರರಿಗಿಂತ ಸ್ವಲ್ಪ ಹೆಚ್ಚು ಗಂಭೀರ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂದು ಸೂಚಿಸುತ್ತದೆ. ಜೊತೆಗೆ ನೀವು ಕೆಲವೊಮ್ಮೆ ಮುಂಗೋಪದ ಮತ್ತು ಸುಲಭವಾಗಿ ಸಿಟ್ಟಾಗಬಹುದು. ನಿಮ್ಮ ಜೀವನದ ಕುರಿತು ನಿಮಗೆ ಹೆಚ್ಚಿನ ಕಾಳಜಿ ಇರುತ್ತದೆ ಹಾಗೂ ನಿಮ್ಮ ಆರೋಗ್ಯ, ನಿಮ್ಮ ಸ್ನೇಹಿತರು ಮತ್ತು ನಿಮ್ಮ ಕುಟುಂಬವನ್ನು ನೀವು ಬಹಳವಾಗಿ ಗೌರವಿಸುತ್ತೀರಿ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ನಿಮ್ಮ ತುಟಿಯ ಬಣ್ಣ ಕಪ್ಪಾಗುತ್ತಿದ್ದರೆ ಅದಕ್ಕೆ ಕಾರಣ ಹಾಗೂ ಪರಿಹಾರ ಇಲ್ಲಿದೆ

ವಕ್ರವಾದ ಹೆಬ್ಬೆರಳು(Crooked thumb):

ನೀವು ವಕ್ರವಾದ ಹೆಬ್ಬೆರಳು ಹೊಂದಿದ್ದೀರಾ? ಇದರರ್ಥ ನೀವು ತುಂಬಾ ಅಭಿವ್ಯಕ್ತಿಶೀಲ ಮತ್ತು ವಿಲಕ್ಷಣ ವ್ಯಕ್ತಿ. ನೀವು ಇತರರೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಸಂತೋಷದಿಂದ ಹಂಚಿಕೊಳ್ಳುತ್ತೀರಿ ಮತ್ತು ನಿಮ್ಮ ಭಾವನೆಗಳನ್ನು ತೋರಿಸುವುದರಲ್ಲಿ ನಿಮಗೆ ಯಾವುದೇ ತೊಂದರೆ ಇಲ್ಲ. ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ನೋಟದ ಬಗ್ಗೆ ಇತರರು ಏನು ಯೋಚಿಸುತ್ತಾರೆ ಎಂಬುದು ಮುಖ್ಯ ಎಂದು ನೀವು ಭಾವಿಸುತ್ತೀರಿ. ನೀವು ನಿಮಗಾಗಿ ಸಾಕಷ್ಟು ಸಮಯವನ್ನು ಕಳೆಯುತ್ತೀರಿ ಎಂದು ಹೇಳಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: