Dark Lips: ನಿಮ್ಮ ತುಟಿಯ ಬಣ್ಣ ಕಪ್ಪಾಗುತ್ತಿದ್ದರೆ ಅದಕ್ಕೆ ಕಾರಣ ಹಾಗೂ ಪರಿಹಾರ ಇಲ್ಲಿದೆ

ತುಟಿ ಕಪ್ಪಾಗಲು ಕಾರಣ ಹಾಗೂ ಕಪ್ಪಾಗುವುದನ್ನು ತಪ್ಪಿಸಲು ಕೆಲವೊಂದು ಪರಿಹಾರ ಕ್ರಮಗಳನ್ನು ಚರ್ಮರೋಗ ತಜ್ಞರಾದ ಜಯಶ್ರೀ ಶರದ್ ಸೂಚಿಸಿದ್ದಾರೆ.

Dark Lips: ನಿಮ್ಮ ತುಟಿಯ ಬಣ್ಣ ಕಪ್ಪಾಗುತ್ತಿದ್ದರೆ ಅದಕ್ಕೆ ಕಾರಣ ಹಾಗೂ ಪರಿಹಾರ ಇಲ್ಲಿದೆ
Dark lipImage Credit source: Zee News
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 26, 2022 | 3:40 PM

ಪ್ರತಿಯೊಂದು ಹೆಣ್ಣು ತನ್ನ ತುಟಿ ಯಾವುದೇ ಕೃತಕ ಬಣ್ಣಗಳನ್ನು ಬಳಸದೇ ಸುಂದರವಾಗಿ ಗುಲಾಬಿ ಬಣ್ಣದಲ್ಲಿರಬೇಕು ಎಂದು ಹಂಬಲಿಸುತ್ತಾಳೆ. ಆದರೆ ಇಂದೂ ತುಟಿ ಬಣ್ಣ ಕಪ್ಪಾಗುತ್ತುರುವುದು(Dark Lips) ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೇ, ಅದಕ್ಕೆ ಕಾರಣವೇನು? ಹಾಗೂ ನೈಸರ್ಗಿಕವಾಗಿ ಗುಲಾಬಿ ಬಣ್ಣದ ತುಟಿಯನ್ನು ಪಡೆಯಲು ಪರಿಹಾರ ಕ್ರಮಗಳು ಇಲ್ಲಿವೆ. ತುಟಿ ಕಪ್ಪಾಗಲು ಕಾರಣ ಹಾಗೂ ಕಪ್ಪಾಗುವುದನ್ನು ತಪ್ಪಿಸಲು ಕೆಲವೊಂದು ಪರಿಹಾರ ಕ್ರಮಗಳನ್ನು ಚರ್ಮರೋಗ ತಜ್ಞರಾದ ಜಯಶ್ರೀ ಶರದ್ ತಿಳಿಸಿದ್ದಾರೆ.

ಅವುಗಳು ಈ ಕೆಳಗಿನಂತಿವೆ:

1. ಧೂಮಪಾನ:

ಅತಿಯಾದ ಧೂಮಪಾನವು ನಿಮ್ಮ ತುಟಿಗಳನ್ನು ಕಪ್ಪಾಗಿಸಲು ಕಾರಣವಾಗಬಹುದು. ಅಲ್ಲದೆ, ಇದು ಚರ್ಮದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಆದ್ದರಿಂದ ತುಟಿಗಳು ಕಪ್ಪಾಗುವುದನ್ನು ತಪ್ಪಿಸಲು ಆದಷ್ಟು ಧೂಮಪಾನದಿಂದ ದೂರವಿರಿ.

2. ಲಿಪ್‌ಸ್ಟಿಕ್‌ ಅಲರ್ಜಿ:

ಕೃತಕವಾಗಿ ತುಟಿಗಳಿಗೆ ಬಣ್ಣವನ್ನು ನೀಡುವ ಲಿಪ್‌ಸ್ಟಿಕ್‌ ಮುಂತಾದ ಉತ್ಪನ್ನಗಳು ನಿಮ್ಮ ತ್ವಚೆಗೆ ಸರಿಯಾಗಿ ಹೊಂದಿಕೆಯಾಗದ್ದಿದ್ದಾಗ ಅಲರ್ಜಿಗಳು ಉಂಟಾಗುತ್ತದೆ. ಆದ್ದರಿಂದ ಅಲರ್ಜಿಗಳಿಂದ ಕೂಡ ತುಟಿ ಕಪ್ಪಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನಿಮ್ಮ ತ್ವಚೆಗೆ ಹೊಂದಿಕೆಯಾಗುವಂತಹ ಉತ್ತಮ ಗುಣಮಟ್ಟದ ಲಿಪ್‌ಸ್ಟಿಕ್‌ ಬಳಸಿ.

3. ಸೂರ್ಯನ ಬಿಸಿಲು:

ನಿಮ್ಮ ಚರ್ಮದಂತೆಯೇ, ತುಟಿಗಳು ಕೂಡ ಅತಿಯಾದ ಸೂರ್ಯನ ಶಾಖಕ್ಕೆ ಕಪ್ಪಾಗಬಹುದು. ಆದ್ದರಿಂದ ಮಧ್ಯಾಹ್ನದ ಉರಿ ಬಿಸಿಲಿನಿಂದ ಆದಷ್ಟು ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಿ.

4. ಮೌತ್ ಫ್ರೆಶ್‌ನರ್‌ಗಳಿಂದ ಅಲರ್ಜಿ:

ನೀವೂ ಬಳಸುವ ಮೌತ್ ಫ್ರೆಶ್‌ನರ್‌ಗಳಲ್ಲಿ ಅತಿಯಾಗಿ ರಾಸಾಯನಿಕಗಳನ್ನು ಬಳಸಿರುವುದರಿಂದ ಅದು ನಿಮ್ಮ ಚರ್ಮಕ್ಕೆ ಅಲರ್ಜಿಯನ್ನು ಉಂಟುಮಾಡಬಹುದು, ಇದು ತುಟಿಗಳ ಬಣ್ಣ ಕಪ್ಪಾಗಲು ಕಾರಣವಾಗಬಹುದು. ಆದ್ದರಿಂದ ಆದಷ್ಟು ಉತ್ತಮ ಗುಣಮಟ್ಟದ ಮೌತ್ ಫ್ರೆಶ್‌ನರ್‌ಗಳನ್ನು ಖರೀದಿಸಿ.

ಇದನ್ನು ಓದಿ: ಸಂಗಾತಿಯ ಹುಡುಕಾಟದಲ್ಲಿದ್ದೀರಾ? ನಿಮಗಾಗಿ ಇಲ್ಲಿದೆ ಪ್ರಮುಖ ಡೇಟಿಂಗ್ ಆ್ಯಪ್​ಗಳ ಮಾಹಿತಿ

5. ಟೂತ್‌ಪೇಸ್ಟ್‌ಗಳಿಂದ ಅಲರ್ಜಿ:

ಇತ್ತೀಚೆಗೆ ನಿಮ್ಮ ಹಲ್ಲುಗಳು ಹೊಳೆಯುವಂತೆ ಮಾಡುವ ಸಾಕಷ್ಟು ಟೂತ್‌ಪೇಸ್ಟ್‌ಗಳು ಮಾರುಕಟ್ಟೆಗಳಲ್ಲಿ ಕಾಣಬಹುದು. ನೀವು ಜಾಹೀರಾತುಗಳಿಗೆ ಮರುಳಾಗಿ ಖರೀದಿಸುವುದ್ದರಿಂದ, ಇದು ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೊತೆಗೆ ನಿಮ್ಮ ತುಟಿಗೆ ಅಲರ್ಜಿಯನ್ನುಂಟು ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 3:40 pm, Sat, 26 November 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ