National Milk Day 2022: ಇಂದು ರಾಷ್ಟ್ರೀಯ ಕ್ಷೀರ ದಿನ, ಗ್ರಾಮೀಣ ಭಾಗದ ಜನರಿಗೆ ಕ್ಷೀರೋದ್ಯಮದ ದಾರಿ ತೋರಿಸಿಕೊಟ್ಟ ಡಾ ವರ್ಗೀಸ್​ರನ್ನ ನೆನೆಯಲೇ ಬೇಕು

ಇಂದು 'ಭಾರತದ ಶ್ವೇತ ಕ್ರಾಂತಿಯ ಪಿತಾಮಹ', ಕ್ಷೀರ ಕ್ರಾಂತಿಯ ಪಿತಾಮಹ ಎಂದು ಸಹ ಹೆಸರು ಗಳಿಸಿರುವ ಡಾ ವರ್ಗೀಸ್ ಕುರಿಯನ್ ಅವರ 101ನೇ ಜನ್ಮ ವಾರ್ಷಿಕೋತ್ಸವ ಹೀಗಾಗಿ ಅವರ ಸ್ಮರಣಾರ್ಥ ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲಾಗುತ್ತದೆ.

National Milk Day 2022: ಇಂದು ರಾಷ್ಟ್ರೀಯ ಕ್ಷೀರ ದಿನ, ಗ್ರಾಮೀಣ ಭಾಗದ ಜನರಿಗೆ ಕ್ಷೀರೋದ್ಯಮದ ದಾರಿ ತೋರಿಸಿಕೊಟ್ಟ ಡಾ ವರ್ಗೀಸ್​ರನ್ನ ನೆನೆಯಲೇ ಬೇಕು
ರಾಷ್ಟ್ರೀಯ ಕ್ಷೀರ ದಿನ
Follow us
TV9 Web
| Updated By: ಆಯೇಷಾ ಬಾನು

Updated on:Nov 26, 2022 | 8:21 AM

ಭಾರತವು ಹಾಲಿನ ಉತ್ಪಾದನೆ ಮತ್ತು ಅದರ ಪೂರೈಕೆಯಲ್ಲಿ ಬಹಳ ಯಶಸ್ಸನ್ನು ಪಡೆದುಕೊಂಡಿದೆ. ಪ್ರಸ್ತುತ ಅಂಕಿಅಂಶಗಳ ಪ್ರಕಾರ, ನಮ್ಮ ದೇಶವು 210 ಮಿಲಿಯನ್ ಟನ್ ಹಾಲು ಉತ್ಪಾದಿಸಲು ಪ್ರಾರಂಭಿಸಿದೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ತಿಳಿಸಿದೆ. ಇಂದು ‘ಭಾರತದ ಶ್ವೇತ ಕ್ರಾಂತಿಯ ಪಿತಾಮಹ’, ಕ್ಷೀರ ಕ್ರಾಂತಿಯ ಪಿತಾಮಹ ಎಂದು ಸಹ ಹೆಸರು ಗಳಿಸಿರುವ ಡಾ ವರ್ಗೀಸ್ ಕುರಿಯನ್(Dr Verghese Kurien) ಅವರ 101ನೇ ಜನ್ಮ ವಾರ್ಷಿಕೋತ್ಸವ ಹೀಗಾಗಿ ಅವರ ಸ್ಮರಣಾರ್ಥ ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಹಾಲಿನ ಪ್ರಾಮುಖ್ಯತೆ ಮತ್ತು ಅದರ ಪ್ರಯೋಜನಗಳನ್ನು ಎತ್ತಿ ಹಿಡಿಯಲಾಗುತ್ತದೆ. ಪ್ರತಿ ವರ್ಷ ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನವನ್ನು(National Milk Day)  ಆಚರಿಸಲಾಗುತ್ತದೆ.

ರಾಷ್ಟ್ರೀಯ ಕ್ಷೀರ ದಿನ 2022 ಇತಿಹಾಸ

ಭಾರತದಲ್ಲಿ ಅತಿದೊಡ್ಡ ಸ್ವಾವಲಂಬಿ ಉದ್ಯಮವು 2014 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಭಾರತೀಯ ಡೈರಿ ಅಸೋಸಿಯೇಷನ್ ​​(IDA) ಈ ದಿನವನ್ನು ಪ್ರಾರಂಭಿಸಿತು. 2014ರ ನವೆಂಬರ್ 26ರಂದು ಮೊದಲ ಬಾರಿ ರಾಷ್ಟ್ರೀಯ ಕ್ಷೀರ ದಿನ ಆಚರಿಸಿದ್ದು, 22 ರಾಜ್ಯಗಳ ಹಾಲು ಉತ್ಪಾದಕರು ಇದರಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Milk Benefits: ಮಲಗುವ ಮುನ್ನ ಹಾಲು ಕುಡಿದರೆ ನಿಮ್ಮ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ

ದೇಶವು ಅಧಿಕ ಹಾಲು ಉತ್ಪಾದಕ ಕೇಂದ್ರಗಳನ್ನು ಹೊಂದಿ, ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದೊಂದಿಗೆ ಡಾ ವರ್ಗೀಸ್ ಕುರಿಯನ್ ಅವರು ಅಮುಲ್ ಮಾದರಿ ಹೈನುಗಾರಿಕೆ, ಹೊನಲು ಕಾರ್ಯಾಚರಣೆ ಆರಂಭಿಸಿದ್ದು, ಇವು ಭಾರತದಲ್ಲಿ ಯಶಸ್ವಿಯಾದವು. ಈ ಮೂಲಕ ಗ್ರಾಮೀಣ ಹೈನುಗಾರಿಕೆ ಕ್ಷೇತ್ರವೂ ಅಭಿವೃದ್ಧಿ ಸಾಧಿಸಿತು. ಹೀಗಾಗೇ ಕುರಿಯನ್ ಅವರನ್ನು “ರಾಷ್ಟ್ರೀಯ ಕ್ಷೀರ ಕ್ರಾಂತಿಯ ಪಿತಾಮಹ” ಎಂದು ಕರೆಯಲಾಗುತ್ತೆ.

ರಾಷ್ಟ್ರೀಯ ಕ್ಷೀರ ದಿನ 2022 ಆಚರಣೆ

ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಈ ವರ್ಷದ “ರಾಷ್ಟ್ರೀಯ ಹಾಲು ದಿನ” ವನ್ನು “ಆಜಾದಿ ಕಾ ಅಮೃತ್ ಮಹೋತ್ಸವ” ದ ಅಂಗವಾಗಿ 26 ನವೆಂಬರ್ 2022 ರಂದು ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ 2022ನ್ನು ಸಹ ವಿತರಿಸಲಾಗುವುದು. ಸಮಾರಂಭದಲ್ಲಿ ವರ್ಗೀಸ್ ಕುರಿಯನ್ ಅವರ ಜೀವನ ಪುಸ್ತಕ ಮತ್ತು ಹಾಲಿನ ಕಲಬೆರಕೆ ಕುರಿತ ಕಿರುಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಲಿದ್ದಾರೆ.

ಯಾರು ಈ ಡಾ ವರ್ಗೀಸ್ ಕುರಿಯನ್?

ಡಾ ವರ್ಗೀಸ್ ಕುರಿಯನ್, 1921ರಲ್ಲಿ ಕೇರಳದ ಕೋಯಿಕೋಡ್ ನಲ್ಲಿ ಜನಿಸಿದರು. ಇವರು ಗ್ರಾಮೀಣ ಭಾಗದ ಜನರಿಗೆ ಹೈನುಗಾರಿಕೆ, ಕ್ಷೀರೋದ್ಯಮದಲ್ಲಿ ಹೊಸ ದಾರಿ ತೋರಿಸಿಕೊಟ್ಟವರು. ಮದರಾಸ್ ವಿವಿಯಿಂದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವಿ ಪಡೆದು ಬಳಿಕ ಅಮೆರಿಕದ ಮಿಚಿಗನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಲೋಹ ವಿಜ್ಞಾನ ಮತ್ತು ನ್ಯೂಕ್ಲಿಯರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕ್ಷೀರ ಕ್ರಾಂತಿಯ ಮೂಲಕ ದೇಶ ಸಬಲತೆ, ಸ್ವಾವಲಂಬನೆಗೆ ನೆರವಾಗುವಲ್ಲಿ ವರ್ಗೀಸ್ ಕುರಿಯನ್ ಅವರ ಕೊಡುಗೆ ಅಪಾರ.

Published On - 8:21 am, Sat, 26 November 22

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ