AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ಈ ಚಿತ್ರದಲ್ಲಿ ನಿಮ್ಮ ಆಯ್ಕೆಯ ಮರ ಯಾವುದು? ಇದುವೇ ರಿವೀಲ್ ಮಾಡುತ್ತೆ ನಿಮ್ಮ ವ್ಯಕ್ತಿತ್ವ

ಕೆಲ ವ್ಯಕ್ತಿಗಳು ನೋಡಲು ಒಂದೇ ರೀತಿ ಇರಬಹುದು. ಆದರೆ ವ್ಯಕ್ತಿಯ ನಡವಳಿಕೆ, ವರ್ತನೆ, ಗುಣಸ್ವಭಾವವು ಭಿನ್ನವಾಗಿರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯುವುದು ಬಹಳ ಸುಲಭದಾಯಕವಾಗಿದ್ದು, ಕೆಲವು ಚಿತ್ರಗಳ ಆಯ್ಕೆಯು ಗುಣಸ್ವಭಾವವು ರಿವೀಲ್ ಆಗುತ್ತದೆ. ಈ ಚಿತ್ರದಲ್ಲಿರುವ ಕೆಲವು ಮರಗಳಿವೆ, ಅದರಲ್ಲಿ ಯಾವ ಮರ ಆಯ್ಕೆ ಮಾಡಿಕೊಳ್ಳುತ್ತೀರಿ, ಅದುವೇ ನಿಮ್ಮ ನಿಜವಾದ ಗುಣವನ್ನು ಬಹಿರಂಗ ಪಡಿಸುತ್ತದೆ. ಹಾಗಾದ್ರೆ ಚಿತ್ರದಲ್ಲಿರುವ ಮರದ ಆಯ್ಕೆಯು ನಿಮ್ಮ ವ್ಯಕ್ತಿತ್ವ ಹೇಗೆ ರಿವೀಲ್ ಮಾಡುತ್ತದೆ ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ಈ ಚಿತ್ರದಲ್ಲಿ ನಿಮ್ಮ ಆಯ್ಕೆಯ ಮರ ಯಾವುದು? ಇದುವೇ ರಿವೀಲ್ ಮಾಡುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Feb 01, 2025 | 2:23 PM

Share

ಸಾಮಾನ್ಯವಾಗಿ ವ್ಯಕ್ತಿಯ ಮುಖ, ಅಂಗೈ ನೋಡಿ, ಹಸ್ತರೇಖೆ, ಹಣೆ, ಮೂಗು, ಕಣ್ಣು, ಮೂಗು, ಹುಬ್ಬು ಹಾಗೂ ಕಿವಿಯ ಆಕಾರದಿಂದಲೇ ಗುಣ ಸ್ವಭಾವವನ್ನು ಹೇಳುವುದನ್ನು ನೋಡಿರಬಹುದು. ಇಲ್ಲದಿದ್ದರೆ ವ್ಯಕ್ತಿಯ ಜೊತೆಗೆ ಸ್ವಲ್ಪ ಸಮಯ ಕಳೆದು ಆತ ಹೇಗೆ ಎನ್ನುವ ನಿರ್ಣಯಕ್ಕೆ ಬರುವುದು ಕಷ್ಟವೇನಲ್ಲ. ಆದರೆ ಕೆಲವು ಚಿತ್ರಗಳ ಆಯ್ಕೆಯು ವ್ಯಕ್ತಿ ಹೇಗೆ ಎಂದು ಹೇಳುತ್ತದೆ. ಈ ಚಿತ್ರದಲ್ಲಿ ಕೆಲವು ಮರಗಳಿದ್ದು, ನೀವು ಯಾವ ಮರವನ್ನು ಆಯ್ಕೆ ಮಾಡಿಕೊಳ್ಳುತ್ತಿರಿ ಎನ್ನುವ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಸುಲಭವಾಗಿ ನಿರ್ಣಯಿಸಬಹುದು.

  • ಮೊದಲ ಚಿತ್ರ ಆಯ್ಕೆ ಮಾಡಿಕೊಂಡರೆ ಈ ವ್ಯಕ್ತಿಗಳು ಸ್ವಭಾವತಃ ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದು, ಕೆಲಸ ಸ್ಥಳಗಳಲ್ಲಿ ಹಾಸ್ಯದ ವಾತಾವರಣವನ್ನು ಸೃಷ್ಟಿಸುತ್ತಾರೆ. ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಇವರಲ್ಲಿ ಅಧಿಕವಾಗಿದ್ದು ಯಾವುದೇ ಸಮಯದಲ್ಲಿಯೂ ಶಾಂತವಾಗಿರಲು ಇಷ್ಟ ಪಡುತ್ತಾರೆ. ಶಾಂತಿಯನ್ನು ಬಯಸುವುದು ಕೆಲಸದ ಸ್ಥಳದಲ್ಲಿ ಹಾಗೂ ಮನೆಯಲ್ಲಿ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಎರಡನೇ ಚಿತ್ರವನ್ನು ಆಯ್ಕೆ ಮಾಡಿಕೊಂಡರೆ ಈ ಜನರು ಸಮಾಜಮುಖಿಯಾಗಿರುತ್ತಾರೆ. ಹೀಗಾಗಿ ಎಲ್ಲಾ ಜನರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ಈ ವ್ಯಕ್ತಿಗಳಲ್ಲಿ ತಾಳ್ಮೆ ಅಧಿಕವಾಗಿದ್ದು ಸಹಾಯ ಮಾಡುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ. ಕೆಲಸದ ವಿಷಯದಲ್ಲಿ ಅಚ್ಚುಕಟ್ಟಾಗಿ ಎಲ್ಲಾ ಕಷ್ಟದ ಕೆಲಸವನ್ನು ಪೂರ್ಣಗೊಳಿಸುವ ಸಾಮರ್ಥ್ಯ ಇವರಲ್ಲಿ ಅಧಿಕವಾಗಿರುತ್ತದೆ. ಅಗತ್ಯಕ್ಕೆ ಅನುಗುಣವಾಗಿ ತಮ್ಮನ್ನು ರೂಪಿಸಿಕೊಳ್ಳುವ ಕಾರಣ ಈ ಜನರು ತಮ್ಮ ಸ್ವಂತಿಕೆ ಕಳೆದುಕೊಳ್ಳುವ ಸಾಮರ್ಥ್ಯವೇ ಹೆಚ್ಚಾಗಿರುತ್ತದೆ.
  • ಮೂರನೇ ಚಿತ್ರ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಉದಾರ ವ್ಯಕ್ತಿತ್ವದಿಂದಲೇ ಗುರುತಿಸಿಕೊಳ್ಳುತ್ತಾರೆ. ಯಾವಾಗಲೂ ಇತರರಿಗೆ ಸಹಾಯ ಮಾಡುವಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಈ ಜನರು ತಮ್ಮ ಬುದ್ಧಿವಂತಿಕೆಯಿಂದಲೇ ಎಲ್ಲರ ನಡುವೆ ಗುರುತಿಸಿಕೊಳ್ಳುತ್ತಾರೆ. ಎಷ್ಟೋ ಸಂದರ್ಭದಲ್ಲಿ ತಮ್ಮ ಆಲೋಚನೆ ಮತ್ತು ನಿರ್ಣಯದೊಂದಿಗೆ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ. ಭವಿಷ್ಯದ ಕುರಿತು ಯೋಚಿಸಿ ಎಚ್ಚರಿಕೆಯಿಂದ ನಿರ್ಧಾರವನ್ನು ಕೈಗೊಳ್ಳುತ್ತಾರೆ.
  • ನಾಲ್ಕನೇ ಚಿತ್ರ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಸೃಜನಶೀಲರಾಗಿದ್ದು, ಈ ಗುಣದಿಂದಲೇ ಗುಂಪಿನಲ್ಲಿ ತಾವು ಮಾಡುವ ಕೆಲಸದಿಂದಲೇ ಎದ್ದು ಕಾಣುತ್ತಾರೆ. ಈ ವ್ಯಕ್ತಿಯ ಸೃಜನಶೀಲ ಗುಣವು ಎಲ್ಲಾ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ತಮ್ಮ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳುವಲ್ಲಿ ಕೆಲಸ ಮಾಡುತ್ತಾರೆ.
  • ಐದನೇ ಚಿತ್ರ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಅತ್ಯಂತ ಕಷ್ಟಪಟ್ಟು ದುಡಿಯುತ್ತಾರೆ. ಹೀಗಾಗಿ ಇವರನ್ನು ಶ್ರಮಜೀವಿಗಳು ಎನ್ನಬಹುದು. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳುತ್ತಾರೆ. ತಮ್ಮ ಅಚಲ ನಿರ್ಣಯದೊಂದಿಗೆ ಯಶಸ್ಸನ್ನು ಸಾಧಿಸುತ್ತಾರೆ. ಕೈ ಹಾಕಿದ ಕೆಲಸವನ್ನು ಪೂರ್ಣಗೊಳಿಸುವವರೆಗೂ ಈ ವ್ಯಕ್ತಿಗಳಿಗೆ ನಿದ್ದೆ ಬರುವುದಿಲ್ಲ. ಈ ಜನರು ಸಮತೋಲನ ಜೀವನ ನಡೆಸುವುದರೊಂದಿಗೆ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ.
  • ಆರನೇ ಚಿತ್ರ ಆಯ್ಕೆ ಮಾಡಿಕೊಳ್ಳುವ ಜನರು ಕ್ರಿಯಾತ್ಮಕವಾಗಿವಾಗಿ ಯೋಚಿಸುತ್ತಾರೆ. ಕೆಲಸವನ್ನು ಸ್ಮಾರ್ಟ್ ಆಗಿ ಮಾಡಿ ಮುಗಿಸುವ ಸಾಮರ್ಥ್ಯ ಇವರಿಗಿದೆ. ಸ್ವಂತ ಆಲೋಚನೆಯಿಂದ ತಮ್ಮದೇ ಹಾದಿಯಲ್ಲಿ ನಡೆಸು ಯಶಸ್ಸು ಕಾಣುತ್ತಾರೆ. ಈ ವ್ಯಕ್ತಿಗಳು ಕೆಲಸ ಮಾಡುವ ರೀತಿಯಿಂದಲೇ ಬಹುಬೇಗನೆ ಯಶಸ್ಸು ಗಳಿಸುತ್ತಾರೆ. ಸಮಾಜದಲ್ಲಿ ಇವರು ತಮ್ಮ ವ್ಯಕ್ತಿತ್ವದಿಂದ ಹೆಸರು ಸಂಪಾದಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:23 pm, Sat, 1 February 25

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ