Personality Test: ಕಾಲ್ಬೆರಳುಗಳ ಮೇಲೆ ಕೂದಲಿರುವ ಜನರ ಸ್ವಭಾವ ಹೇಗಿರುತ್ತೆ ಗೊತ್ತಾ?

ಸಾಮುದ್ರಿಕ ಶಾಸ್ತ್ರದಲ್ಲಿ ಪಾದದ ಆಕಾರ, ಕೈ ಬೆರಳುಗಳ ಆಕಾರ, ಕಣ್ಣು, ಮೂಗು ಸೇರಿದಂತೆ ದೇಹಕಾರದ ಮೂಲಕ ಒಬ್ಬ ವ್ಯಕ್ತಿಯ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿ ಕಾಲ್ಬೆರಳಿನ ಕೂದಲಿನ ಮೂಲಕವೂ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದಂತೆ. ಹೀಗೆ ನಿಮ್ಮ ಕಾಲ್ಬೆರಳುಗಳಲ್ಲೂ ಕೂದಲು ಇದ್ಯಾ? ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಈ ಅಂಶದ ಮೂಲಕವೇ ನಿಮ್ಮ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

Personality Test: ಕಾಲ್ಬೆರಳುಗಳ ಮೇಲೆ ಕೂದಲಿರುವ ಜನರ ಸ್ವಭಾವ ಹೇಗಿರುತ್ತೆ ಗೊತ್ತಾ?
ವ್ಯಕ್ತಿತ್ವ ಪರೀಕ್ಷೆ
Image Credit source: Getty Images

Updated on: Nov 02, 2025 | 3:28 PM

ಕೆಲವರ ಕಾಲ್ಬೆರಳಿನ ಮೇಲೆ ಕೂದಲು (Toe Hair) ಬೆಳೆಯುತ್ತವೆ. ಹೀಗೆ ಹೆಬ್ಬೆರಳು ಸೇರಿದಂತೆ ಕಾಲಿನ ಬೆರಳುಗಳಲ್ಲಿ ಕೂದಲು ಬೆಳೆದರೆ ದೇಹದಲ್ಲಿ ರಕ್ತದ ಪೂರೈಕೆ ಚೆನ್ನಾಗಾಗುತ್ತಿದೆ ಮತ್ತು ಹೃದಯ ಕೂಡ ಆರೋಗ್ಯವಾಗಿದೆ ಎಂದರ್ಥ ಎಂದು ಹೇಳಲಾಗುತ್ತದೆ. ಇದು ಮಾತ್ರವಲ್ಲದೆ ಕಾಲ್ಬೆರಳುಗಳಲ್ಲಿ ಕೂದಲು ಬೆಳೆಯುವ ಅಂಶ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ಬಹಿರಂಗಪಡಿಸುತ್ತಂತೆ. ಹೌದು ಸಾಮುದ್ರಿಕ ಶಾಸ್ತ್ರದಲ್ಲಿ ಪಾದದ ಆಕಾರ, ಕೈ ಬೆರಳು, ಕಾಲ್ಬೆರಳಿನ ಆಕಾರ, ಕಣ್ಣು, ಮೂಗು, ತುಟಿಯ ಆಕಾರ, ಹಸ್ತರೇಖೆಯ ಮೂಲಕ ವ್ಯಕ್ತಿಯ ಸ್ವಭಾವ, ಆತನ ಭಾವನಾತ್ಮಕ ನಿಲುವುಗಳನ್ನು ತಿಳಿದುಕೊಳ್ಳುವಂತೆ ಕಾಲ್ಬೆರಳಿನಲ್ಲಿ ಬೆಳೆಯುವ ಕೂದಲಿನ ಮೂಲಕವೂ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದಂತೆ. ನಿಮ್ಮ ಕಾಲಿನ ಬೆರಳುಗಳ ಮೇಲೂ ಇದೇ ರೀತಿ ಕೂದಲು ಬೆಳೆಯುತ್ತಾ, ಹಾಗಿದ್ರೆ ಈ ಅಂಶದ ಮೂಲಕ ನಿಮ್ಮ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಕಾಲ್ಬೆರಳುಗಳ ಮೇಲೆ ಕೂದಲಿದ್ದರೆ ಏನರ್ಥ ಗೊತ್ತಾ?

  • ಸಾಮುದ್ರಿಕಶಾಸ್ತ್ರದ ಪ್ರಕಾರ ಕಾಲ್ಬೆರಳುಗಳ ಮೇಲೆ ಕೂದಲು ಇರುವುದು ಸಂಪತ್ತು, ಐಶ್ವರ್ಯ ಮತ್ತು ಸಂತೋಷದ ಸಂಕೇತವಾಗಿದೆ. ಅಂತಹ ವ್ಯಕ್ತಿಗಳು ಆರ್ಥಿಕವಾಗಿ ಬಲಶಾಲಿಯಾಗಿರುತ್ತಾರೆ ಮತ್ತು ಅವರು ತಮ್ಮ ಸ್ವಂತ ಪ್ರಯತ್ನದಿಂದ ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಾರಂತೆ.
  • ಕಾಲ್ಬೆರಳಿನಲ್ಲಿ ಕೂದಲು ಹೊಂದಿರುವವರು ಕಠಿಣ ಪರಿಶ್ರಮಿಗಳು. ಇವರು ವ್ಯವಹಾರ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಅಲ್ಲದೆ ಇವರನ್ನು ತುಂಬಾ ಸ್ವಾವಲಂಬಿಗಳು, ಜವಾಬ್ದಾರಿಯುತರು ಮತ್ತು ಆತ್ಮವಿಶ್ವಾಸವನ್ನು ಹೊಂದಿರುವವರು ಎಂದು ಹೇಳಲಾಗುತ್ತದೆ. ಇವರು ತಮ್ಮ ಮಾತಿಗೆ ದೃಢವಾಗಿ ನಿಲ್ಲುವಲ್ಲಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯುವುದಿಲ್ಲ.
  • ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಾಲ್ಬೆರಳುಗಳಲ್ಲಿ ಕೂದಲನ್ನು ಹೊಂದಿರುವ ವ್ಯಕ್ತಿಗಳು ಜ್ಯೋತಿಷ್ಯ, ಧ್ಯಾನ, ಯೋಗ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಳವಾದ ಆಸಕ್ತಿಯನ್ನು ಹೊಂದಿರುತ್ತಾರಂತೆ.
  • ಇವರುಗಳು ಹೊರಗಿನ ವಿಷಯಗಳಿಗಿಂತ ಸ್ವಯಂ ಜ್ಞಾನವನ್ನು ಹುಡುಕುವಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇದರಿಂದಲೇ ಇವರು ಪ್ರತಿಯೊಂದು ವಿಷಯದಲ್ಲೂ ಆಳವಾಗಿ ಯೋಚಿಸುತ್ತಾರೆ.

ಇದನ್ನೂ ಓದಿ: ಫೋನ್‌ನಲ್ಲಿ ಟೈಪಿಂಗ್‌ ಮಾಡಲು ಒಂದೇ ಒಂದು ಬೆರಳನ್ನು ಬಳಸುವ ಜನರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?

  • ಅಲ್ಲದೆ ಕಾಲ್ಬೆರಳಿನ ಕೂದಲು ವ್ಯಕ್ತಿಯಲ್ಲಿ ಅಡಗಿರುವ ಕೋಪ ಮತ್ತು ದುರಹಂಕಾರವನ್ನು ಸಹ ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಕಾಲ್ಬೆರಳಿನಲ್ಲಿ ಕೂದಲನ್ನು ಹೊಂದಿರುವ ಜನರು ಕೆಲವೊಮ್ಮೆ ತುಂಬಾ ಕೋಪಗೊಳ್ಳುತ್ತಾರೆ ಮತ್ತು ಅಸಮಂಜಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಅವರಿಗೆ ಸಂಯಮದಿಂದ ಇರಲು ಸೂಚಿಸಲಾಗುತ್ತದೆ.
  • ಕಾಲ್ಬೆರಳುಗಳ ಮೇಲೆ ಕೂದಲನ್ನು ಹೊಂದಿರುವ ಜನರು ಅದೃಷ್ಟದ ಮೇಲೆ ಅವಲಂಬಿತರಾಗಿರುವುದಿಲ್ಲ. ಬದಲಾಗಿ ಇವರು ಕಷ್ಟಪಟ್ಟು ಕೆಲಸ ಮಾಡುವ ಮತ್ತು ಆ ಕಠಿಣ ಪರಿಶ್ರಮದ ಆಧಾರದ ಮೇಲೆ ತಮ್ಮ ಜೀವನವನ್ನು ಹೇಗೆ ನಿರ್ಮಿಸುವುದು ಎಂಬುದರ ಮೇಲೆ ನಂಬಿಕೆಯನ್ನು ಇಟ್ಟಿರುವವರಾಗಿರುತ್ತಾರೆ. ಇವರು ತಮ್ಮ ಈ ಗುಣಗಳಿಂದಲೇ ಎಲ್ಲರ ಮೇಲೂ ಸಕಾರಾತ್ಮಕ ಪ್ರಭಾವವನ್ನು ಬೀರುತ್ತಾರೆ ಎಂದು ಹೇಳಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ