ಸಾಂದರ್ಭಿಕ ಚಿತ್ರ
ಒಬ್ಬ ವ್ಯಕ್ತಿಯ ಪರಿಚಯವಾದಾಗ ಮೊದಲು ಕೇಳುವುದೇ ಹೆಸರು. ಆ ಹೆಸರಿನಿಂದಲೇ ಆತನನ್ನು ಕರೆಯುತ್ತೇವೆ. ಇನ್ನು ಹುಟ್ಟಿದ ಮಗುವಿಗೆ ಯಾವ ಅಕ್ಷರ (Letter) ದಿಂದ ಹೆಸರು ಇಡಬೇಕು ಎಂದು ಜಾತಕ ನೋಡುತ್ತೇವೆ. ಆದರೆ ಈ ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ವ್ಯಕ್ತಿತ್ವ (Personality) ಹೇಳುತ್ತೆ. ಹೆಸರಿನ ಮೊದಲ ಇಂಗ್ಲಿಷ್‌ನ ವರ್ಣಮಾಲೆಯ ಅಕ್ಷರ ವ್ಯಕ್ತಿತ್ವದ ಲಕ್ಷಣಗಳನ್ನು ಸೂಚಿಸುತ್ತವೆಯಂತೆ. ಅದಲ್ಲದೆ, ಪ್ರತಿಯೊಂದು ಹೆಸರು ಸುಂದರವಾಗಿದ್ದು, ವಿಶೇಷ ಅರ್ಥವನ್ನು ಒಳಗೊಂಡಿರುತ್ತದೆ. ಇನ್ನು, ಹೆಸರಿನ ಮೊದಲ ಅಕ್ಷರದಲ್ಲಿ ವ್ಯಕ್ತಿತ್ವವು ಅಡಗಿದ್ದು, ನಿಮ್ಮ ಹೆಸರಿನ ಮೊದಲ ಅಕ್ಷರದಿಂದ ಗುಣಸ್ವಭಾವ ತಿಳಿಯಬಹುದಾಗಿದೆ.
- ಎ : ಇಂಗ್ಲಿಷ್ ವರ್ಣಮಾಲೆಯ ಎ ಅಕ್ಷರದಿಂದ ಹೆಸರು ಆರಂಭವಾಗುವ ವ್ಯಕ್ತಿಗಳು ಧೈರ್ಯವಂತರು ಹಾಗೂ ಛಲವುಳ್ಳವರಾಗಿರುತ್ತಾರೆ. ಸಾಹಸಮಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸದಾ ಬ್ಯುಸಿಯಾಗಿರುತ್ತಾರೆ. ಈ ಜನರು ಕೌಶಲ್ಯಗಳನ್ನು ಹೊಂದಿದ್ದು ಇವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ.
- ಬಿ : ಯಾವ ವ್ಯಕ್ತಿಯ ಹೆಸರಿಗೆ ಬಿ ಅಕ್ಷರದಿಂದ ಆರಂಭವಾಗುತ್ತದೆ ಅವರು ತಮ್ಮ ಭಾವನೆಗಳನ್ನು ಹಾಗೂ ಯೋಚನೆಗಳನ್ನು ಪರೀಕ್ಷಿಸುತ್ತಿರುತ್ತದೆ. ಎಲ್ಲಾ ಸನ್ನಿವೇಶ ಹಾಗೂ ಸಂದರ್ಭವನ್ನು ಹೇಗೆ ನಿಭಾಯಿಸುವುದೆಂದು ಈ ಜನರಿಗೆ ಚೆನ್ನಾಗಿ ತಿಳಿದಿದೆ. ಆದರೆ ಈ ವ್ಯಕ್ತಿಗಳು ಸ್ವಾರ್ಥಗುಣ ಹೆಚ್ಚಿದ್ದು, ತಮ್ಮ ಕೆಲಸವಾಗಲು ಇತರರನ್ನು ಬಳಸಿಕೊಳ್ಳುತ್ತಾರೆ. ದುರಾಸೆಯುಳ್ಳ ವ್ಯಕ್ತಿಗಳು ಇವರಾಗಿರುತ್ತಾರೆ.
- ಸಿ : ಹೆಸರಿನ ಮೊದಲ ಅಕ್ಷರ ಸಿಯಾಗಿದ್ದರೆ ಅಂತಹ ವ್ಯಕ್ತಿಗಳು ಪ್ರತಿಭಾವಂತರು. ಪ್ರಾಮಾಣಿಕತೆಯುಳ್ಳ ವ್ಯಕ್ತಿಯಾಗಿದ್ದು, ಮೋಸ ಕಪಟ ಈ ವ್ಯಕ್ತಿಗಳಿಗೆ ತಿಳಿದಿರುವುದಿಲ್ಲ. ಮಾತಿನಲ್ಲಿ ಚತುರರಾಗಿದ್ದು, ಎಲ್ಲರನ್ನು ಮೋಡಿ ಮಾಡುತ್ತಾರೆ. ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಕಾರಣ ಇವರಿಗೆ ದೊಡ್ಡ ಸಂಖ್ಯೆಯಲ್ಲಿ ಸ್ನೇಹಿತರು ಇರುತ್ತಾರೆ.
- ಡಿ : ಹೆಸರಿನ ಮೊದಲ ಅಕ್ಷರ ಡಿಯಾಗಿದ್ದರೆ ಈ ವ್ಯಕ್ತಗಳು ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಾರೆ. ಶ್ರಮಜೀವಿಗಳಾಗಿ ಉತ್ತಮ ಜೀವನ ಕಟ್ಟಿಕೊಳ್ಳಲು ಶ್ರಮಿಸುತ್ತಾರೆ. ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಎಲ್ಲವೂ ಅಚ್ಚಕಟ್ಟಾಗಿ ಇರಬೇಕೆಂದು ಬಯಸುತ್ತಾರೆ..ನಾಯಕತ್ವ ಗುಣ ಹೆಚ್ಚಿದ್ದು, ತಮ್ಮ ಜೀವನದ ಗುರಿ ಕುರಿತು ಸ್ಪಷ್ಟತೆ ಇರುತ್ತದೆ. ಹಠಮಾರಿಗಳಾಗಿದ್ದು ಬೇಕೆಂದಿದ್ದನ್ನು ಪಡೆಯದೇ ಬಿಡಲ್ಲ
- ಇ: ವ್ಯಕ್ತಿಯ ಹೆಸರು ಇ ಅಕ್ಷರದಿಂದ ಪ್ರಾರಂಭವಾದರೆ ಪ್ರೀತಿ ಹಾಗೂ ಸನ್ನಡತೆ ಗುಣ ಹೊಂದಿದ್ದು, ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಗುಣ ಇವರಲ್ಲಿದೆ. ಸ್ನೇಹಪರರು ಆಗಿದ್ದು, ಸ್ನೇಹವನ್ನು ಸಂಪಾದಿಸುತ್ತಾರೆ. ಸಮಯ ಪಾಲನೆ ಮಾಡುವಲ್ಲಿ ಇವರು ಸೋಲುತ್ತಾರೆ.
- ಎಫ್ : ಯಾರ ಹೆಸರು ಎಫ್ ಅಕ್ಷರದಿಂದ ಪ್ರಾರಂಭವಾಗುತ್ತದೆಯೇ ಅವರು ಮನೆಯಲ್ಲೇ ಹೆಚ್ಚು ಇರಲು ಇಷ್ಟ ಪಡುತ್ತಾರೆ..ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗೂ ಸ್ವತಃ ಜವಾಬ್ದಾರಿಗಳನ್ನು ತೆಗೆದುಕೊಂಡು ನಿಭಾಯಿಸುತ್ತಾರೆ. ಸಂಬಂಧದಲ್ಲಿ ಬದ್ಧತೆಯಿದ್ದು ಕೆಲವೊಮ್ಮೆ ಮಕ್ಕಳಂತೆ ಆಡಬಹುದು.
- ಜಿ : ವ್ಯಕ್ತಿಯ ಹೆಸರಿನ ಮೊದಲ ಅಕ್ಷರ ಜಿಯಾಗಿದ್ದರೆ ಇವರಿಗೆ ಮೂಗು ತೂರಿಸುವ ವ್ಯಕ್ತಿಗಳೆಂದರೆ ಆಗುವುದಿಲ್ಲ. ಮುಂಗೋಪಿಗಳಾಗಿದ್ದು. ಇಷ್ಟ ಬಂದಂತೆ ಬದುಕಲು ಬಯಸುತ್ತಾರೆ. ಬುದ್ಧಿವಂತಿಕೆ ಹಾಗೂ ಚಾಣಾಕ್ಷತನದಿಂದ ಸತ್ಯವನ್ನು ಕಂಡುಕೊಳ್ಳುತ್ತಾರೆ.
- ಹೆಚ್ : ಈ ಅಕ್ಷರದಿಂದ ಹೆಸರು ಶುರುವಾದರೆ ಈ ವ್ಯಕ್ತಿಗಳು ಜೀವನವನ್ನು ಪ್ರಾಯೋಗಿಕವಾಗಿ ನೋಡುತ್ತಾರೆ. ಮಹತ್ವಾಕಾಂಕ್ಷೆವುಳ್ಳ ವ್ಯಕ್ತಿಯಾಗಿದ್ದು, ನಾಯಕತ್ವ ಗುಣ ಹೊಂದಿರುತ್ತಾರೆ. ತಾಳ್ಮೆ ಹಾಗೂ ಸೂಕ್ಷ್ಮ ಮನಸ್ಥಿತಿ ಹೊಂದಿದ್ದು ಆರ್ಥಿಕವಾಗಿ ಸದೃಢರಾಗಿರುತ್ತಾರೆ. ಸಂಬಂಧಗಳ ಅತಿಯಾದ ಪೊಸೆಸಿವ್ನೆಸ್ ಹೊಂದಿದ್ದು ಇದುವೇ ಅಸಮಾಧಾನಕ್ಕೆ ಕಾರಣವಾಗುತ್ತದೆ.
- ಐ : ಐ ಅಕ್ಷರದಿಂದ ಹೆಸರು ಪ್ರಾರಂವಾದರೆ ಮನಸ್ಸಿನಿಂದ ತುಂಬಾನೇ ಒಳ್ಳೆಯವರು. ಬೇರೆಯವರ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ಅತಿಯಾಗಿ ಯೋಚಿಸುತ್ತಾರೆ. ಆದರೆ ಕೆಲವೊಮ್ಮೆ ಜೀವನದಲ್ಲಿ ನೋವು, ಕಷ್ಟ ಬಂದರೆ ಕೊರಗುತ್ತಾ ಕೂರುತ್ತಾರೆ. ಇನ್ನೊಬ್ಬರಿಗೆ ಕಷ್ಟ ಎಂದಾಗ ಸಹಾಯ ಮಾಡುವುದರಲ್ಲಿ ಎತ್ತಿದ ಕೈ.
- ಜೆ : ಯಾವ ವ್ಯಕ್ತಿಯ ಹೆಸರು ಜೆಯಿಂದ ಪ್ರಾರಂಭವಾಗುತ್ತದೆಯೋ ಅಂತಹವರು ಅತಿಯಾದ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ತಾವು ಅಂದುಕೊಂಡದ್ದನ್ನು ಸಾಧಿಸದೇ ಬಿಡಲಾರರು. ತಮ್ಮ ಸಂಗಾತಿ ಹೆಚ್ಚು ಮಹತ್ವ ನೀಡುತ್ತಾರೆ. ಒಂದು ವೇಳೆ ಎಲ್ಲವನ್ನು ಅರ್ಥೈಸಿಕೊಂಡು ಹೋಗುವ ಜೊತೆಗಾರರು ಸಿಕ್ಕರೆ ಇವರಷ್ಟು ಖುಷಿಯಾಗುವವರು ಯಾರು ಇಲ್ಲ.
- ಕೆ : ಯಾವ ವ್ಯಕ್ತಿಯ ಹೆಸರು ಕೆ ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಆ ವ್ಯಕ್ತಿಗಳು ನಾಚಿಕೆ ಸ್ವಭಾವ ಹೊಂದಿರುತ್ತಾರೆ. ಈ ವ್ಯಕ್ತಿಗಳ ಮನಸ್ಸಿನಲ್ಲೇನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ನಿಗೂಢವಾಗಿಯೇ ಉಳಿಯುತ್ತಾರೆ. ಶಾಂತಿಯುತ ಜೀವನ ಬಯಸುತ್ತಾರೆ. ಅತಿಯಾಗಿ ಯೋಚಿಸುವ ಗುಣ ಇವರಿಗಿದ್ದು, ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
- ಎಲ್ : ಹೆಸರಿನ ಮೊದಲ ಅಕ್ಷರ ಎಲ್ ಆಗಿದ್ದರೆ ಈ ವ್ಯಕ್ತಿಗಳು ಜೀವನವನ್ನು ವಿಭಿನ್ನವಾಗಿ ನೋಡುತ್ತಾರೆ. ಉಳಿದವರಿಗಿಂತ ಭಿನ್ನವಾಗಿದ್ದು, ಎಲ್ಲರೊಂದಿಗೆ ಬೆರೆಯುತ್ತಾರೆ. ಹಾಸ್ಯಪ್ರಜ್ಞೆ ಹೊಂದಿದ್ದು ತಮಾಷೆ ಮಾಡುತ್ತಾ ಖುಷಿಯಾಗಿರುತ್ತಾರೆ. ಈ ಜನರು ಜೀವನ ಸಂಗಾತಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.
- ಎಮ್ : ಎಮ್ ಅಕ್ಷರದಿಂದ ಹೆಸರು ಪ್ರಾರಂಭವಾದರೆ ಈ ಜನರು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಪ್ರಾಮಾಣಿಕವಾಗಿದ್ದು, ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಮಾತು ಕೂಡ ವಿರಳ ಹಾಗೂ ಸರಳವಾಗಿದ್ದು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಮಾತನಾಡುವುದಿಲ್ಲ. ತಾಳ್ಮೆಯುಳ್ಳವರು, ಇವರ ಪರೀಕ್ಷಿಸಿದರೆ ಅಕ್ರಮಣಕಾರಿ ಸ್ವಭಾವ ತೋರಬಲ್ಲರು.
- ಎನ್ : ಈ ಅಕ್ಷರದಿಂದ ಹೆಸರು ಆರಂಭವಾದರೆ ಈ ವ್ಯಕ್ತಿಗಳು ಪರ್ಫೆಕ್ಟ್ ಆಗಿ ಇರಬೇಕು ಎನ್ನುವವರು. ಸಂವಹನ ಕಲೆಯೂ ಹುಟ್ಟಿನಿಂದಲೇ ಬಂದಿರುತ್ತದೆ. ಈ ವ್ಯಕ್ತಿಗಳನ್ನು ಯಾರು ಕೂಡ ಅನುಸರಿಸುವುದಿಲ್ಲ. ಇವರದ್ದೇ ಹಾದಿಯಲ್ಲಿ ನಡೆಯಲು ಇಷ್ಟ ಪಡುತ್ತಾರೆ.
- ಒ : ಒ ಹೆಸರಿನ ಮೊದಲ ಅಕ್ಷರವಾಗಿದ್ದರೆ ಕರುಣಾಮಯಿಗಳಾಗಿದ್ದು, ಪ್ರೀತಿಯುಳ್ಳವರಾಗಿರುತ್ತಾರೆ. ನಂಬಿಕೆ ಅರ್ಹರಾಗಿರುವ ವ್ಯಕ್ತಿಗಳಾಗಿದ್ದು ತಮ್ಮದೇ ಸಿದ್ದಾಂತದಲ್ಲಿ ಬದುಕುತ್ತಾರೆ. ಇವರ ಪ್ರಾಮಾಣಿಕ, ಪ್ರೀತಿ ಹಾಗೂ ಕಾಳಜಿಯುಳ್ಳ ಗುಣವೇ ಹೆಚ್ಚು ಜನಪ್ರಿಯರಾಗಲು ಕಾರಣವಾಗುತ್ತದೆ.
- ಪಿ : ಯಾವ ವ್ಯಕ್ತಿಯ ಹೆಸರು ಪಿಯಿಂದ ಆರಂಭವಾಗುತ್ತದೆ ಅಂತಹ ವ್ಯಕ್ತಿಗಳು ಹೆಚ್ಚು ಕುತೂಹಲ ಉಳ್ಳವರಾಗಿರುತ್ತಾರೆ. ಕೆಲವೊಮ್ಮೆ ಈ ವ್ಯಕ್ತಿಗಳಲ್ಲಿ ಸ್ವಾರ್ಥ ಗುಣವು ಎದ್ದು ಕಾಣುತ್ತದೆ. ಹಠಮಾರಿಗಳಾಗಿದ್ದು ಯಾವುದಕ್ಕೂ ಬಗ್ಗುವುದಿಲ್ಲ. ತನ್ನವರನ್ನು ಖುಷಿಯಾಗಿಡಲು ಪ್ರಯತ್ನಿಸುತ್ತಾರೆ. ಹಾಸ್ಯಪ್ರಜ್ಞೆ ಹೊಂದಿದ್ದು ಎಲ್ಲರನ್ನು ನಗಿಸುತ್ತಾರೆ.
- ಕ್ಯೂ : ವ್ಯಕ್ತಿಯ ಹೆಸರಿನ ಮೊದಲ ಅಕ್ಷರ ಕ್ಯೂ ಆಗಿದ್ದರೆ ಆ ವ್ಯಕ್ತಿಗಳು ನಿಗೂಢ ಸ್ವಭಾವವುಳ್ಳರಾಗಿರುತ್ತಾರೆ. ಪ್ರಾಮಾಣಿಕತೆ ಹೊಂದಿದ್ದು, ಎಲ್ಲರಿಗೂ ಹತ್ತಿರವಾಗುತ್ತಾರೆ. ತನ್ನ ಸುತ್ತಮುತ್ತಲಿನವರಿಗೆ ಸಲಹೆ ನೀಡುತ್ತಾ ಉತ್ತಮ ಗೆಳೆಯರಾಗಿ ಗುರುತಿಸಿಕೊಳ್ಳುತ್ತಾರೆ.
- ಆರ್ : ವ್ಯಕ್ತಿಯ ಹೆಸರು ಆರ್ ನಿಂದ ಶುರುವಾದರೆ ಜ್ಞಾನವುಳ್ಳವರು. ತನ್ನವರ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಶಾಂತವಾಗಿ ಇರಲು ಬಯಸುವ ಎಲ್ಲವನ್ನು ಸರಳವಾಗಿಯೇ ತೆಗೆದುಕೊಳ್ಳುತ್ತಾರೆ. ಬಹುಬೇಗನೇ ಕೋಪ ಮಾಡಿಕೊಳ್ಳುತ್ತಾರೆ. ಆದರೆ ಅಷ್ಟೇ ವೇಗವಾಗಿ ಸಿಟ್ಟು ಹೋಗುತ್ತದೆ.
- ಎಸ್ : ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾದರೆ ಈ ವ್ಯಕ್ತಿಗಳು ಹೆಚ್ಚು ಪ್ರಾಮಾಣಿಕರಾಗಿದ್ದು, ನಾಯಕತ್ವ ಗುಣ ಹೊಂದಿರುತ್ತಾರೆ. ಗುಂಪಿನಲ್ಲಿ ಇವರೇ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. ತನ್ನವರ ಮೇಲೆ ಅತಿಯಾದ ಕಾಳಜಿ ಪ್ರೀತಿ ತೋರುತ್ತಾರೆ.
- ಟಿ : ಹೆಸರಿನ ಮೊದಲ ಅಕ್ಷರ ಟಿ ಆಗಿದ್ದರೆ ಅದೃಷ್ಟಕ್ಕಿಂತ ಪರಿಶ್ರಮದ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿರುತ್ತಾರೆ. ಮನಸ್ತಾಪ ಅಥವಾ ಗಲಾಟೆಗಳಾದಾಗ ಮಧ್ಯವರ್ತಿಯಾಗಿ ಎಲ್ಲವನ್ನು ಸರಿ ಪಡಿಸುವ ಗುಣ ಇವರಲ್ಲಿರುತ್ತದೆ.
- ಯು : ಹೆಸರಿನ ಮೊದಲ ಅಕ್ಷರ ಯು ಆಗಿದ್ದರೆ ಐಷಾರಾಮಿ ಜೀವನಕ್ಕಾಗಿ ಕಷ್ಟ ಪಡುವ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳಿಗೆ ಯಾವಾಗ ಹೇಗೆ ಮಾತನಾಡಬೇಕು ಹಾಗೂ ಏನು ಮಾಡಬೇಕು ಎನ್ನುವುದು ಚೆನ್ನಾಗಿ ತಿಳಿದಿರುತ್ತದೆ. ಹೊಸ ಹೊಸ ಆಲೋಚನೆಗಳ ಮೂಲಕ ಕೆಲಸದ ಸ್ಥಳಗಳಲ್ಲಿ ಹೊಸದ್ದನ್ನು ಮಾಡಲು ಪ್ರಯತ್ನಿಸುತ್ತಾರೆ.
- ವಿ : ವಿ ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳು ಪ್ರಾಮಾಣಿಕರಾಗಿದ್ದು, ನೆನಪಿನ ಶಕ್ತಿ ಹೆಚ್ಚಿರುತ್ತದೆ. ಸಂಬಂಧಗಳಲ್ಲಿ ಹೆಚ್ಚು ಪೊಸೆಸಿವ್ ಆಗಿರುತ್ತಾರೆ. ಗಾಸಿಫ್ ಗಳಿಂದ ಸಮಯ ವ್ಯರ್ಥ ಮಾಡುತ್ತಾರೆ. ಬೇರೆಯವರ ಮೇಲೆ ಹೆಚ್ಚು ಅವಲಂಬಿತರಾಗಿದ್ದರೂ ಕಷ್ಟಪಟ್ಟು ದುಡಿಯುವ ಮನೋಭಾವ ಇವರಲ್ಲಿರುತ್ತದೆ.
- ಡಬ್ಲ್ಯೂ : ಹೆಸರಿನ ಮೊದಲ ಅಕ್ಷರ ಡಬ್ಲ್ಯೂ ಆಗಿದ್ದರೆ ಇವರು ಉತ್ಸಾಹಿಗಳಾಗಿದ್ದು, ಎಲ್ಲವನ್ನು ಮಾಡಿ ಮುಗಿಸುತ್ತಾರೆ. ಆದರೆ ಡೆಡ್‌ಲೈನ್ ಕೊಟ್ಟು ಕೆಲಸ ಮಾಡಲು ಹೇಳಿದರೆ ಹೆಚ್ಚು ಕಿರಿಕಿರಿಗೊಳಗಾಗುತ್ತಾರೆ. ತನ್ನ ಸುತ್ತಮುತ್ತಲಿನವರೊಂದಿಗೆ ಅಷ್ಟು ಬೆರೆಯುವುದಿಲ್ಲ. ಹತ್ತಿರವಾಗಲು ಸಮಯ ತೆಗೆದುಕೊಳ್ಳುತ್ತಾರೆ.
- ಎಕ್ಸ್ : ಈ ಅಕ್ಷರದ ಹೆಸರಿನವರು ಅಪರೂಪದಲ್ಲಿ ಅಪರೂಪರಾಗಿದ್ದು ಎಲ್ಲರನ್ನು ಆಕರ್ಷಸುತ್ತಾರೆ. ಸ್ವಲ್ಪ ದುರಾಸೆ ಹಾಗೂ ಅಶಿಸ್ತುವುಳ್ಳವರಾಗಿರುತ್ತಾರೆ. ಇವರ ಈ ಗುಣವು ಇತರರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಂತೆ ಮಾಡುತ್ತದೆ. ಇವರು ಬದ್ಧತೆ ಹೆಸರಿನಲ್ಲಿ ತಮ್ಮನ್ನು ತಾನು ಕಟ್ಟಿಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಆರಾಮದಾಯಕವಾಗಿರಲು ಇಷ್ಟಪಡುತ್ತಾರೆ.
- ವೈ : ಹೆಸರಿನ ಮೊದಲ ಅಕ್ಷರ ವೈ ಆಗಿದ್ದರೆ ಸ್ವತಂತ್ರರಾಗಿರಲು ಇಷ್ಟಪಡುತ್ತಾರೆ. ಇನ್ನೊಬ್ಬರೊಂದಿಗೆ ಬೆರೆಯಲು ಸ್ವಲ್ಪ ಕಷ್ಟ ಪಡುತ್ತಾರೆ. ಆರಾಮಾದಾಯಕ ಜೀವನಕ್ಕಾಗಿ ಏನನ್ನೂ ಬೇಕಾದರೂ ಮಾಡಲು ಸಿದ್ಧವಿರುತ್ತಾರೆ.
- ಝೆಡ್ : ಝೆಡ್ ಅಕ್ಷರದ ಹೆಸರಿನ ವ್ಯಕ್ತಿಗಳಲ್ಲಿ ದೈಹಿಕ ಶಕ್ತಿ ಹಾಗೂ ಮಾನಸಿಕ ಶಕ್ತಿ ಹೆಚ್ಚಿರುತ್ತದೆ. ತಮ್ಮದೇ ಗುರಿ ಹೊಂದಿದ್ದು ಅದರ ಹಿಂದೆ ಹೋಗುತ್ತಾರೆ. ಹೀಗಾಗಿ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಇತರರಿಗೆ ಸಲಹೆ ನೀಡುವ ಮೂಲಕ ಒಳ್ಳೆಯದನ್ನೇ ಬಯಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ