Hair Care : ಕೂದಲಿನ ಸೌಂದರ್ಯಕ್ಕೆ ಬೀಟ್ರೂಟ್ ಹೇಗೆ ಸಹಕಾರಿ? ನಿತ್ಯ ಹೀಗೆ ಸೇವಿಸಿ ನೋಡಿ
ಬೀಟ್ರೂಟ್ ಹೆಸರು ಕೇಳಿದ ಕೂಡಲೇ ಮೂಗು ಮುರಿಯುವವರೇ ಹೆಚ್ಚು. ಈ ಕಡುಗೆಂಪು ಬಣ್ಣದ ತರಕಾರಿಯ ಆರೋಗ್ಯಕರ ಪ್ರಯೋಜನ ಅಷ್ಟಿಷ್ಟಲ್ಲ. ಈ ಬೀಟ್ರೂಟ್ ತುಂಬಾ ಪೌಷ್ಟಿಕ ತರಕಾರಿಯಾಗಿದ್ದು, ಆರೋಗ್ಯಕ್ಕೆ ಮಾತ್ರವಲ್ಲದೆ, ನಿಮ್ಮ ಕೂದಲಿಗೂ ಬೇಕಾದ ಪೋಷಕಾಂಶಗಳು ಇದರಲ್ಲಿದೆ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಇದು ನೆತ್ತಿ ಮತ್ತು ಕೂದಲಿನ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸೊಂಪಾದ ಕೂದಲನ್ನು ಪಡೆಯಲು ಬೀಟ್ರೂಟ್ ಯಾವಾಗ ಮತ್ತು ಹೇಗೆ ಸೇವಿಸಬೇಕು? ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸೊಂಪಾದ ನೀಳವಾದ ಕೂದಲು ಇರಬೇಕೆನ್ನುವುದು ಎಲ್ಲರ ಆಸೆ. ಆದರೆ ಏನೇ ಮಾಡಿದ್ರು ಕೂದಲು ಉದುರುವುದು ಮಾತ್ರ ನಿಲ್ಲುತ್ತಿಲ್ಲ, ಕೂದಲು ಬೆಳೆಯುತ್ತಿಲ್ಲ ಎನ್ನುವ ಮಾತನ್ನು ಕೇಳುತ್ತಿರುತ್ತೇವೆ. ಹೀಗಾಗಿ ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಹೆಚ್ಚು ಬಳಸುತ್ತಾರೆ. ಆದರೆ ಕಡುಗೆಂಪು ಬಣ್ಣದ ಬೀಟ್ರೂಟ್ (Beetroot) ತರಕಾರಿಯೂ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾದ್ರೆ ತರಕಾರಿಯನ್ನು ದಿನನಿತ್ಯ ಈ ರೀತಿ ಸೇವಿಸುವುದರಿಂದ ಸೊಂಪಾದ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.
ಕೂದಲಿನ ಆರೋಗ್ಯದಲ್ಲಿ ಬೀಟ್ರೂಟ್ ಹೇಗೆ ಸಹಕಾರಿ?
- ವಿಟಮಿನ್ ಸಿ: ವಿಟಮಿನ್ ಸಿ ತನ್ನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಈ ಅಂಶವು ಬೀಟ್ರೂಟ್ ನಲ್ಲಿ ಹೇರಳವಾಗಿದೆ. ಇದು ಕೂದಲು ಕಿರುಚೀಲಗಳನ್ನು ಹಾನಿಗೊಳಿಸುವ ಹಾಗೂ ಕೂದಲು ಉದುರುವಿಕೆಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಕೂದಲಿನ ರಚನೆಯನ್ನು ಕಾಪಾಡಿಕೊಳ್ಳಲು ಬೇಕಾದ ಕಾಲಜನ್ ಉತ್ಪಾದನೆಯಲ್ಲಿ ವಿಟಮಿನ್ ಸಿ ಸಹಕಾರಿಯಾಗಿದೆ.
- ಮೆಗ್ನೀಸಿಯಮ್ ಹಾಗೂ ರಂಜಕ: ಈ ಖನಿಜಗಳು ಕೂದಲಿನ ಬುಡವನ್ನು ಸುಧಾರಿಸಿ ಕೂದಲು ಉದುರುವುದನ್ನು ತಡೆಯುತ್ತದೆ.
- ಪೊಟ್ಯಾಸಿಯಮ್: ಬೀಟ್ರೂಟ್ ನಲ್ಲಿರುವ ಪೊಟ್ಯಾಸಿಯಮ್ ನೆತ್ತಿಯನ್ನು ಪೋಷಿಸಲು, ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.
- ಕಬ್ಬಿಣಾಂಶ: ರಕ್ತ ಪರಿಚಲನೆಗೆ ಕಬ್ಬಿಣಾಂಶ ಅತ್ಯಗತ್ಯವಾಗಿ ಬೇಕು. ಇದು ನೆತ್ತಿಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ತಲುಪಿಸಲು ಸಹಕಾರಿಯಾಗಿದೆ. ಆರೋಗ್ಯಕರ ನೆತ್ತಿಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
- ಫೋಲಿಕ್ ಆಮ್ಲ : ಫೋಲಿಕ್ ಆಮ್ಲವು ಕೂದಲಿನ ಕಿರುಚೀಲಗಳ ಪುನರುತ್ಪಾದನೆಗೆ ಸಹಾಯ ಮಾಡುವುದರೊಂದಿಗೆ ದಪ್ಪ ಹಾಗೂ ನೀಳವಾದ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.
- ಬೀಟೈನ್‌ಗಳು: ಕೂದಲಿನ ಬುಡವನ್ನು ಹೈಡ್ರೇಟ್ ಮಾಡಲು ಹಾಗೂ ರಕ್ಷಿಸುವ ಬೀಟೈನ್‌ಗಳನ್ನು ಸಹಾಯಕವಾಗಿದೆ. ಇದು ಕೂದಲಿಗೆ ನೈಸರ್ಗಿಕ ಹೊಳಪು ನೀಡುವುದಲ್ಲದೆ ಮೃದುತ್ವವನ್ನು ನೀಡುತ್ತದೆ.
ಇದನ್ನೂ ಓದಿ: ಚಪಾತಿ ಹಿಟ್ಟು ನಾದುವಾಗ ಕೈಗೆ ಅಂಟಿಕೊಳ್ಳುತ್ತಿದ್ದರೆ ಈ ಕೆಲಸ ಮೊದ್ಲು ಮಾಡಿ
ಬೀಟ್ರೂಟ್ ಯಾವಾಗ ಹಾಗೂ ಹೇಗೆ ಸೇವಿಸಿದರೆ ಉತ್ತಮ?
- ಬೀಟ್ರೂಟ್ ಜ್ಯೂಸ್: ನೀಳವಾದ ಕೂದಲಿಗೆ ನಿಮ್ಮದಾಗಬೇಕಾದರೆ ಬೀಟ್ರೂಟ್ ಜ್ಯೂಸ್ ಮಾಡಿ ಸೇವಿಸುವುದು ಉತ್ತಮ. ಬೀಟ್ರೂಟ್ ರಸವನ್ನು ಕುಡಿಯುವುದರಿಂದ ಕೂದಲಿನ ಆರೋಗ್ಯ ಸಹಕಾರಿ ಮಾತ್ರವಲ್ಲದೇ, ದೇಹವನ್ನು ಒಳಗಿನಿಂದ ಪೋಷಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಟ್ರೂಟ್ ರಸವನ್ನು ಕುಡಿಯಿರಿ. ಇದು ಪೋಷಕಾಂಶಗಳ ಉತ್ತಮ ಹೀರಿಕೊಂಡು, ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಹಾಗೂ ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ.
- ಬೀಟ್ರೂಟ್ ಸಲಾಡ್: ಬೀಟ್ರೂಟ್ ನಿಂದ ಸಲಾಡ್ ತಯಾರಿಸಿ, ಈ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದನ್ನು ಮಧ್ಯಾಹ್ನ ಅಥವಾ ರಾತ್ರಿ ಊಟದ ಜೊತೆಗೆ ಸೇವಿಸಬಹುದು. ಇದು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತವೆ. ಕೂದಲು ಹಾಗೂ ದೇಹವನ್ನು ಒಳಗಿನಿಂದ ಪೋಷಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




