Personality Test: ಈ ಚಿತ್ರದಲ್ಲಿ ನೀವು ಮೊದಲು ನೋಡುವ ಬಣ್ಣ ನಿಮ್ಮ ಸಾಮರ್ಥ್ಯ ಏನೆಂಬುದನ್ನು ತಿಳಿಸುತ್ತೆ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕ ಕ್ಷಣ ಮಾತ್ರದಲ್ಲಿ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಇಲ್ಲೊಂದು ಅಂತಹದ್ದೇ ವರ್ಣರಂಜಿತ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಫೋಟೋ ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ನೀವು ಮೊದಲು ಯಾವ ಬಣ್ಣವನ್ನು ಗಮನಿಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸಾಮರ್ಥ್ಯ ಏನೆಂಬುದನ್ನು ಪರೀಕ್ಷಿಸಿ.

Personality Test: ಈ ಚಿತ್ರದಲ್ಲಿ ನೀವು ಮೊದಲು ನೋಡುವ ಬಣ್ಣ ನಿಮ್ಮ ಸಾಮರ್ಥ್ಯ ಏನೆಂಬುದನ್ನು ತಿಳಿಸುತ್ತೆ
ವ್ಯಕ್ತಿತ್ವ ಪರೀಕ್ಷೆ
Image Credit source: Jagran Josh

Updated on: Nov 20, 2025 | 3:06 PM

ಪ್ರತಿಯೊಬ್ಬರ ಭಾವನೆಗಳು, ನಡವಳಿಕೆಗಳು ಭಿನ್ನವಾಗಿರುವಂತೆ ಶಕ್ತಿ, ಸಾಮರ್ಥ್ಯಗಳು ಸಹ ಭಿನ್ನವಾಗಿರುತ್ತವೆ. ಈ ಎಲ್ಲಾ ಗುಣ ಲಕ್ಷಣಗಳನ್ನು ವ್ಯಕ್ತಿತ್ವ ಪರೀಕ್ಷೆಯ (Personality Test) ಮೂಲಕ ತಕ್ಕಮಟ್ಟಿಗೆ ತಿಳಿದುಕೊಳ್ಳಬಹುದು. ಈ ವ್ಯಕ್ತಿತ್ವ ಪರೀಕ್ಷೆಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಕೂಡ ಒಂದು, ಮನೋವಿಜ್ಞಾನದ ಆಧಾರಿತವಾಗಿರುವ ಈ ಚಿತ್ರಗಳು ನಾವು ಮೊದಲು ಯಾವ ಅಂಶವನ್ನು ಗಮನಿಸುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಸುತ್ತದೆ. ಇಲ್ಲೊಂದು ಅದೇ ರೀತಿಯ ವರ್ಣರಂಜಿತ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನೀವು ಮೊದಲು ಯಾವ ಬಣ್ಣವನ್ನು ಗಮನಿಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಶಕ್ತಿ, ಸಾಮರ್ಥ್ಯ ಏನೆಂಬುದನ್ನು ಪರೀಕ್ಷಿಸಿ.

ಈ ಚಿತ್ರದಲ್ಲಿ ನೀವು ಮೊದಲು ಗಮನಿಸಿದ ಬಣ್ಣ ಯಾವುದು?

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಗಾಢ ನೀಲಿ, ಹಳದಿ ಮತ್ತು ವೈಡೂರ್ಯದ ಬಣ್ಣವಿದ್ದು, ಈ ಮೂರು ಪ್ರಬಲವಾದ ಬಣ್ಣಗಳಲ್ಲಿ ನೀವು ಮೊದಲು ಗಮನಿಸುವ  ಬಣ್ಣ ನಿಮ್ಮ ವ್ಯಕ್ತಿತ್ವದ ಶಕ್ತಿಯನ್ನು ಬಹಿರಂಗಪಡಿಸುತ್ತದೆ.

ಗಾಢ ನೀಲಿ: ಡೀಪ್ ಬ್ಲೂ ಬಣ್ಣವು ಸ್ಪಷ್ಟತೆ, ಬುದ್ಧಿವಂತಿಕೆ, ಪರಿಪೂರ್ಣತೆ ಮತ್ತು ಸ್ಥಿರತೆಗೆ ಸಂಬಂಧಿಸಿದ ಬಣ್ಣವಾಗಿದೆ. ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಈ ಬಣ್ಣವು ನಿಮ್ಮ ಗಮನವನ್ನು ಸೆಳೆದರೆ, ನೀವು ತುಂಬಾ ಸಂಘಟಿತರು, ಪರಿಪೂರ್ಣತೆಯನ್ನು ಹುಡುಕುವವರು ಮತ್ತು ಯಾವಾಗಲೂ ನಿಮ್ಮ ಗುರಿಗಳನ್ನು ಸಾಧಿಸಲು ಬಯಸುವವರು ಎಂದರ್ಥ. ನೀವು ತುಂಬಾ ಮಹತ್ವಾಕಾಂಕ್ಷೆಯುಳ್ಳವರು ಮತ್ತು ಗುರಿ ಸಾಧಿಸುವ ವ್ಯಕ್ತಿ. ಗುರಿ ಸಾಧಿಸಲು ಎಂತಹದ್ದೇ ಕಷ್ಟವನ್ನು ಸಸಹ ಎದುರಿಸಲು ತಯಾರಿರುವಂತಹ ವ್ಯಕ್ತಿಗಳು ನೀವು. ಗೊಂದಲದ ವಾತಾವರಣದಲ್ಲಿಯೂ ತುಂಬಾನೇ ಶಾಂತವಾಗಿರುವ ನೀವು ಯಾವುದೇ ಹಠತ್‌ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಒಟ್ಟಾರೆಯಾಗಿ ನಿಮ್ಮ ಪ್ರಮುಖ  ಸಾಮರ್ಥ್ಯ ಪರಿಪೂರ್ಣತೆ ಮತ್ತು ಸ್ಪಷ್ಟ ಚಿಂತನೆ.

ಹಳದಿ ಬಣ್ಣ: ಹಳದಿ ಬಣ್ಣವು ಶಕ್ತಿ, ಕುತೂಹಲ,  ಹೊಂದಿಕೊಳ್ಳುವಿಕೆಗೆ ಸಂಬಂಧಿಸಿದ ಬಣ್ಣವಾಗಿದೆ. ಚಿತ್ರದಲ್ಲಿ ನೀವು ಮೊದಲು ಹಳದಿ ಬಣ್ಣವನ್ನು ಗಮನಿಸಿದರೆ, ನೀವು ಹೆಚ್ಚು ಕಲ್ಪನಾಶೀಲರು, ಅಭಿವ್ಯಕ್ತಿಶೀಲರು ಮತ್ತು ಅಪಾರ ಶಕ್ತಿಯನ್ನು ಹೊಂದಿದವರು ಎಂದರ್ಥ. ವರ್ಚಸ್ವಿ ವ್ಯಕ್ತಿತ್ವವನ್ನು ಹೊಂದಿರುವ ನೀವು ಎಲ್ಲರೊಂದಿಗೂ, ಎಲ್ಲಾ ಸಂದರ್ಭಗಳಿಗೂ ಬಹುಬೇಗನೆ ಹೊಂದಿಕೊಳ್ಳುತ್ತೀರಿ. ಈ ಗುಣ ಎಂತಹ ಕಠಿಣ ಪರಿಸ್ಥಿತಿಯನ್ನು ಸಹ ಸುಲಭವಾಗಿ ಎದುರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನಿಮ್ಮ ಪ್ರಮುಖ ಸಾಮರ್ಥ್ಯವೆಂದರೆ ಅದು ಸೃಜನಶೀಲತೆ ಮತ್ತು ಹೊಂದಿಕೊಳ್ಳುವಿಕೆ.

ಇದನ್ನೂ ಓದಿ: ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಕುರ್ಚಿ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ಬಹಿರಂಗಪಡಿಸುತ್ತದೆ

ವೈಡೂರ್ಯದ ಬಣ್ಣ: ಹಸಿರು ಮತ್ತು ನೀಲಿ ಬಣ್ಣದ ಮಿಶ್ರಣವಾಗಿರುವ ವೈಡೂರ್ಯದ ಬಣ್ಣ ಅಂತಃಪ್ರಜ್ಞೆ, ಭಾವನಾತ್ಮಕ ಬುದ್ಧಿವಂತಿಕೆ, ಪೋಷಣೆ ಮತ್ತು ಸಮತೋಲನಕ್ಕೆ ಸಂಬಂಧಿಸಿದ ಬಣ್ಣವಾಗಿದೆ. ಈ ಚಿತ್ರದಲ್ಲಿ ನೀವು ಮೊದಲು ಈ ಬಣ್ಣವನ್ನು ಗಮನಿಸಿದರೆ ನೀವು ಭಾವನಾತ್ಮಕ ವ್ಯಕ್ತಿಗಳೆಂದು ಅರ್ಥ. ನೀವು ಇತರರ ಬಗ್ಗೆ ಕಾಳಜಿಯನ್ನು ಸಹ ವಹಿಸುತ್ತೀರಿ, ನಿಮ್ಮ ಗುರಿಗಳ ಕಡೆಗೂ ಗಮನವನ್ನು ಸಾಧಿಸುತ್ತೀರಿ. ನಿಮ್ಮ ಪ್ರಮುಖ ಸಾಮರ್ಥ್ಯಗಳು ಯಾವುವು ಎಂದರೆ, ಇತರರ ಬಗೆಗಿನ ಕಾಳಜಿ , ಅಂತಃಪ್ರಜ್ಞೆ, ನಾಯಕತ್ವದ ಗುಣ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ