
ಮೂಗಿನ ಆಕಾರ, ಪಾದದ ಆಕಾರ, ಕೂದಲಿನ ಆಕಾರ ಸೇರಿದಂತೆ ದೇಹಕಾರದ ಮೂಲಕ ನಮ್ಮ ವ್ಯಕ್ತಿತ್ವ (Secret Personality) ಹೇಗಿದೆ ಎಂಬುದನ್ನು ತಿಳಿಯಬಹುದಲ್ವಾ. ಅದೇ ರೀತಿ ನಮ್ಮ ಮಾತು, ನಾವು ನಡೆಯುವ ಶೈಲಿ, ನಿಲ್ಲುವ ಭಂಗಿ, ಕೈ ಕಟ್ಟಿ ನಿಲ್ಲುವ ರೀತಿ ಇತ್ಯಾದಿ ದೇಹ ಭಾಷೆಯು ಸಹ ನಾವು ಆತ್ಮವಿಶ್ವಾಸಿಯೇ, ಜಾಗರೂಕ ವ್ಯಕ್ತಿಯೇ ಎಂಬಿತ್ಯಾದಿ ನಮ್ಮ ವ್ಯಕ್ತಿತ್ವ ಮತ್ತು ಆಲೋಚನೆಗಳನ್ನು ಬಹಿರಂಗಪಡಿಸುತ್ತದೆ. ಅದೇ ರೀತಿ ಕೈಯನ್ನು ಬೆನ್ನ ಹಿಂದೆ ಕಟ್ಟಿ ನಿಲ್ಲುವ ಅಭ್ಯಾಸವೂ ವ್ಯಕ್ತಿತ್ವದ ರಹಸ್ಯವನ್ನು ಬಹಿರಂಗಪಡಿಸುತ್ತಂತೆ. ಕೈಯನ್ನು ಹಿಂದಕ್ಕೆ ಕಟ್ಟಿ ನಿಲ್ಲುವುದು ಇದು ಸಾಮಾನ್ಯ ಭಂಗಿಯಂತೆ ಕಾಣಿಸಬಹುದು, ಆದರೆ ಇದು ವಾಸ್ತವವಾಗಿ ನಿಮ್ಮ ವ್ಯಕ್ತಿತ್ವದ ಬಗೆಗಿನ ಅನೇಕ ಪ್ರಮುಖ ವಿಷಯಗಳನ್ನು ಬಹಿರಂಗಪಡಿಸುತ್ತದೆ. ಅದೇನೆಂಬುದನ್ನು ತಿಳಿಯಿರಿ
ಆತ್ಮವಿಶ್ವಾಸ: ಒಬ್ಬ ವ್ಯಕ್ತಿಯು ತನ್ನ ಕೈಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ನಿಂತಾಗ, ಅದು ಆತ ಆತ್ಮವಿಶ್ವಾಸ ಹೊಂದಿದ್ದಾನೆಂದು ಸೂಚಿಸುತ್ತದೆ. ಈ ಭಂಗಿಯು ವ್ಯಕ್ತಿಯು ಯಾವುದೇ ಪರಿಸ್ಥಿತಿಯಿಂದ ವಿಚಲಿತನಾಗಿರುವುದಿಲ್ಲ ಮತ್ತು ಆತನಿಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಚೆನ್ನಾಗಿ ತಿಳಿದಿದೆ ಎಂಬುದನ್ನು ತತಿಳಿಸುತ್ತದೆ. ಅಲ್ಲದೆ ಒತ್ತಡದಲ್ಲಿಯೂ ಸಹ ಬಲವಾದ ವ್ಯಕ್ತಿತ್ವವನ್ನು ಮುನ್ನಡೆಸುವ ಮತ್ತು ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಇದು ಸೂಚಿಸುತ್ತದೆ.
ತಾಳ್ಮೆ ಮತ್ತು ಸಂಯಮ: ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸವು ವ್ಯಕ್ತಿಯ ತಾಳ್ಮೆ ಮತ್ತು ಸಂಯಮದಿಂದ ಇರುತ್ತಾನಂತೆ. ಆತ ಯಾವುದೇ ಪರಿಸ್ಥಿತಿಯನ್ನು ಆತುರವಿಲ್ಲದೆ ಸಂಯಮದಿಂದ ಎದುರಿಸುತ್ತಾನೆ. ಅಲ್ಲದೆ ಕೈಯನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ವ್ಯಕ್ತಿ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರಿತು ನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ.
ಕುತೂಹಲ ಮತ್ತು ಕಲಿಯುವ ಬಯಕೆ: ಇದು ಇಂತಹ ವ್ಯಕ್ತಿಗಳು ಸ್ವಭಾವತಃ ಗಮನಿಸುವವರು ಎಂಬುದನ್ನು ಸೂಚಿಸುತ್ತದೆ. ಮತ್ತು ಅಂತಹ ವ್ಯಕ್ತಿಗಳು ತಮ್ಮ ಸುತ್ತಲಿನ ಎಲ್ಲವನ್ನೂ ವಿವರವಾಗಿ ಅರ್ಥಮಾಡಿಕೊಳ್ಳಲು ಮತ್ತು ಕಲಿಯಲು ಬಯಸುತ್ತಾರೆ, ಹೊಸ ಸನ್ನಿವೇಶ, ಘಟನೆಗಳಿಂದ ಕಲಿಯುವ ಮೂಲಕ ಜ್ಞಾನವನ್ನು ಪಡೆಯಲು ಮತ್ತು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಉತ್ಸುಕರಾಗಿರುತ್ತಾರೆ ಎಂಬುದನ್ನು ಸಹ ಸೂಚಿಸುತ್ತದೆ.
ಇದನ್ನೂ ಓದಿ: ನೀವು ಸೋಮಾರಿಯೇ, ಶ್ರಮಜೀವಿಯೇ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ
ಸ್ವಯಂ ನಿಯಂತ್ರಣ: ಕೈಯನ್ನು ಹಿಂದೆ ಕಟ್ಟಿ ನಿಲ್ಲುವವರು ತಮ್ಮ ಭಾವನೆಗಳನ್ನು ಅಥವಾ ಆತಂಕವನ್ನು ಮರೆಮಾಡಲು ಬಯಸುವವರಾಗಿರುತ್ತಾರೆ. ಹೌದು ಇದು ನೀವು ನಿಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಬಯಸುವುದಿಲ್ಲ ಮತ್ತು ಸ್ವಯಂ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಬಯಸುತ್ತೀರಿ ಎಂದು ಸೂಚಿಸುತ್ತದೆ. ಅಲ್ಲದೆ ಇದು ನಿಮ್ಮ ಸ್ವಯಂ-ಶಿಸ್ತಿನ ಶಕ್ತಿಯನ್ನು ಎತ್ತಿ ತೋರಿಸುತ್ತದೆ.
ಗಂಭೀರ ಮತ್ತು ಚಿಂತನಶೀಲ ನಿರ್ಧಾರ: ನೀವು ಕೈಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ನಿಲ್ಲುವವರಾಗಿದ್ದರೆ ಅದು ನೀವು ನೀವು ಗಂಭೀರ ಸ್ವಭಾವದವರು ಮತ್ತು ಯಾವುದನ್ನೂ ಹಗುರವಾಗಿ ಪರಿಗಣಿಸುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ನೀವು ವಿಷಯಗಳನ್ನು ಆಳವಾಗಿ ಯೋಚಿಸುತ್ತೀರಿ ಮತ್ತು ಪ್ರತಿಯೊಂದು ನಿರ್ಧಾರವನ್ನು ತರ್ಕ ಮತ್ತು ವಿವೇಚನೆಯ ತೆಗೆದುಕೊಳ್ಳುತ್ತೀರಿ. ಸಮತೋಲನವನ್ನು ಕಾಯ್ದುಕೊಳ್ಳುತ್ತೀರಿ ಎಂದರ್ಥ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ