Personality Test : ನಿಮ್ಮ ಕೂದಲಿನ ಉದ್ದವು ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಪ್ರತಿಯೊಬ್ಬರ ವ್ಯಕ್ತಿತ್ವ ಹಾಗೂ ಗುಣ ಸ್ವಭಾವವು ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಮುಖ, ಕೈ ನೋಡಿ ಆ ವ್ಯಕ್ತಿಯು ಹೇಗೆ ಎಂದು ತಿಳಿಯಬಹುದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಒಬ್ಬ ವ್ಯಕ್ತಿಯ ಕೂದಲಿನ ಉದ್ದ ನೋಡಿ ಆ ವ್ಯಕ್ತಿಯ ಗುಣಸ್ವಭಾವವನ್ನು ನಿರ್ಣಯಿಸಬಹುದು. ಹಾಗಾದ್ರೆ ನಿಮ್ಮ ಕೂದಲು ಎಷ್ಟು ಉದ್ದವಿದೆ, ನಿಮ್ಮ ವ್ಯಕ್ತಿತ್ವ ಹೇಗೆ ಎಂದು ನೀವಿಲ್ಲಿ ಕಂಡುಕೊಳ್ಳಿ.

Personality Test : ನಿಮ್ಮ ಕೂದಲಿನ ಉದ್ದವು ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2024 | 4:42 PM

ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿರಲಿ, ಪ್ರತಿಯೊಬ್ಬರ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದೇ ಕೂದಲು. ಆದರೆ ಈಗಿನ ಕಾಲದಲ್ಲಿ ಕೂದಲಿಗೆ ಕತ್ತರಿ ಹಾಕುವವರ ಸಂಖ್ಯೆಯು ಹೆಚ್ಚಾಗಿದೆ. ಉದ್ದ ಕೂದಲಿದ್ದರೆ, ಆರೈಕೆ ಮಾಡುವುದು ಕಷ್ಟ ಎನ್ನುವ ಕಾರಣಕ್ಕೆ ಶಾರ್ಟ್ ಹೇರ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಕೂದಲಿನ ಉದ್ದವು ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತಂತೆ. ನಿಮ್ಮ ಕೂದಲು ಎಷ್ಟು ಉದ್ದವಿದೆ ಎನ್ನುವ ಆಧಾರದ ಮೇಲೆ ನಿಮ್ಮ ಗುಣಸ್ವಭಾವವನ್ನು ಸುಲಭವಾಗಿ ಹೇಳಬಹುದು.

  • ಚಿಕ್ಕ ಕೂದಲನ್ನು ಹೊಂದಿರುವವರು : ಹೆಚ್ಚಿನ ಮಹಿಳೆಯರು ಸಣ್ಣ ಕೂದಲನ್ನು ಹೊಂದಿರುತ್ತಾರೆ. ಇವರು ಖಂಡಿತವಾಗಿಯೂ ಬಹಿರಂಗವಾಗಿ ಮಾತನಾಡುವ ವ್ಯಕ್ತಿಗಳಾಗಿರುತ್ತಾರೆ. ಈ ಜನರು ತಮ್ಮ ಮನೆ ಜೀವನ ಮತ್ತು ಕಚೇರಿ ಜೀವನದ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ತಿಳಿದುಕೊಂಡಿರುತ್ತಾರೆ. ಈ ಮೂಲಕ ತಮ್ಮ ಜೀವನದಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳುತ್ತಾರೆ. ಇವರು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದೇ ಹೆಚ್ಚು. ಅದಲ್ಲದೇ ತಮ್ಮ ಜೀವನದಲ್ಲಿ ಅವ್ಯವಸ್ಥೆಯನ್ನು ಸಹಿಸದ ಕಾರಣ ಎಲ್ಲವೂ ವ್ಯವಸ್ಥಿತವಾಗಿರಬೇಕೆಂದು ಬಯಸುವ ಗುಣ ಇವರಾದ್ದಾಗಿರುತ್ತದೆ.
  • ನೀಳ ಕೂದಲನ್ನು ಹೊಂದಿರುವವರು : ನೀಳವಾದ ಕೂದಲಿನ ಆರೈಕೆಗೆ ಹೆಚ್ಚು ಗಮನ ಕೊಡಬೇಕು, ತಾಳ್ಮೆಯು ಅಷ್ಟೇ ಮುಖ್ಯ. ಈ ವ್ಯಕ್ತಿಗಳು ಜನರು ತಮ್ಮ ಜೀವನದಲ್ಲಿ ಪ್ರತಿಯೊಂದು ಕ್ಷಣವು ಎಚ್ಚರಿಕೆಯಿಂದ ಇರುತ್ತಾರೆ. ಉದ್ದನೆಯ ಕೂದಲಿರುವ ಮಹಿಳೆಯರಿಗೆ ತಮ್ಮ ಸಂಗಾತಿಯ ಮೇಲೆ ವಿಶೇಷವಾದ ಗೌರವಿರುತ್ತದೆ. ಸಂಗಾತಿಯಿಂದ ಹೆಚ್ಚಿದ್ದನ್ನು ನಿರೀಕ್ಷಿಸುವುದಲ್ಲದೇ, ಸಂಬಂಧವನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಬಹಳ ನಿಪುಣರಾಗಿರುತ್ತಾರೆ. ಎಷ್ಟೇ ಕಷ್ಟದ ಕೆಲಸ ಕೊಟ್ಟರೂ ಶ್ರದ್ಧೆಯಿಂದ ಸಲೀಸಾಗಿ ಮಾಡಿ ಮುಗಿಸುವ ವ್ಯಕ್ತಿತ್ವ ಇವರಾದ್ದಾಗಿರುತ್ತದೆ.
  • ಭುಜದವರೆಗೆ ಕೂದಲು ಇರುವವರು : ಭುಜದವರೆಗೆ ಕೂದಲನ್ನು ಹೊಂದಿರುವ ಮಹಿಳೆಯರು ಯಾವುದೇ ಕೇಶ ವಿನ್ಯಾಸವನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು. ಈ ವ್ಯಕ್ತಿಗಳು ಸ್ತ್ರೀವಾದದ ಬಗ್ಗೆ ಹೆಮ್ಮೆ ಇಟ್ಟುಕೊಂಡಿರುತ್ತಾರೆ. ಈ ಜನರು ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಯಾವುದೇ ಸಂಬಂಧವನ್ನು ದೀರ್ಘಕಾಲದವರೆಗೆ ಉಳಿಸುವಲ್ಲಿ ಈ ವ್ಯಕ್ತಿಗಳ ಶ್ರಮವು ನೂರಕ್ಕೆ ನೂರು ಪಟ್ಟು ಇರುತ್ತದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ಈ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ
ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ಸಚಿನ್ ತೆಂಡೂಲ್ಕರ್ ಮುಂದೆ ಅಸಹಾಯಕತೆ ತೋಡಿಕೊಂಡ ವಿನೋದ್ ಕಾಂಬ್ಳಿ
ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
ಸ್ಥಾನ ಉಳಿಸಿಕೊಳ್ಳಲು ಐಶ್ವರ್ಯಾ ಹೋರಾಟ; ಮಂಜುನೇ ಎದುರು ಹಾಕಿಕೊಂಡ್ರು
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಇಡೇರಲಿವೆ
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ