
ಮುಖ, ಕಣ್ಣು, ತುಟಿ, ಮೂಗು ಹೀಗೆ ಮನುಷ್ಯನ ದೇಹದ ಅಂಗಗಳು ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವಾಗಿರುತ್ತದೆ. ಕೆಲವರು ದುಂಡು ಮುಖವನ್ನು ಹೊಂದಿದ್ದರೆ, ಇನ್ನೂ ಕೆಲವರು ಕೋಲು ಮುಖವನ್ನು ಹೊಂದಿರುತ್ತಾರೆ. ಕೆಲವರ ಮೂಗು ದೊಡ್ಡದಾಗಿದ್ದರೆ, ಇನ್ನೂ ಕೆಲವರು ಸಣ್ಣ ಮೂಗನ್ನು ಹೊಂದಿರುತ್ತಾರೆ. ಹೀಗೆ ಈ ದೇಹಾಕಾರಗಳ ಮೂಲಕ ನಾವು ನಮ್ಮೊಳಗೆ ಅಡಗಿರುವ ನಿಗೂಢ ವ್ಯಕ್ತಿತ್ವವನ್ನು (secret personality) ಪರೀಕ್ಷಿಸಿಕೊಳ್ಳಬಹುದು. ನೀವು ಕೂಡಾ ಕಣ್ಣಿನ ಬಣ್ಣ, ಮೂಗಿನ ಆಕಾರ, ತುಟಿಯ ಆಕಾರದ ಮೂಲಕವೆಲ್ಲಾ ನಿಮ್ಮ ಪರ್ಸನಾಲಿಟಿ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದು ನಿಮ್ಮ ಬೆರಳಿನ ಆಕಾರದ (finger shape personality traits) ಮೂಲಕ ನೀವು ಎಂತಹ ವ್ಯಕ್ತಿ ಎಂಬುದನ್ನು ಪರೀಕ್ಷಿಸಿ.
ಒಬ್ಬೊಬ್ಬರ ಬೆರಳಿನ ಆಕಾರ ಒಂದೊಂದು ರೀತಿಯಲ್ಲಿರುತ್ತದೆ. ಕೆಲವರು ನೇರವಾದ ಬೆರಳುಗಳನ್ನು ಹೊಂದಿದ್ದರೆ, ಕೆಲವರು ಬೆರಳು ಮೊನಚಾಗಿರುತ್ತದೆ. ಹೀಗೆ ನಿಮ್ಮ ಬೆರಳಿನ ಆಕಾರ ಹೇಗಿದೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿ.
ನೀವು ನೇರ ಬೆರಳುಗಳನ್ನು ಹೊಂದಿದ್ದರೆ: ನೀವು ನೇರವಾದ ಬೆರಳುಗಳನ್ನು ಹೊಂದಿದ್ದರೆ, ನೀವು ಸತ್ಯವಂತರೆಂದು ಅರ್ಥ. ಪ್ರಾಮಾಣಿಕತೆಯನ್ನು ತುಂಬಾನೇ ಗೌರವಿಸುವ ನೀವು ಸುಳ್ಳು ಹೇಳುವುದನ್ನು ಬಲವಾಗಿ ದ್ವೇಷಿಸುತ್ತೀರಿ. ಅಲ್ಲದೆ ನಿಮಗೆ ನಾಟಕವಾಡುವಂತಹದ್ದು, ಗಾಸಿಪ್ ಮಾಡುವುದು ಕೂಡಾ ಇಷ್ಟವಿಲ್ಲ. ನಿಮ್ಮ ಜೀವನದ ಬಗ್ಗೆ ಬಹಳ ಎಚ್ಚರಿಕೆಯಿಂದಿರುವ ನೀವು, ನಿಮ್ಮ ಜೀವನವನ್ನು ಸಾಧ್ಯವಾದಷ್ಟು ಖಾಸಗಿಯಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತೀರಿ. ಹೀಗಾಗಿ ಇತರರಿಗೆ ನಿಮ್ಮನ್ನು ಅರ್ಥಮಾಡಿಕೊಳ್ಳುವುದೇ ಒಂದು ಸವಾಲಿನ ಕೆಲಸವಾಗಿದೆ. ಆದರೆ ನೀವು ನಿಮಗೆ ತೀರಾ ಹತ್ತಿರವಾದವರಲ್ಲಿ ಮಾತ್ರ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತೀರಿ. ಒಟ್ಟಾರೆಯಾಗಿ ವಿಶ್ವಾಸಾರ್ಹ ವ್ಯಕ್ತಿಯಾದ ನೀವು, ಇತರರಿಂದಲೂ ಇದನ್ನೇ ನಿರೀಕ್ಷೆ ಮಾಡುತ್ತೀರಿ.
ನೀವು ಮೊನಚಾದ ಬೆರಳುಗಳನ್ನು ಹೊಂದಿದ್ದರೆ: ಚೂಪಾದ, ಮೊನಚಾದ ಬೆರಳು ನಿಮ್ಮದಾಗಿದ್ದರೆ, ನೀವು ಹೆಚ್ಚು ಸೃಜನಶೀಲ ಮತ್ತು ಅಂತಃಪ್ರಜ್ಞೆಯುಳ್ಳ ವ್ಯಕ್ತಿಯೆಂದು ಅರ್ಥ. ಹೆಚ್ಚು ಕಲ್ಪನಾಶೀಲರಾದ ಹಾಗೂ ಹಲವು ವಿಚಾರಗಳನ್ನು ಹೊಂದಿರುವ ನೀವು ಹೊಸ ವಿಷಯಗಳನ್ನು ಅನ್ವೇಷಿಸಲು ಬಹಳ ಇಷ್ಟಪಡುತ್ತೀರಿ. ನೀವು ಹೊಸ ಪರಿಕಲ್ಪನೆಗಳನ್ನು ಅನ್ವೇಷಿಸುವಲ್ಲಿ ಮತ್ತು ಕಲಿಯುವಲ್ಲಿ ಹೆಚ್ಚು ಸಂತೋಷವನ್ನು ಹೊಂದಿದ್ದೀರಿ. ಈ ಅಂಶ ನಿಮ್ಮನ್ನು ಒಬ್ಬ ಸದೃಢ ನಾಯಕನನ್ನಾಗಿ ಗುರುತ್ತಿಸುತ್ತದೆ. ಅಲ್ಲದೆ ನಿಮ್ಮ ಕಠಿಣ ಪರಿಶ್ರಮ ಮತ್ತು ನಿಷ್ಠೆಯು ನಿಮ್ಮ ದಾರಿಯಲ್ಲಿ ಎದುರಾಗುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪಕ್ಷಿ, ಮರ; ಈ ಚಿತ್ರದಲ್ಲಿ ನೀವು ಮೊದಲು ಗಮನಿಸುವ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತೆ
ಗಂಟು ಗಂಟಾದ ಬೆರಳುಗಳನ್ನು ಹೊಂದಿದ್ದರೆ: ನಿಮ್ಮ ಬೆರಳಿನ ಆಕಾರ ಗಂಟು ಗಂಟಾಗಿದ್ದರೆ, ನೀವು ಕಠಿಣ ವ್ಯಕ್ತಿತ್ವದವರೆಂದು ಅರ್ಥ. ನೀವು ನಿಮ್ಮ ಜೀವನದಲ್ಲಿ ಎಂತಹದ್ದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಯಾವುದೇ ಹಿಂಜರಿಕೆಯನ್ನು ಹೊಂದಿರುವುದಿಲ್ಲ. ನೀವು ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೀರಿ. ನಿಮ್ಮ ಧೈರ್ಯವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಿಮಗೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ನೀವು ನಿಮ್ಮ ಗುರಿಗಳನ್ನು ಸಾಧಿಸಲು ಏನು ಬೇಕಾದರೂ ಮಾಡಲು ಸಿದ್ಧರಿದ್ದೀರಿ. ಒಟ್ಟಾರೆಯಾಗಿ ನೀವು ತುಂಬಾನೇ ಧೈರ್ಯವಂತರು.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ