AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಹಣೆಯ ಆಕಾರವೂ ತಿಳಿಸುತ್ತದೆ ವ್ಯಕ್ತಿತ್ವದ ರಹಸ್ಯ

ಒಬ್ಬ ವ್ಯಕ್ತಿಯ ಮಾತು, ನಡವಳಿಕೆ, ವರ್ತನೆಯ ಆಧಾರದ ಮೇಲೆ ನಾವು ಆತನ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಅಳೆಯುತ್ತೇವೆ. ಇದಲ್ಲದೆ ವ್ಯಕ್ತಿತ್ವ ಪರೀಕ್ಷೆಯ ಮೂಲಕವೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ, ಆತನ ಮನಸ್ಸಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಕ್ಷಣಮಾತ್ರದಲ್ಲಿ ತಿಳಿಯಬಹುದು. ಅದೇ ರೀತಿ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಹಣೆಯ ಆಕಾರದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

Personality Test: ನಿಮ್ಮ ಹಣೆಯ ಆಕಾರವೂ ತಿಳಿಸುತ್ತದೆ ವ್ಯಕ್ತಿತ್ವದ ರಹಸ್ಯ
ವ್ಯಕ್ತಿತ್ವ ಪರೀಕ್ಷೆImage Credit source: Jagran Josh
ಮಾಲಾಶ್ರೀ ಅಂಚನ್​
|

Updated on: Dec 07, 2025 | 3:11 PM

Share

ಒಬ್ಬ ವ್ಯಕ್ತಿಯ ನಡವಳಿಕೆ, ವರ್ತನೆಯ ಆಧಾರದ ಮೇಕೆ ಆತನ ವ್ಯಕ್ತಿತ್ವವನ್ನು ಅಳೆಯುವಂತೆ ವ್ಯಕ್ತಿತ್ವ ಪರೀಕ್ಷೆಯ (Personality Test) ಮೂಲಕ ಸ್ವತಃ ನಾವೇ ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು. ಹೌದು ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌, ಕಣ್ಣು, ಕಿವಿ, ಮೂಗು, ಪಾದದ ಆಕಾರ ಸೇರಿದಂತೆ ಇತ್ಯಾದಿ ಅಂಶಗಳ ಮೂಲಕ ನಾವು ನಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದು. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹಣೆಯ ಆಕಾರದ ಹೇಗಿದೆ ಎಂಬುದರ ಆಧಾರದ ಮೇಲೆ ನಿಮ್ಮ ನಿಗೂಢ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಹಣೆಯ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ:

ದೊಡ್ಡ ಹಣೆ: ನಿಮ್ಮ ಹಣೆ ದೊಡ್ಡದಾಗಿದ್ದರೆ, ನೀವು ಏಕಕಾಲದಲ್ಲಿ ಬಹುಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುವವರೆಂದು ಅರ್ಥ. ನೀವು ಮಹತ್ವಾಕಾಂಕ್ಷೆ ಮತ್ತು ಬುದ್ಧಿವಂತಿಕೆಯ ಬಲದಿಂದ ಯಶಸ್ಸನ್ನು ಸಾಧಿಸುತ್ತೀರಿ. ಹೊಸ ಅವಕಾಶಗಳಿಗೆ ಯಾವಾಗಲೂ ಕಾಯುವ, ಎಲ್ಲರೊಂದಿಗೂ ಮುಕ್ತವಾಗಿ ಸಂವಹನ ನಡೆಸುವ ನೀವು ಬಹುಮುಖ ಪ್ರತಿಭೆಯೂ ಹೌದು. ಆದರೆ ಕೆಲವೊಮ್ಮೆ ನೀವು ಅತಿಯಾಗಿ ಕೋಪವನ್ನು ಮಾಡುತ್ತೀರಿ.

ಸಣ್ಣ ಹಣೆ: ಸಣ್ಣ ಹಣೆಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಒಂಟಿತನವನ್ನು ಆನಂದಿಸುತ್ತಾರೆ.  ಭಾವನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಇವರು ಯಾವಾಗಲೂ ಹೃದಯದ ಮಾತನ್ನು ಕೇಳುತ್ತಾರೆ. ಇತರರಿಂದ ಹೆಚ್ಚು ನೋವಿಗೊಳಗಾಗುವ ಇವರು ಸಾಧ್ಯವಾದಷ್ಟು ನಕಾರಾತ್ಮಕ ಜನರಿಂದ ದೂರವಿರಲು ಬಯಸುತ್ತಾರೆ. ಜೊತೆಗೆ ಇವರು ತಾವು ಪ್ರೀತಿಸುವ ವ್ಯಕ್ತಿಯನ್ನು ಸುಲಭವಾಗಿ ಬಿಟ್ಟು ಕೊಡುವುದಿಲ್ಲ.

ಬಾಗಿದ ಹಣೆ: ದುಂಡಗಿನ, ಬಾಗಿದ ಹಣೆಯನ್ನು ಹೊಂದಿರುವ ಜನರು ಸರಳ, ಸಭ್ಯ ಮತ್ತು ಸ್ನೇಹಪರ ವ್ಯಕ್ತಿಗಳು. ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುವ ಇವರು ಎಲ್ಲರೊಂದಿಗೂ ಸುಲಭವಾಗಿ ಬೆರೆಯುತ್ತಾರೆ. ಆಶಾವಾದಿಗಳಾದ ಇವರು ತಮ್ಮ ಕನಸು ಮತ್ತು ಗುರಿಗಳನ್ನು ಸಾಧಿಸುವಲ್ಲಿಯೂ ನಿಸ್ಸಿಮರು. ಅಲ್ಲದೆ ಕಠಿಣ ಸಂದರ್ಭಗಳು ಮತ್ತು ಜಟಿಲ ಸಾಮಾಜಿಕ ಸಂದರ್ಭಗಳನ್ನು ನಿಭಾಯಿಸುವಾಗ ತುಂಬಾ ಶಾಂತವಾಗಿರುತ್ತಾರೆ. ತಾಳ್ಮೆ ಮಾತ್ರವಲ್ಲದೆ ಚುರುಕು ಬುದ್ಧಿಯೂ ಇವರಲ್ಲಿದೆ.

ಇದನ್ನೂ ಓದಿ: ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೇಗಿದೆ ಎಂಬುದನ್ನು ತಿಳಿಸುತ್ತೆ ಚಿತ್ರ

ಎಂ ಆಕಾರದ ಹಣೆ: ಎಂ ಆಕಾರದ ಹಣೆಯನ್ನು ಹೊಂದಿರುವ ಜನ ಕಲಾ ಪ್ರೇಮಿಗಳು ಮತ್ತು ತಮ್ಮ ಕೆಲಸದ ವಿಷಯದಲ್ಲಿ ಬಹಳ ಸೂಕ್ಷ್ಮರಾಗಿರುತ್ತಾರೆ. ಇವರು ದೃಢನಿಶ್ಚಯದವರಾಗಿದ್ದು, ಮುಂದಾಲೋಚನೆಯಿಂದಲೇ ಎಲ್ಲಾ ಕಾರ್ಯಗಳನ್ನು ಮಾಡುತ್ತಾರೆ. ಇವರು ಯಾವಾಗಲೂ ಶಾಂತರಾಗಿಯೇ ಇರುತ್ತಾರೆ. ಕೆಲವೊಮ್ಮೆ ಕೋಪಗೊಂಡರೂ ಬಹುಬೇಗನೆ ಕ್ಷಮೆ ಕೇಳುತ್ತಾರೆ. ಮುಖ್ಯವಾಗಿ ಇವರು ತಮ್ಮ ಪ್ರೀತಿಪಾತ್ರರನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?