AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಚಾಣಕ್ಯರ ಪ್ರಕಾರ ಪುರುಷರ ಈ ಗುಣಗಳಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ

ಮಹಿಳೆಯರ ಸೌಂದರ್ಯ, ನಡವಳಿಕೆ, ತಾಳ್ಮೆ, ಮೃದು ಮಾತುಗಳು ಪುರುಷರಿಗೆ ಇಷ್ಟವಾಗುವಂತೆ, ಪುರುಷರ ಈ ಒಂದಷ್ಟು ಗುಣಗಳು ಮಹಿಳೆಯರನ್ನು ಆಕರ್ಷಿಸುತ್ತದಂತೆ. ಮಹಿಳೆಯರು ಹೆಚ್ಚಾಗಿ ಈ ಗುಣಗಳನ್ನು ಹೊಂದಿರುವವರನ್ನೇ ಇಷ್ಟಪಡುತ್ತಾರೆಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ದರೆ ಒಂದು ಹೆಣ್ಣಿಗೆ ಪುರುಷನ ಯಾವ ಗುಣಗಳು ಇಷ್ಟವಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಚಾಣಕ್ಯರ ಪ್ರಕಾರ ಪುರುಷರ ಈ ಗುಣಗಳಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Dec 07, 2025 | 7:20 PM

Share

ಮಹಿಳೆಯರು (women) ಆಸ್ತಿ, ಅಂತಸ್ತನ್ನು ನೋಡಿ ಪ್ರೀತಿ ಮಾಡುತ್ತಾರೆ, ಶ್ರೀಮಂತಿಕೆ ಹೊಂದಿರುವ ಗಂಡನ್ನು ಮಾತ್ರ ಇಷ್ಟಪಡುತ್ತಾರೆ ಅಂತೆಲ್ಲಾ ಸುಮಾರಷ್ಟು ಜನ ಹೇಳುತ್ತಿರುತ್ತಾರೆ. ಆದ್ರೆ ಏನ್‌ ಗೊತ್ತಾ ಹೆಣ್ಮಕ್ಳು ಆಕರ್ಷಿತರಾರೋದು, ಪುರುಷರ ಆಸ್ತಿ, ಅಂತಸ್ತು, ಐಷಾರಾಮಿ ಜೀವನಕ್ಕಲ್ಲ ಬದಲಾಗಿ ಈ ಕೆಲವೊಂದು ಗುಣಗಳಿಗಂತೆ, ಈ ಗುಣಗಳಿರುವ ಗಂಡು ನನ್ನ ಜೀವನ ಸಂಗಾತಿಯಾಗಿ ಬರಬೇಕೆಂದು ಪ್ರತಿಯೊಬ್ಬ ಹೆಣ್ಣು ಬಯಸುತ್ತಾಳೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಚಾಣಕ್ಯರು ಹೇಳಿರುವಂತೆ ಪುರುಷರ ಯಾವ ಗುಣಗಳು ಮಹಿಳೆಯರಿಗೆ ತುಂಬಾನೇ ಇಷ್ಟವಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ಪುರುಷರ ಯಾವ ಗುಣಗಳು ಮಹಿಳೆಯರಿಗೆ ಇಷ್ಟವಾಗುತ್ತದೆ?

ಶಾಂತ ಸ್ವಭಾವ: ಮಹಿಳೆಯರು ಶಾಂತ ಮತ್ತು ಸಂಯಮವನ್ನು ಹೊಂದಿರುವ  ವ್ಯಕ್ತಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಕ್ಲಿಷ್ಟಕರ ಸಂದರ್ಭದಲ್ಲೂ ಕೋಪಗೊಳ್ಳದೆ ಶಾಂತ ರೀತಿಯಲ್ಲಿರುವ ವ್ಯಕ್ತಿ ತನ್ನ ಜೀವನ ಸಂಗಾತಿಯಾಗಿ ಬರಬೇಕೆಂದು ಪ್ರತಿಯೊಬ್ಬ ಹೆಣ್ಣು ಬಯಸುತ್ತಾಳೆ.

ಪ್ರಾಮಾಣಿಕತೆ: ಆಚಾರ್ಯ ಚಾಣಕ್ಯರು ಹೇಳುವಂತೆ, ಮಹಿಳೆಯರು ಪ್ರಾಮಾಣಿಕ ವ್ಯಕ್ತಿಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ತನ್ನ ಜೀವನ ಸಂಗಾತಿ ಪ್ರಾಮಾಣಿಕವಾಗಿರಬೇಕೆಂದು ಬಯಸುತ್ತಾರೆ.  ಏಕೆಂದರೆ ಅಂತಹ ಪುರುಷರು ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.

ಶ್ರೀಮಂತ ವ್ಯಕ್ತಿತ್ವ:  ಮಹಿಳೆಯರು ಸೌಂದರ್ಯಕ್ಕಿಂತ ವ್ಯಕ್ತಿತ್ವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಸಂಗಾತಿಯನ್ನು ಆಯ್ಕೆಮಾಡುವಾಗ ಮಹಿಳೆಯರು ಹುಡುಗನ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಮೊದಲು ನೋಡುತ್ತಾರೆ.

ಇದನ್ನೂ ಓದಿ: ಯುವಕರೇ… ನೀವು ಇಂತಹ ಹುಡುಗಿಯರನ್ನು ಮದುವೆಯಾದ್ರೆ ಅದೃಷ್ಟ ಎನ್ನುತ್ತಾರೆ ಚಾಣಕ್ಯ

ಉತ್ತಮ ಕೇಳುಗ: ಪ್ರತಿಯೊಬ್ಬ ಮಹಿಳೆಯೂ ತನ್ನ ಮಾತನ್ನು ಆಲಿಸುವ ಜೀವನ ಸಂಗಾತಿಯನ್ನು ಬಯಸುತ್ತಾಳೆ. ಇಂತಹ ವ್ಯಕ್ತಿಗಳು ಆಕೆಯ ಸಣ್ಣ ಮಾತುಗಳನ್ನು ಸಹ ಗಮನವಿಟ್ಟು ಕೇಳುತ್ತಾನೆ. ಆಕೆಯ ಭಾವನೆಗಳಿಗೆ ಸ್ಪಂದಿಸುತ್ತಾನೆ, ಸಾಂತ್ವನವನ್ನು ನೀಡುತ್ತಾನೆ. ಇದೇ ಕಾರಣಕ್ಕೆ ಇಂತಹ ಪುರುಷರು ಮಹಿಳೆಯರಿಗೆ ಇಷ್ಟವಾಗೋದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್