
ಒಂದಾ… ಎರಡಾ… ವ್ಯಕ್ತಿತ್ವ ಪರೀಕ್ಷೆಯ (Personality Test) ಹಲವಾರು ವಿಧಗಳಿವೆ. ಪರ್ಸನಾಲಿಟಿ ಟೆಸ್ಟ್‌ನ ಈ ವಿಧಾನಗಳ ಮೂಲಕ ಸ್ವತಃ ನಾವೇ ನಮ್ಮ ಸಾಮರ್ಥ್ಯ, ದೌರ್ಬಲ್ಯ, ಪ್ರೀತಿ ಜೀವನ, ನಾವು ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತೇವೆ, ನಾವು ಅಂತರ್ಮುಖಿಯೇ ಅಥವಾ ಬಹಿರ್ಮುಖಿಯೇ ಎಂಬುದನ್ನೆಲ್ಲಾ ತಿಳಿಯಬಹುದಾಗಿದೆ. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಅದೇ ರೀತಿ ಇದೀಗ ಇಲ್ಲೊಂದು ವ್ಯಕ್ತಿತ್ವ ಪರೀಕ್ಷೆಯ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಅತಿ ಸುಂದರವಾಗಿ ಕಾಣಿಸುವ ಯುವತಿಯ ಮುಖಾಂತರ ನಿಮ್ಮ ಭಾವನೆ, ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.
ಈ ನಿರ್ದಿಷ್ಟ ವ್ಯಕ್ತಿತ್ವ ಪರೀಕ್ಷೆಯನ್ನು ಮರೀನಾ ವಿನ್‌ಬರ್ಗ್ (neuraleaner) ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಐವರು ಯುವತಿಯರಿದ್ದು, ಅವರಲ್ಲಿ ನಿಮಗೆ ಯಾರು ಸುಂದರವಾಗಿ ಕಾಣುತ್ತಾರೋ ಅವರ ಮುಖಾಂತರ ನಿಮ್ಮ ಭಾವನೆ ಎಂತಹದ್ದು ಎಂಬುದನ್ನು ಪರೀಕ್ಷಿಸಿ.
ಒಂದನೇ ಹುಡುಗಿ: ಈ ಚಿತ್ರದಲ್ಲಿ ಮೊದಲ ಹುಡುಗಿಯನ್ನು ನೀವು ಆಯ್ಕೆ ಮಾಡಿಕೊಂಡರೆ ನೀವು ಸ್ವತಂತ್ರ ಚಿಂತಕರು ಎಂದರ್ಥ. ಸ್ವತಂತ್ರವಾಗಿರಲು ಬಯಸುವ ನೀವು ನಿಮ್ಮ ಸ್ವಂತ ಜೀವನದ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಲು ಬಯಸುವ ವ್ಯಕ್ತಿ. ಜೊತೆಗೆ ನೀವು ನಿಯಂತ್ರಿಸಲ್ಪಡಲು ಬಯಸುವುದಿಲ್ಲ.
ಎರಡನೇ ಹುಡುಗಿ: ನಿಮಗೆ ಈ ಚಿತ್ರದಲ್ಲಿ ಎರಡನೇ ಹುಡುಗಿ ತುಂಬಾ ಸುಂದರವಾಗಿ ಕಾಣಿಸಿದರೆ ನೀವು ಸಾಮರಸ್ಯವನ್ನು ಹುಡುಕುವ ವ್ಯಕ್ತಿಯೆಂದು ಅರ್ಥ. ನಾಟಕೀಯತೆಯನ್ನು ತಪ್ಪಿಸುವ ನೀವು ಶಾಂತಿ, ಸಮತೋಲನ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಗೌರವಿಸುತ್ತೀರಿ. ಅಲ್ಲದೆ ನೀವು ನಿಮ್ಮ ಸುತ್ತಮುತ್ತ ಹಾಗೂ ಸಂಬಂಧದಲ್ಲಿ ಶಾಂತತೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವವರಾಗಿರುತ್ತೀರಿ. ಶಾಂತಿಗಾಗಿ, ಸಂಘರ್ಷಗಳನ್ನು ತಪ್ಪಿಸಲು ನೀವು ನಿಮ್ಮ ನಿಜವಾದ ಭಾವನೆಗಳನ್ನು ಸಹ ಮರೆ ಮಾಡುತ್ತೀರಿ.
ಮೂರನೇ ಹುಡುಗಿ: ಈ ಚಿತ್ರದಲ್ಲಿ ನಿಮಗೆ ಮೂರನೇ ಹುಡುಗಿ ಸುಂದರವಾಗಿ ಕಂಡರೆ, ನೀವು ಅತ್ಯಂತ ಸೃಜನಶೀಲ ವ್ಯಕ್ತಿಯೆಂದು ಅರ್ಥ. ನಿಮಗೆ ಸುಂದರವೆನಿಸುವ ವಿಷಯದಲ್ಲಿ ನೀವು ಅತಿಯಾಗಿ ಕನಸನ್ನು ಕಾಣುತ್ತೀರಿ ಮತ್ತು ಅದರಲ್ಲಿ ವರ್ಣರಂಜಿತ ಅನುಭವಗಳನ್ನು ಪಡೆಯಲು ಬಯಸುವ ವ್ಯಕ್ತಿಯಾಗಿರುತ್ತೀರಿ.
ಇದನ್ನೂ ಓದಿ: ನಿಮ್ಮ ಉಗುರಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
ನಾಲ್ಕನೆ ಹುಡುಗಿ: ಈ ಚಿತ್ರದಲ್ಲಿ ನೀವು ನಾಲ್ಕನೇ ಹುಡುಗಿಯನ್ನು ಸುಂದರಿಯೆಂದು ಆಯ್ಕೆ ಮಾಡಿದ್ದೀರಿ ಎಂದಾದರೆ ನೀವು ಭಾವನಾತ್ಮಕ ವ್ಯಕ್ತಿಯಾಗಿರುತ್ತೀರಿ. ನೀವು ಯಾವಾಗಲೂ ಭಾವನಾತ್ಮಕ ಸಂಪರ್ಕ, ಬೆಂಬಲಕ್ಕಾಗಿ ಹಂಬಲಿಸುತ್ತೀರಿ. ಆದರೆ ನೀವು ನಿಮ್ಮ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ, ಬದಲಿಗೆ ಅದನ್ನು ನಿಮ್ಮಲ್ಲೇ ಹಂಚಿಕೊಂಡು ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೀರುತ್ತೀರಿ.
ಐದನೇ ಹುಡುಗಿ: ಈ ಚಿತ್ರದಲ್ಲಿ ನೀವು ಐದನೇ ಹುಡುಗಿಯನ್ನು ಆಯ್ಕೆ ಮಾಡಿದರೆ, ನೀವು ತುಂಬಾ ಶಾಂತ ಸ್ವಭಾವದವರೆಂದು ಅರ್ಥ. ನೀವು ಶಾಂತತೆ, ಸರಳತೆಗಾಗಿ ಯಾವಾಗಲೂ ಹಾತೊರೆಯುತ್ತೀರಿ. ಒಟ್ಟಾರೆಯಾಗಿ ಜೀವನದ ಜಂಜಾಟದಿಂದಾಗಿ ಮನಸ್ಸಿನಗೆ ಶಾಂತಿ ಬೇಕೆಂದು ಶಾಂತಿಯನ್ನು ಬಯಸುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Thu, 24 July 25