Personality Test : ನೀವು ಮೊಬೈಲ್ ಬಳಸುವ ರೀತಿ ನಿಮ್ಮ ವ್ಯಕ್ತಿತ್ವ ರಿವೀಲ್ ಮಾಡುತ್ತೆ
ನಾವು ನೀವುಗಳು ಸ್ಮಾರ್ಟ್ ಯುಗದಲ್ಲಿದ್ದೇವೆ. ಹೀಗಾಗಿ ಈ ಸ್ಮಾರ್ಟ್ ಫೋನ್ ಇಲ್ಲದೇ ಜೀವನವೇ ಇಲ್ಲ ಎನ್ನುವಂತಾಗಿದೆ. ಈ ಆಧುನಿಕ ಕಾಲದ ಎಲ್ಲರ ಸಂಗಾತಿ ಮೊಬೈಲ್ ಸಹ ವ್ಯಕ್ತಿತ್ವವನ್ನು ಹೇಳುತ್ತದೆಯಂತೆ. ಮೊಬೈಲ್ ಅನ್ನು ಹೇಗೆ ಹಿಡಿದುಕೊಳ್ಳುತ್ತೇವೆ, ಯಾವ ಭಂಗಿಯಲ್ಲಿ ಇದನ್ನು ಬಳಸುತ್ತೇವೆ ಎನ್ನುವುದರ ಆಧಾರದ ಮೇಲೆ ನೀವು ಏನು, ಎಂತಹವರು ಎನ್ನುವುದನ್ನು ಸುಲಭವಾಗಿ ಅಳೆಯಬಹುದು.
ಒಬ್ಬರ ಗುಣಸ್ವಭಾವವನ್ನು ತಿಳಿಯಬೇಕೆಂದರೆ ಅವರ ಜೊತೆಗೆ ಸ್ವಲ್ಪ ಸಮಯವಾದರೂ ಕಳೆಯಬೇಕು. ನೋಡಿದ ಕೂಡಲೇ ಅವರ ವ್ಯಕ್ತಿತ್ವ ಹೇಗೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದೀಗ ಹುಟ್ಟಿನದಿನ, ಕಣ್ಣಿನ ನೋಟಗಳು, ಕೈ ಸನ್ನೆಗಳು, ನಗು ಹೀಗೆ ಹತ್ತು ಹಲವು ಸಂಗತಿಗಳು ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ಆದರೆ ಕೈಯಲ್ಲಿ ಮೊಬೈಲ್ ಫೋನ್ ಹಿಡಿಯುವ ರೀತಿಯು ಕೂಡ ನಿಮ್ಮ ಗುಣ ಸ್ವಭಾವವನ್ನು ಹೇಳುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.
- ಎರಡೂ ಕೈಗಳಿಂದ ಫೋನ್ ಬಳಸುವ ವ್ಯಕ್ತಿಗಳು : ಈ ರೀತಿಯಾಗಿ ಮೊಬೈಲ್ ಬಳಕೆ ಮಾಡುವವರು ದಕ್ಷರು ಹಾಗೂ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ಉತ್ತಮರಾಗಿರುತ್ತಾರೆ. ಈ ವ್ಯಕ್ತಿಗಳು ಹೊಸ ಪರಿಸರಕ್ಕೆ ಬೇಗನೇ ಹೊಂದಿಕೊಳ್ಳುವ ಸ್ವಭಾವದವರಾಗಿರುತ್ತಾರೆ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಯು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ದೃಢವಾದ ವ್ಯಕ್ತಿತ್ವದಿಂದಾಗಿ ಕೆಲವು ವ್ಯಕ್ತಿಗಳ ಜೊತೆಗೆ ಹತ್ತಿರವಾಗಲು ಸಾಧ್ಯವಾಗುವುದಿಲ್ಲ.
- ಒಂದು ಕೈಯಲ್ಲಿ ಫೋನ್ ಹಿಡಿದು ಹೆಬ್ಬೆಟ್ಟಿನಿಂದ ಸ್ಕ್ರೋಲ್ ಮಾಡುವ ವ್ಯಕ್ತಿಗಳು: ಫೋನನ್ನು ಈ ರೀತಿಯಾಗಿ ಬಳಸುತ್ತಿದ್ದರೆ ಆ ವ್ಯಕ್ತಿಗಳಿಗೆ ಆತ್ಮವಿಶ್ವಾಸದ ಮಟ್ಟವು ಹೆಚ್ಚಾಗಿರುತ್ತದೆ. ಹೀಗಾಗಿ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಭಯ ಪಡುವುದಿಲ್ಲ. ಈ ವ್ಯಕ್ತಿಗಳು ಅತೀ ಬುದ್ಧಿವಂತರಾಗಿದ್ದು, ಯಶಸ್ವಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಯಾವುದೇ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ.
- ಒಂದು ಕೈಯಲ್ಲಿ ಫೋನ್ ಮತ್ತೊಂದು ಕೈ ತೋರು ಬೆರಳಿನಲ್ಲಿ ಸ್ಕ್ರೋಲ್ ಮಾಡುವ ವ್ಯಕ್ತಿಗಳು : ಮೊಬೈಲನ್ನು ಈ ರೀತಿಯ ಭಂಗಿಯಲ್ಲಿ ಹಿಡಿದು ಬಳಸುತ್ತಿದ್ದರೆ ಈ ವ್ಯಕ್ತಿಗಳು ಜೀವನದಲ್ಲಿ ಸೃಜನಶೀಲ ವಿಚಾರಗಳನ್ನು ಹೊಂದಿರುತ್ತಾರೆ. ಏಕಾಂತವನ್ನು ಇಷ್ಟ ಪಡುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಪ್ರೀತಿಯ ಜೀವನದಲ್ಲಿ ನಾಚಿಕೆ ಸ್ವಭಾವವನ್ನು ಹೊಂದಿದ್ದು, ಹೀಗಾಗಿ ಹೊಸ ವ್ಯಕ್ತಿಗಳ ಜೊತೆಗೆ ಸಂಬಂಧವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ.
- ಒಂದು ಕೈಯಲ್ಲಿ ಫೋನ್ ಹಿಡಿದು ಇನ್ನೊಂದು ಕೈಯ ಹೆಬ್ಬೆರಳಿನಲ್ಲಿ ಸ್ಕ್ರೋಲ್ ಮಾಡುವ ವ್ಯಕ್ತಿಗಳು : ಈ ರೀತಿ ಫೋನ್ ಬಳಸುವ ವ್ಯಕ್ತಿಗಳು ಜ್ಞಾನಿ, ಸಮಂಜಸ ಮತ್ತು ಬುದ್ಧಿವಂತ ವ್ಯಕ್ತಿ ಎಂದರ್ಥ. ಈ ವ್ಯಕ್ತಿಗಳು ಎಲ್ಲಾ ಪರಿಸ್ಥಿತಿಯನ್ನು ವಿಶ್ಲೇಷಿಸಿ ಮತ್ತು ನಂತರ ಮುಂದಿನ ಹೆಜ್ಜೆಯನ್ನು ಹಿಡುತ್ತಾರೆ. ಯೋಚಿಸಿ ಹೆಜ್ಜೆಯಿಡುವ ಕಾರಣ ಈ ಜನರು ಮೋಸ ಹೋಗುವ ಸಂಭವವು ಕಡಿಮೆ ಎನ್ನಬಹುದು. ಈ ವ್ಯಕ್ತಿಗಳ ಜೀವನದಲ್ಲಿ ಪ್ರೀತಿಯೇ ಪ್ರಮುಖ ಕೊರತೆಯಾಗುತ್ತದೆ. ಸಂಗಾತಿಯೊಂದಿಗೆ ವಾದಕ್ಕೆ ಹೆಚ್ಚು ಒಲವು ತೋರುವ ಕಾರಣ ಸಂಬಂಧವು ಬಹುಬೇಗನೇ ಹಾಳಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ