Personality Test : ನಿಮ್ಮ ಅಂಗೈಯಲ್ಲಿನ ಈ ರೇಖೆಯ ಆಕಾರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಆದರೆ ಒಬ್ಬ ವ್ಯಕ್ತಿಯನ್ನು ಜೊತೆಗೆ ಬೆರೆತಾಗ ಆತನ ನಡವಳಿಕೆ, ವರ್ತನೆ, ಸ್ವಭಾವದಿಂದ ವ್ಯಕ್ತಿ ಹೇಗೆಂದು ನಿರ್ಣಯಿಸುತ್ತೇವೆ. ಆದರೆ ದೇಹದ ಪ್ರತಿಯೊಂದು ಅಂಗಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಎಲ್ಲರಿಗೂ ತಿಳಿದಿರುವಂತೆ ವ್ಯಕ್ತಿಯ ಕಣ್ಣು, ಕಿವಿ, ಮೂಗು, ಹುಬ್ಬು, ನಾಲಗೆ, ಬೆರಳು, ಹಣೆಯ ಆಕಾರದ ಮೇಲೆ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಆದರೆ ವ್ಯಕ್ತಿಯ ಅಂಗೈಯಲ್ಲಿರುವ ಈ ರೇಖೆಯೂ ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತವೆ. ನಿಮ್ಮ ಅಂಗೈಯಲ್ಲಿನ ಈ ರೇಖೆ ಎಷ್ಟು ಉದ್ದವಿದೆ ಎನ್ನುವ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಅರಿತುಕೊಳ್ಳಬಹುದಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

Personality Test : ನಿಮ್ಮ ಅಂಗೈಯಲ್ಲಿನ ಈ ರೇಖೆಯ ಆಕಾರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Feb 25, 2025 | 4:50 PM

ನಾವು ನಮ್ಮ ದೈನಂದಿನ ಜೀವನದಲ್ಲಿ ಅನೇಕ ಜನರನ್ನು ಭೇಟಿಯಾಗುತ್ತೇವೆ. ಎಲ್ಲರೂ ಕೂಡ ತಮ್ಮದೇ ಆದ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ಹೊಂದಿರುತ್ತಾರೆ. ಆದರೆ ವ್ಯಕ್ತಿಯೂ ಮಾತನಾಡುವ ರೀತಿ ಉಡುಗೆ ತೊಡುಗೆ, ತಿನ್ನುವರೀತಿ, ಕುಳಿತುಕೊಳ್ಳುವ ಹಾಗೂ ನಡೆಯುವ ಭಂಗಿಯಿಂದಲೂ ವ್ಯಕ್ತಿಯ ಗುಣಸ್ವಭಾವ ತಿಳಿಯಬಹುದು. ಇನ್ನು ಪ್ರತಿಯೊಬ್ಬ ವ್ಯಕ್ತಿಯ ದೇಹದ ಭಾಗಗಳು ಅವನ ವ್ಯಕ್ತಿತ್ವದ ಬಗೆಗಿನ ರಹಸ್ಯಮಯ ವಿಷಯಗಳನ್ನು ಬಹಿರಂಗ ಪಡಿಸುತ್ತದೆ. ಹೀಗಾಗಿ ಅಂಗೈಯ ಈ ರೇಖೆಯ ಆಧಾರದ ಮೇಲೆ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದು.

  • ಅಂಗೈ ರೇಖೆಯೂ ಮಧ್ಯದ ಬೆರಳಿನ ಕಡೆಗೆ ನೇರವಾಗಿದ್ದರೆ : ನಿಮ್ಮ ಅಂಗೈ ರೇಖೆಯು ಮಧ್ಯದ ಬೆರಳಿನ ಕಡೆಗೆ ನೇರವಾಗಿರುವಂತೆ ಇದ್ದರೆ, ಈ ವ್ಯಕ್ತಿಗಳು ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ. ಜೀವನದಲ್ಲಿ ಎತ್ತರಕ್ಕೆ ಬೆಳೆಯುವ ಬಯಕೆಯನ್ನು ಹೊಂದಿರುತ್ತಾರೆ. ನಾಯಕತ್ವ ಗುಣವನ್ನು ಹೊಂದಿದ್ದು, ತನ್ನ ಸುತ್ತಮುತ್ತಲಿನವರ ವರ್ತನೆಯನ್ನು ಗಮನಿಸುತ್ತಾರೆ. ಈ ಜನರು ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚು ನಿಖರವಾಗಿರುತ್ತವೆ. ಇತರರೊಂದಿಗೆ ಕೆಲಸ ಮಾಡುವುದರಲ್ಲಿ ಉತ್ಸಾಹಿಗಳಾಗಿರುತ್ತಾರೆ. ಈ ವ್ಯಕ್ತಿಗಳ ಬಲವಾದ ಇಚ್ಛಾ ಶಕ್ತಿ ಹಾಗೂ ಯೋಚಿಸುವ ರೀತಿಯೇ ಈ ವ್ಯಕ್ತಿಗಳ ಕೆಲಸದ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.
  • ಅಂಗೈ ರೇಖೆಯು ಮಧ್ಯ ಮತ್ತು ತೋರು ಬೆರಳುಗಳ ನಡುವೆ ಮೇಲಕ್ಕೆ ಇದ್ದರೆ : ಅಂಗೈ ರೇಖೆ ಈ ರೀತಿಯಿದ್ದರೆ ತುಂಬಾ ಗೌರವಾನ್ವಿತ, ಪ್ರೀತಿ, ದಯೆ ಮತ್ತು ವಿಶ್ವಾಸಾರ್ಹ ವ್ಯಕ್ತಿಯಾಗಿರುತ್ತಾರೆ. ಮುಕ್ತವಾಗಿ ಮಾತನಾಡುತ್ತಾರೆ ಹಾಗೂ ಎಲ್ಲರನ್ನು ಪ್ರೀತಿಸುವ ಗುಣ ಹೊಂದಿರುತ್ತಾರೆ. ಎಲ್ಲರ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರೂ ತಮ್ಮ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಭದ್ರತೆಯನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಅದಲ್ಲದೇ ಈ ಗುಣವು ತನ್ನ ಸುತ್ತಮುತ್ತಲಿನಲ್ಲಿ ಸಕಾರಾತ್ಮಕ ವಾತಾವರಣವನ್ನು ಉಂಟು ಮಾಡುತ್ತದೆ. ಸ್ನೇಹಿತರು, ಕುಟುಂಬದವರು ಹಾಗೂ ಸಹೋದ್ಯೋಗಿಗಳಿಗೆ ಹೆಚ್ಚಿನ ಬೆಂಬಲ ನೀಡುವ ಗುಣ ಇವರಲ್ಲಿಕಾಣಬಹುದು.
  • ಅಂಗೈ ರೇಖೆಯೂ ತೋರು ಬೆರಳಿನಲ್ಲಿಯೇ ಕೊನೆಗೊಂಡರೆ : ಅಂಗೈ ರೇಖೆಯೂ ತೋರು ಬೆರಳಿನ ನಡುವೆ ಕೊನೆಗೊಂಡರೆ ಈ ವ್ಯಕ್ತಿಗಳಿಗೆ ಆತ್ಮವಿಶ್ವಾಸವೇ ಶಕ್ತಿಯಾಗಿರುತ್ತದೆ. ಇವರು ಜೀವನವನ್ನು ಹೆಚ್ಚು ಪ್ರೀತಿಸುತ್ತಾರೆ. ಈ ವ್ಯಕ್ತಿಗಳು ಒಬ್ಬಂಟಿಯಾಗಿದ್ದರೂ, ಸ್ನೇಹಿತರೊಂದಿಗೆ ಇದ್ದರೂ ಅಥವಾ ಕುಟುಂಬದವರ ಜೊತೆಗೆ ಇದ್ದರೂ ಸದಾ ಸಂತೋಷವಾಗಿರುತ್ತಾರೆ. ಇವರ ಸಂತೋಷವು ಈ ವ್ಯಕ್ತಿಗಳ ಮೇಲೆಯೇ ಅವಲಂಬಿತವಾಗಿರುತ್ತದೆ.
  • ಅಂಗೈ ರೇಖೆಯೂ ಹೆಬ್ಬೆರಳಿನ ಕಡೆಗೆ ಬಾಗಿದ್ದರೆ : ಅಂಗೈ ರೇಖೆಯೂ ಈ ರೀತಿ ಆಕಾರ ಹೊಂದಿದ್ದರೆ ಈ ವ್ಯಕ್ತಿಗಳಲ್ಲಿ ಶಾಂತಿ, ತಾಳ್ಮೆ, ಕಾಳಜಿ ಮತ್ತು ದಯಾಗುಣ ಹೆಚ್ಚಿರುತ್ತದೆ. ಇತರರು ಈ ಜನರೊಂದಿಗೆ ನಿಕಟವಾಗಿ, ಪ್ರೀತಿಯಿಂದ ಮತ್ತು ಪ್ರಾಮಾಣಿಕವಾಗಿ ಸಂವಹನ ನಡೆಸುವಲ್ಲಿ ಈ ಗುಣಗಳು ಕಾರಣವಾಗುತ್ತದೆ. ಇಂತಹ ವ್ಯಕ್ತಿಗಳು ಇತರರಿಗೆ ಸಹಾಯ ಮಾಡುವಲ್ಲಿ ಮುಂದೆ ಇರುತ್ತಾರೆ. ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಆಸಕ್ತಿ ಹೆಚ್ಚಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ