Personality Test : ನಿಮ್ಮ ಮುಖದಲ್ಲಿ ಸದಾ ನಗುವಿದೆಯೇ?ನಿಮ್ಮ ನಗುವಿನಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2024 | 11:38 AM

ನಗುವೆಂದರೆ ಎಲ್ಲರಿಗೂ ಕೂಡ ಇಷ್ಟನೇ. ಜೀವನದಲ್ಲಿ ಸದಾ ಸಂತೋಷ, ನಗುವೇ ತುಂಬಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಈ ಭೂಮಿಯ ಮೇಲೆ ಇರುವ ಮನುಷ್ಯನಿಗೆ ಮಾತ್ರ ಮಾತ್ರ ಮನಸ್ಸು ಪೂರ್ವಕವಾಗಿ ನಗುವುದಕ್ಕೆ ಸಾಧ್ಯ. ಮುಖದಲ್ಲಿ ನಗುವೊಂದಿದ್ದರೆ ಜೀವನದ ಎಂತಹ ಕಷ್ಟವನ್ನಾದರೂ ಎದುರಿಸಬಹುದು. ಆದರೆ ಈ ನಗುವಿನಿಂದಲೇ ನಿಮ್ಮ ಗುಣಸ್ವಭಾವ ಹಾಗೂ ವ್ಯಕ್ತಿತ್ವ ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದಂತೆ. ನೀವು ಯಾವ ರೀತಿ ನಗುತ್ತೀರಿ ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದಾಗಿದ್ದು, ಹಾಗಾದ್ರೆ ಆ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಮುಖದಲ್ಲಿ ಸದಾ ನಗುವಿದೆಯೇ?ನಿಮ್ಮ ನಗುವಿನಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us on

ಬದುಕಿನಲ್ಲಿ ಎಷ್ಟೇ ಟೆನ್ಶನ್ ಇರಲಿ, ಒಮ್ಮೆ ಮನಸಾರೆ ನಕ್ಕು ಬಿಡುವುದರಿಂದ ಮನಸ್ಸು ನಿರಾಳವಾಗುತ್ತದೆ. ಅದಲ್ಲದೇ, ಸರ್ವರೋಗವನ್ನು ನಿವಾರಿಸುವಲ್ಲಿ ಈ ನಗುವಿನ ಪಾತ್ರವು ಬಹುದೊಡ್ಡದು. ಸದಾ ನಗುತ್ತಿರುವ ವ್ಯಕ್ತಿಯೂ ಆರೋಗ್ಯವಂತನಾಗಿರಲು ಮಾತ್ರವಲ್ಲದೇ, ಆತ್ಮವಿಶ್ವಾಸದಿಂದ ಇರಲು ಸಾಧ್ಯ. ನಿಮ್ಮ ನಗುವು ನಿಮ್ಮ ವ್ಯಕ್ತಿತ್ವ ವನ್ನು ರಿವೀಲ್ ಮಾಡುತ್ತದೆಯಂತೆ. ನೀವು ಯಾವ ರೀತಿ ನಗುತ್ತೀರಿ ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು.

  • ಮುಗುಳು ನಗುವ ವ್ಯಕ್ತಿಗಳು : ಈ ವ್ಯಕ್ತಿಗಳು ತಮ್ಮ ಮುಗುಳು ನಗೆಯಿಂದ ಎಲ್ಲರ ಹೃದಯದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆ ಸಾವಿರ ಸಲ ಯೋಚಿಸುವ ಗುಣ ಇವರದ್ದು. ಕಷ್ಟಪಟ್ಟು ಕೆಲಸ ಮಾಡುವುದರೊಂದಿಗೆ ಕೆಲಸವು ಪೂರ್ಣ ಗೊಳ್ಳುವವರೆಗೂ ಅಷ್ಟೇ ತಾಳ್ಮೆಯನ್ನು ಹೊಂದಿರುತ್ತಾರೆ. ತನ್ನ ಸುತ್ತಮುತ್ತಲಿನವರೊಂದಿಗೆ ತಾಳ್ಮೆಯನ್ನು ಕಳೆದುಕೊಳ್ಳದೇ ವ್ಯವಹರಿಸುತ್ತಾರೆ.
  • ಜೋರಾಗಿ ನಗುವ ವ್ಯಕ್ತಿಗಳು : ಯಾವ ವ್ಯಕ್ತಿಯೂ ಜೋರಾಗಿ ನಗುತ್ತಾರೆಯೇ ಆ ವ್ಯಕ್ತಿಗಳು ದಯಾಪರ, ಉದಾರ ಮನಸ್ಸಿನವರು ಹಾಗೂ ಭಾವೋದ್ರಿಕ್ತ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಇತರರಿಗೆ ಬೆಂಬಲ ನೀಡುತ್ತಾರೆ. ಸಹಾಯ ಮಾಡುವುದರಲ್ಲಿ ಒಂದು ಕೈ ಮುಂದೆಯೇ ಎನ್ನಬಹುದು. ಈ ರೀತಿ ನಗುವ ವ್ಯಕ್ತಿಗಳು ಯಾರನ್ನು ಕೂಡ ನೋಯಿಸಲು ಇಷ್ಟ ಪಡುವುದಿಲ್ಲ. ತನ್ನ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಎಂದಿಗೂ ಮೋಸ ಮಾಡಲು ಬಯಸುವುದಿಲ್ಲ. ಪ್ರೇಮ ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುವ ಮೂಲಕ ಸಂಬಂಧವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ. ತನ್ನನ್ನು ಪ್ರೀತಿಸುವವರಿಗೆ ಹಾಗೂ ನಂಬಿದವರಿಗೆ ಯಾವತ್ತಿಗೂ ಕೂಡ ಮೋಸ ಮಾಡುವುದಿಲ್ಲ.
  • ಹಿ ಹಿ ಎಂದು ನಗುವ ವ್ಯಕ್ತಿಗಳು : ಈ ರೀತಿ ನಗುವ ವ್ಯಕ್ತಿಗಳು ಸಿಕ್ಕ ಅವಕಾಶಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಹೀಗಾಗಿ ಈ ವ್ಯಕ್ತಿಗಳನ್ನು ನಂಬುವುದು ಕಷ್ಟವೇ. ಎಲ್ಲರನ್ನು ಸುಲಭವಾಗಿ ಮೋಸ ಮಾಡುವ ಗುಣವು ಇವರದ್ದಾಗಿರುತ್ತದೆ. ತಮ್ಮ ಕಾರ್ಯ ಸಾಧನೆಗಾಗಿ ಇತರರನ್ನು ಬಳಸಿಕೊಳ್ಳುವುದೇ ಹೆಚ್ಚು.
  • ಮುಖದಲ್ಲಿ ಸದಾ ನಗು ತುಂಬಿರುವ ವ್ಯಕ್ತಿಗಳು : ಈ ವ್ಯಕ್ತಿಗಳು ಸ್ನೇಹಪರ ಗುಣದಿಂದ ಎಲ್ಲರಿಗೂ ಹತ್ತಿರವಾಗಿರುತ್ತಾರೆ. ಜೀವನದ ಪ್ರತಿಯೊಂದು ಕ್ಷಣವನ್ನು ಆನಂದದಿಂದ ಅನುಭವಿಸುವ ಈ ಜನರು ತನ್ನ ಸುತ್ತಮುತ್ತಲಿನಲ್ಲಿರುವ ವ್ಯಕ್ತಿಗಳು ಖುಷಿಯಿಂದ ಇರಬೇಕೆಂದು ಬಯಸುತ್ತಾರೆ. ಇವರ ಮನಸ್ಸಿನಲ್ಲಿ ಯಾವುದೇ ಮೋಸ, ದ್ವೇಷದ ಭಾವನೆ ಇರುವುದಿಲ್ಲ.
  • ಸಣ್ಣಗೆ ನಗುವ ವ್ಯಕ್ತಿಗಳು : ಯಾರಿಗೂ ಕೇಳದಂತೆ ಸಣ್ಣಗೆ ನಗುವ ವ್ಯಕ್ತಿಗಳಿಗೆ ಸಂಯಮ ಹಾಗೂ ತಾಳ್ಮೆ ಹೆಚ್ಚು. ಕಷ್ಟದ ಸಮಯವನ್ನು ತಾಳ್ಮೆಯಿಂದ ಎದುರಿಸುವ ಕಲೆ ಇವರಿಗೂ ಚೆನ್ನಾಗಿ ತಿಳಿದಿರುತ್ತದೆ. ಎಷ್ಟೇ ಕಷ್ಟದ ಕೆಲಸವಾದರೂ ಸರಿಯೇ ತಮ್ಮ ಕಠಿಣ ಪರಿಶ್ರಮದಿಂದಲೇ ಎಲ್ಲವನ್ನು ಮಾಡಿ ಮುಗಿಸುವ ವ್ಯಕ್ತಿತ್ವ ಇವರಾದ್ದಾಗಿರುತ್ತದೆ.
  • ಅಬ್ಬರದಿಂದ ನಗುವ ವ್ಯಕ್ತಿಗಳು : ಕೆಲವು ವ್ಯಕ್ತಿಗಳು ಅಬ್ಬರದಿಂದ ನಗುವುದನ್ನು ನೋಡಿರಬಹುದು. ಈ ವ್ಯಕ್ತಿಗಳು ನಿಜಕ್ಕೂ ಶ್ರಮಜೀವಿಗಳು. ಕಷ್ಟಪಟ್ಟು ದುಡಿದು ತಾವು ಅಂದುಕೊಂಡ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಉತ್ತಮ ಗುಣಗಳಿಂದ ಎಲ್ಲರಿಗೂ ಕೂಡ ಬೇಗನೇ ಹತ್ತಿರವಾಗುವ ಸ್ವಭಾವವು ಇವರಾದ್ದಾಗಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ