AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vidura Niti : ಈ ಜನರಿಂದ ಅಪ್ಪಿ ತಪ್ಪಿಯೂ ಸಲಹೆಗಳನ್ನು ಪಡೆಯಬೇಡಿ ಎನ್ನುತ್ತಾನೆ ವಿದುರ

ಕೆಲವೊಮ್ಮೆ ಜೀವನದ ಕಷ್ಟದ ಸನ್ನಿವೇಶಗಳಲ್ಲಿ ನಮ್ಮ ಆತ್ಮೀಯರು, ಸ್ನೇಹಿತರು ನೀಡುವ ಧೈರ್ಯ ತುಂಬಿದ ಮಾತುಗಳು, ಸಲಹೆಗಳಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಬಹುದು. ಆದರೆ ಆ ಆತ್ಮೀಯರಲ್ಲಿ ಈ ಗುಣವಿರುವುದು ವ್ಯಕ್ತಿಗಳು ಇದ್ದಾರೆಯೇ ಎಂದು ನೋಡಿಕೊಳ್ಳಿ. ಅಪ್ಪಿತಪ್ಪಿಯೂ ಈ ನಾಲ್ಕು ಜನರಿಂದ ಸಲಹೆಗಳನ್ನು ಪಡೆಯಬಾರದು. ಈ ವ್ಯಕ್ತಿಗಳ ಜೊತೆಗಿನ ಸಮಾಲೋಚನೆಯು ನಿಮ್ಮನ್ನು ತೊಂದರೆಗೆ ಸಿಲುಕಿಸಿ, ಭವಿಷ್ಯವನ್ನೂ ಹಾಳುಮಾಡಬಹುದು. ಹಾಗಾದರೆ ಆ ವ್ಯಕ್ತಿಗಳು ಯಾರು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Vidura Niti : ಈ ಜನರಿಂದ ಅಪ್ಪಿ ತಪ್ಪಿಯೂ ಸಲಹೆಗಳನ್ನು ಪಡೆಯಬೇಡಿ ಎನ್ನುತ್ತಾನೆ ವಿದುರ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Dec 17, 2024 | 10:26 AM

Share

ಪ್ರತಿಯೊಬ್ಬರ ಜೀವನದಲ್ಲಿ ಸುಖ ದುಃಖವಿದ್ದೆ ಇರುತ್ತದೆ. ಆದರೆ, ಕೆಲವರು ಸಂಕಷ್ಟದಲ್ಲೇ ಕೈ ತೊಳೆಯುತ್ತಿರುತ್ತಾರೆ. ಈ ಕಷ್ಟದ ಸಮಯದಲ್ಲಿ ಬೇರೊಬ್ಬರ ಮೇಲೆ ಅವಲಂಬಿತವಾಗುವುದು ಸಹಜ. ಈ ವ್ಯಕ್ತಿಗಳಲ್ಲಿ ತಮ್ಮ ಮುಂದಿನ ಜೀವನ ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿರುತ್ತದೆ. ಈ ಸಮಯದಲ್ಲಿ ಇನ್ನೊಬ್ಬರ ಸಲಹೆಗಳನ್ನು ಕೇಳಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಾರೆ. ಆದರೆ ನಾವು ಯಾರ ಬಳಿ ಸಲಹೆಗಳನ್ನು ಕೇಳುತ್ತಿದ್ದೇವೆ ಎನ್ನುವುದು ಮೊದಲು ಅರ್ಥ ಮಾಡಿಕೊಳ್ಳಬೇಕು. ವಿದುರನು ತನ್ನ ನೀತಿಯಲ್ಲಿ ಈ ಜನರ ಬಳಿ ಎಂದಿಗೂ ಸಲಹೆಗಳನ್ನು ಕೇಳಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದಾನೆ.

  • ಹೊಗಳುವ ವ್ಯಕ್ತಿಗಳು : ಕೆಲವರಿಗೆ ಬೇರೆಯವರನ್ನು ಹೊಗಳಿ ಅಟ್ಟಕ್ಕೆ ಏರಿಸುವ ಗುಣವಿರುತ್ತದೆ. ಇಂತಹ ಜನರು ನಿಮ್ಮ ಸುತ್ತಮುತ್ತಲಿನಲ್ಲಿದ್ದರೆ ಅವರ ಬಳಿ ಎಂದಿಗೂ ಸಲಹೆಯನ್ನು ತೆಗೆದುಕೊಳ್ಳಬಾರದು ಎನ್ನುತ್ತಾನೆ. ಈ ವ್ಯಕ್ತಿಗಳು ಯಾವಾಗಲೂ ತಮ್ಮ ಲಾಭಕ್ಕಾಗಿ ಇತರರನ್ನು ಹೊಗಳುತ್ತಾರೆ. ಈ ಜನರು ಎಂದಿಗೂ ಸರಿಯಾದ ಸಲಹೆ ನೀಡಲು ಸಾಧ್ಯವಿಲ್ಲ. ನೀವು ಏನಾದರೂ ತಪ್ಪು ಮಾಡಿದರೆ, ಅವರು ನಿಮ್ಮ ತಪ್ಪನ್ನು ಹೇಳುವುದಿಲ್ಲ. ಬದಲಿಗೆ ನೀವು ಮಾಡಿದ್ದೆಲ್ಲವು ಸರಿ ಎಂದೇ ಹೇಳುತ್ತಾರೆ. ಅತಿಯಾಗಿ ಹೊಗಳುವ ವ್ಯಕ್ತಿಗಳ ಸಲಹೆಯನ್ನು ಪಡೆಯುವುದು ಅಪಾಯಕಾರಿಯಂತೆ
  • ನಕಾರಾತ್ಮಕ ಚಿಂತನೆಯುಳ್ಳ ವ್ಯಕ್ತಿ: ಅತಿಯಾಗಿ ಯೋಚಿಸುವ ವ್ಯಕ್ತಿಗಳನ್ನು ನಿಮ್ಮ ಸುತ್ತಮುತ್ತಲಿನಲ್ಲಿ ನೋಡಿರಬಹುದು. ಈ ವ್ಯಕ್ತಿಗಳು ಜೀವನದಲ್ಲಿ ಎಷ್ಟೇ ಖುಷಿಯಿದ್ದರೂ ಕೂಡ ನರಕಾತ್ಮಕವಾಗಿ ಯೋಚಿಸುವ ಮೂಲಕ ತಮ್ಮ ಸಂತೋಷವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈ ವ್ಯಕ್ತಿಗಳ ಬಳಿ ಸಲಹೆಯನ್ನು ಕೇಳಿದರೆ ಅತಿಯಾಗಿ ಯೋಚಿಸುವುದರಿಂದ ಜೀವನದಲ್ಲಿ ಏಳಿಗೆ ಕಾಣುವ ಸಲಹೆಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಈ ವ್ಯಕ್ತಿಗಳಿಂದ ಯಾವತ್ತಿಗೂ ನಿಮ್ಮ ಜೀವನಕ್ಕೆ ಅಗತ್ಯವಾದ ಸಲಹೆಗಳನ್ನು ಪಡೆಯಲು ಹೋಗುವುದು ಸರಿಯಲ್ಲ ಎನ್ನುತ್ತಾನೆ ವಿದುರ.
  • ಆತುರದ ನಿರ್ಧಾರ ತೆಗೆದುಕೊಳ್ಳುವವರು : ಕೆಲವರಿಗೆ ಎಲ್ಲಾ ಕೆಲಸ ಕಾರ್ಯದಲ್ಲಿಯೂ ಆತುರ. ಕೆಲವೊಮ್ಮೆ ತರಾತುರಿವಾಗಿ ನಿರ್ಧಾರವನ್ನು ತೆಗೆದುಕೊಳ್ಳುವುದು ಕೂಡ ಜೀವನಕ್ಕೆ ಮುಳುವಾಗುತ್ತದೆ. ಹೀಗಾಗಿ ಮಹಾತ್ಮ ವಿದುರನು ಹೇಳುವಂತೆ ಆತುರದಿಂದ ವರ್ತಿಸುವ ಜನರಲ್ಲಿ ಸಲಹೆಯನ್ನು ಎಂದಿಗೂ ತೆಗೆದುಕೊಳ್ಳಬಾರದು. ಈ ವ್ಯಕ್ತಿಗಳು ಸಾಮಾನ್ಯವಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವು ಸಲಹೆಗಳನ್ನು ನೀಡುವಾಗ ಒಳಿತು ಕೆಡುಕುಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಈ ವಿಚಾರದಲ್ಲಿ ಇಂತಹವರಿಂದ ದೂರವಿರುವುದೇ ಉತ್ತಮ ಎಂದಿದ್ದಾನೆ.
  • ಕಡಿಮೆ ತಿಳಿದುಕೊಂಡ ವ್ಯಕ್ತಿ: ಕೆಲವರಿಗೆ ಯಾವ ವಿಷಯದ ಬಗ್ಗೆಯೂ ಏನು ಜ್ಞಾನವಿರುವುದಿಲ್ಲ. ಆದರೆ ಎಲ್ಲವು ತನಗೆ ಗೊತ್ತಿದೆ ಎಂದುಕೊಳ್ಳುತ್ತಾರೆ. ಹೀಗಾಗಿ ವಿದುರನು ತನ್ನ ನೀತಿಯಲ್ಲಿ ಕಡಿಮೆ ಬುದ್ಧಿವಂತಿಕೆ ಹೊಂದಿರುವ ಅಥವಾ ಸಂಬಂಧಪಟ್ಟ ಕ್ಷೇತ್ರದ ಬಗ್ಗೆ ಕಡಿಮೆ ಜ್ಞಾನ ಹೊಂದಿರುವ ಜನ ಬಳಿ ಜೀವನಕ್ಕೆ ಅಗತ್ಯವಾದ ಸಲಹೆಗಳನ್ನು ಕೇಳಲು ಹೋಗಬಾರದು. ಈ ಜನರಿಗೆ ಯಾವುದೇ ತಿಳುವಳಿಕೆ ಇಲ್ಲದ ಕಾರಣ ಅವರ ಮಾತುಗಳು ನಿಮ್ಮ ಬದುಕಿಗೆ ಮುಳುವಾಗುವ ಸಾಧ್ಯತೆಯಿರುತ್ತದೆ. ಈ ಜನರು ನಿಮ್ಮ ರಹಸ್ಯವಾದ ವಿಷಯಗಳನ್ನು ಇತರರಿಗೆ ಬಹಿರಂಗಪಡಿಸುವಡಿಸುವ ಸಾಧ್ಯತೆಯೇ ಹೆಚ್ಚು. ಈ ಜನರಿಂದ ಸಾಧ್ಯವಾದಷ್ಟು ದೂರವಿರುವುದೇ ಉತ್ತಮ ಎಂದು ಉಲ್ಲೇಖಿಸಿದ್ದಾನೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ