Personality Test: ನಿಮಗೆ ಇಷ್ಟವಾದ ಲಿಪ್‌ಸ್ಟಿಕ್‌ ಶೇಡ್‌ನಿಂದಲೂ ನಿಮ್ಮ ಸೀಕ್ರೆಟ್ ವ್ಯಕ್ತಿತ್ವವನ್ನು ತಿಳಿಯಬಹುದು

ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವೂ ವಿಭಿನ್ನವಾಗಿರುತ್ತದೆ. ಈ ವಿಭಿನ್ನ, ನಿಗೂಢ ವ್ಯಕ್ತಿತ್ವವನ್ನು ಇಷ್ಟದ ಬಣ್ಣ, ಕೈ ಕಟ್ಟಿ ನಿಲ್ಲುವ ಶೈಲಿ, ಪಾದ, ಮೂಗು, ಕಿವಿ, ಬಾಯಿ ಸೇರಿದಂತೆ ದೇಹಕಾರದ ಮೂಲಕ ತಿಳಿಯಬಹುದು. ಇಷ್ಟು ಮಾತ್ರವಲ್ಲದೆ ಲಿಪ್‌ಸ್ಟಿಕ್‌ ಶೇಡ್‌ನಿಂದಲೂ ವ್ಯಕ್ತಿತ್ವವನ್ನು ಅಳೆಯಬಹುದಂತೆ. ನಿಮ್ಮಿಷ್ಟದ ಲಿಪ್‌ಸ್ಟಿಕ್‌ ಶೇಡ್‌ ಆಯ್ಕೆ ಮಾಡುವ ಮೂಲಕ ನಿಮ್ಮ ಸೀಕ್ರೆಟ್‌ ಪರ್ಸನಾಲಿಟಿ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿ.

Personality Test: ನಿಮಗೆ ಇಷ್ಟವಾದ ಲಿಪ್‌ಸ್ಟಿಕ್‌ ಶೇಡ್‌ನಿಂದಲೂ ನಿಮ್ಮ ಸೀಕ್ರೆಟ್ ವ್ಯಕ್ತಿತ್ವವನ್ನು ತಿಳಿಯಬಹುದು
ವ್ಯಕ್ತಿತ್ವ ಪರೀಕ್ಷೆ
Image Credit source: Getty Images

Updated on: Aug 11, 2025 | 3:33 PM

ಹೆಣ್ಮಕ್ಕಳಿಗೆ ಮೇಕಪ್‌ ಮಾಡಿಕೊಳ್ಳುವುದೆಂದರೆ ಇಷ್ಟ. ಅದರಲ್ಲೂ ತುಟಿಗೆ ಲಿಪ್‌ಸ್ಟಿಕ್‌ (Lipstick shade) ಹಚ್ಚಿಕೊಳ್ಳುವುದೆಂದರೆ ಬಲು ಇಷ್ಟ. ಕೆಲವರಿಗೆ ಪಿಂಕ್‌ ಲಿಪ್‌ಸ್ಟಿಕ್‌ ಇಷ್ಟವಾದರೆ ಇನ್ನೂ ಕೆಲವರಿಗೆ ನ್ಯೂಡ್‌, ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಇಷ್ಟವಾಗುತ್ತದೆ. ಹೀಗೆ ನಿಮ್ಮಿಷ್ಟದ ಲಿಪ್‌ಸ್ಟಿಕ್‌ ಶೇಡ್‌ ಮೂಲಕವೂ ನೀವು ನಿಮ್ಮ ವ್ಯಕ್ತಿತ್ವವನ್ನು (Personality Test) ತಿಳಿಯಬಹುದು. ಹೌದು ಇಷ್ಟದ ಬಣ್ಣ, ಹುಟ್ಟಿದ ತಿಂಗಳು, ಕೈ ಕಟ್ಟಿ ನಿಲ್ಲುವ ಶೈಲಿ, ಪಾದ, ಮೂಗು, ಕಿವಿ, ಬಾಯಿ ಸೇರಿದಂತೆ ದೇಹಕಾರ ಮುಂತಾದ ಅಂಶಗಳಿಂದ ನಿಗೂಢ ವ್ಯಕ್ತಿತ್ವವನ್ನು ಪರೀಕ್ಷಿಸುವಂತೆ, ಲಿಪ್‌ಸ್ಟಿಕ್‌ ಶೇಡ್‌ ಮೂಲಕವೂ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಬಹುದು. ನೀವು ಧೈರ್ಯಶಾಲಿಯೇ, ವಿಶ್ವಾಸಾರ್ಹ ವ್ಯಕ್ತಿಯೇ ಎಂಬುದನ್ನು ನಿಮ್ಮಿಷ್ಟದ ಲಿಪ್‌ಸ್ಟಿಕ್‌ ಶೇಡ್‌ ಮೂಲಕ ತಿಳಿಯಿರಿ.

ನಿಮಗೆ ಇಷ್ಟವಾದ ಲಿಪ್‌ಸ್ಟಿಕ್‌ ಶೇಡ್‌ನಿಂದಲೂ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು:

ರೆಡ್‌ ಲಿಪ್‌ಸ್ಟಿಕ್: ನಿಮಗೆ ಕೆಂಪು ಲಿಪ್‌ಸ್ಟಿಕ್‌ ಇಷ್ಟ ಎಂದಾದರೆ ನೀವು ಉತ್ಸಾಹಭರಿತ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂದರ್ಥ. ನೀವು ತುಂಬಾನೇ ಧೈರ್ಯಶಾಲಿ, ಆತ್ಮವಿಶ್ವಾಸ, ದೃಢನಿಶ್ಚಯ ಮತ್ತು ಶಕ್ತಿಯುತ ವ್ಯಕ್ತಿತ್ವದವರಾಗಿರುತ್ತೀರಿ. ಕೆಂಪು ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುವ ಮಹಿಳೆಯರು ಬಹಳ ಜಾಗೃತರಾಗಿರುತ್ತಾರೆ. ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವ ಇವರು ಯಾವುದೇ ಅವಕಾಶಗಳನ್ನು ಬಿಟ್ಟುಕೊಡುವುದಿಲ್ಲ.  ಅಷ್ಟೇ ಅಲ್ಲದೆ ಇವರು ತಮ್ಮ ಸಂಗಾತಿ, ಸ್ನೇಹಿತರ ನೆಚ್ಚಿನ ವ್ಯಕ್ತಿಯಾಗಿರುತ್ತಾರೆ. ಅಲ್ಲದೆ ಇವರು ದಿಟ್ಟ ಹೆಜ್ಜೆಗಳನ್ನು ಇಡುವಲ್ಲಿ ಹೆಸರುವಾಸಿಯಾಗಿದ್ದಾರೆ.

ಬ್ರೌನ್‌ ಲಿಪ್‌ಸ್ಟಿಕ್:‌ ಕೆಲವು ಮಹಿಳೆಯರಿಗೆ ಕಂದು ಬಣ್ಣದ ಶೇಡ್‌ನ ಲಿಪ್‌ಸ್ಟಿಕ್‌ ಎಂದರೆ ಬಲು ಇಷ್ಟ. ಈ ಬಣ್ಣದ ಲಿಪ್‌ಸ್ಟಿಕ್‌ ಇಷ್ಟಪಡುವ ಮಹಿಳೆಯರು ಬಲಶಾಲಿ, ವಿಶ್ವಾಸಾರ್ಹ ಮತ್ತು ಸಾಕಷ್ಟು ಸಂಯಮದ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ. ಜೊತೆಗೆ ಇವರು ತುಂಬಾನೇ ಚುರುಕು ಬುದ್ಧಿಯನ್ನು ಸಹ ಹೊಂದಿರುತ್ತಾರೆ. ಇವರ ಹಾಸ್ಯ ಪ್ರಜ್ಞೆ, ನೇರ ಸ್ವಭಾವ  ಎಲ್ಲರನ್ನೂ ಆಕರ್ಷಿಸುತ್ತದೆ. ಇವರಿಗೆ ನಾಟಕೀಯವಾಗಿ ಇರುವುದೆಂದರೆ ಇಷ್ಟವಿಲ್ಲ. ಜೊತೆಗೆ ಇವರು ಸಂಪ್ರದಾಯಗಳು ಮತ್ತು ಕುಟುಂಬ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ
ನಿಮ್ಮ ಇಷ್ಟದ ಬಣ್ಣವೇ ತಿಳಿಸುತ್ತೆ ನೀವು ಎಂತಹ ವ್ಯಕ್ತಿಯೆಂದು
ಕೈ ಹಿಂದೆ ಕಟ್ಟಿ ನಿಲ್ಲುವ ಶೈಲಿಯೇ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವ
ಪೆನ್ನು ಹಿಡಿದುಕೊಳ್ಳುವ ಶೈಲಿಯಿಂದಲೂ ನಿಮ್ಮ ನಿಗೂಢ ವ್ಯಕ್ಯಿತ್ವ ತಿಳಿಯಬಹುದು
ನಿಮ್ಮ ಉಗುರಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ

ನ್ಯೂಡ್ ಲಿಪ್‌ಸ್ಟಿಕ್: ನ್ಯೂಡ್‌ ಶೇಡ್‌ ಲಿಪ್‌ಸ್ಟಿಕ್‌ ಸ್ಟೈಲಿಶ್‌ ಆಗಿ ಕಾಣಿಸುವುದರ ಜೊತೆದೆ ಇದು ಬಹುತೇಕ ಎಲ್ಲಾ ಉಡುಪಿನೊಂದಿಗೂ ಹೊಂದಿಕೊಳ್ಳುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಈ ಶೇಡ್‌ ಲಿಪ್‌ಸ್ಟಿಕ್‌ ಇಷ್ಟಪಡುತ್ತಾರೆ. ಇಂತಹ ಮಹಿಳೆಯರು ದಯೆ, ಹರ್ಷಚಿತ್ತದ, ಉದಾರ ಸ್ವಭಾವದವರಾಗಿರುತ್ತಾರೆ. ಇವರು ಬಾಹ್ಯ ನೋಟದಲ್ಲಿ ಕಠಿಣವಾಗಿ ಕಾಣಿಸಿದರೂ ಹೃದಯದಿಂದ ತುಂಬಾನೇ ಸಿಹಿ ಮತ್ತು ಪ್ರೀತಿ ತುಂಬಿದ ವ್ಯಕ್ತಿಯಾಗಿರುತ್ತಾರೆ. ಆದರೂ ಕೆಲವೊಂದು ಬಾರಿ ಇವರು ಸೊಕ್ಕಿನ ಸ್ವಭಾವವನ್ನು ತೋರಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ನಿಮ್ಮ ನೆಚ್ಚಿನ ಬಣ್ಣವೂ ರಿವೀಲ್‌ ಮಾಡುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

ಪಿಂಕ್‌ ಶೇಡ್ ಲಿಪ್‌ಸ್ಟಿಕ್: ಗುಲಾಬಿ ಬಣ್ಣದ ಲಿಪ್ಸ್ಟಿಕ್ ಇಷ್ಟಪಡುವ ಮಹಿಳೆಯರು ತುಂಬಾ ಶಕ್ತಿಯುತ ಮತ್ತು ಮುಗ್ಧ ಸ್ವಭಾವದವರಾಗಿರುತ್ತಾರೆ. ಅಲ್ಲದೆ ತುಂಬಾನೇ ತಮಾಷೆಯ ವ್ಯಕ್ತಿತ್ವವನ್ನು ಹೊಂದಿರುವ ಇವರು ಎಲ್ಲರೊಂದಿಗೆ ಬಹು ಬೇಗ ಹೊಂದಿಕೊಳ್ಳುತ್ತಾರೆ ಜೊತೆಗೆ ಸುಲಭವಾಗಿ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಇವರು ಸ್ನೇಹಮಯ ಸ್ವಭಾವವನ್ನು ಹೊಂದಿದವರಾಗಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ